ಮದುವೆ ಸೀರೆಗೆ ಖರ್ಚಿಲ್ಲ; ಅಮ್ಮನ ಸೀರೆಯನ್ನೇ ಉಟ್ಟ ಸೋನಾಕ್ಷಿ, ಆದರೆ ರಿಸೆಪ್ಶನ್ ಸೀರೆ ಮಾತ್ರ ಸಖತ್ ಕಾಸ್ಟ್ಲಿ
ಜೂನ್ 23ರ ಭಾನುವಾರದಂದು ನಡೆದ ಮದುವೆ ಸಮಾರಂಭದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ತಾಯಿ, ಪೂನಂ ಸಿನ್ಹಾ ಅವರ ವಿಂಟೇಜ್ ಸೀರೆ ಮತ್ತು ಆಭರಣಗಳನ್ನು ಧರಿಸಿದ್ದರು.
ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಏಳು ವರ್ಷಗಳ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ಭಾನುವಾರ, ಜೂನ್ 23 ರಂದು ವಿವಾಹವಾದಾಗ ದಂತದ ಬಣ್ಣದ ಸೀರೆಯಲ್ಲಿ ದಂತದ ಬೊಂಬೆಯಂತೆ ಕಾಣುತ್ತಿದ್ದರು.
ತನ್ನದೇ ಮದುವೆಯಾದರೂ ನಟಿ ಸರಳವಾಗೇ ಸಜ್ಜಾಗಿದ್ದು ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅದಕ್ಕಿಂತ ಹೆಚ್ಚು ಮೆಚ್ಚುಗೆ ಗಳಿಸಿದ್ದು, ಆಕೆ ತನ್ನ ತಾಯಿಯ ಸೀರೆ ಉಟ್ಟ ವಿಷಯ.
ಹೌದು, ಸೋನಾಕ್ಷಿ ಸಿನ್ಹಾ ತನ್ನ ತಾಯಿ ಪೂನಂ ಸಿನ್ಹಾ ಅವರ ಮದುವೆಯಲ್ಲಿ ಧರಿಸಿದ್ದ ಸೀರೆಯನ್ನೇ ಅಪ್ಸೈಕಲ್ ಮಾಡಿ ಧರಿಸಿದ್ದಾರೆ. ಜೊತೆಗೆ, ತಾಯಿಯ ಆಭರಣಗಳನ್ನೇ ಹಾಕಿಕೊಂಡಿದ್ದಾರೆ.
ಇನ್ನು ಆರತಕ್ಷತೆಗೆ ಕೆಂಪು ಬನಾರಸ್ ರೇಶ್ಮೆ ಸೀರೆ ಆಯ್ಕೆ ಮಾಡಿಕೊಂಡಿದ್ದರು ಸೋನಾಕ್ಷಿ. ಸಾಮಾನ್ಯವಾಗಿ ಉಳಿದವರಂತೆ ಲೆಹೆಂಗಾ ಧರಿಸದೆ ರೇಶ್ಮೆ ಸೀರೆ, ಸಿಂಧೂರ, ಮಲ್ಲಿಗೆ ಹೂವು ಧರಿಸಿದ ಸೋನಾಕ್ಷಿಯ ಆಯ್ಕೆ ಬಗ್ಗೆಯೂ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೆ 'ಚಾಂದ್ ಬುಟಿ' ಅಲಂಕೃತವಾದ ವಿಶಾಲವಾದ ಗೋಲ್ಡನ್ ಬಾರ್ಡರ್ನಿಂದ ಅಲಂಕರಿಸಲ್ಪಟ್ಟ ಈ ಬನಾರಸಿ ರೇಶ್ಮೆ ಸೀರೆಯ ಬೆಲೆ 79,800 ರುಪಾಯಿಗಳು.
ವಿರಾಟ್ ಕೊಹ್ಲಿಯನ್ನು ಕೈ ಹಿಡಿದ ನಟಿ ಅನುಷ್ಕಾ ಶರ್ಮಾ ಕೂಡಾ ತಮ್ಮ ವಿವಾಹ ಆರತಕ್ಷತೆಗೆ ಇದೇ ರೀತಿಯ ಲುಕ್ ಆಯ್ದುಕೊಂಡಿದ್ದರು ಎಂಬುದು ಗಮನಾರ್ಹ.
ಸೋನಾಕ್ಷಿ ತನ್ನ ಕೆಂಪು ರೇಶ್ಮೆ ಸೀರಿಗೆ ಹೆಚ್ಚೇನು ವರ್ಕ್ ಇಲ್ಲದ ಸಾದಾ ಬ್ಲೌಸ್, ಕೆಂಪು ಬಳೆಗಳು, ಹಸಿರು ನೆಕ್ಲೇಸ್ ಮತ್ತು ದೊಡ್ಡ ಕಿವಿಯೋಲೆ ಧರಿಸಿದ್ದರು.
ಇದರೊಂದಿಗೆ ಮೆಹಂದಿ ಎಂದರೆ ಕೈಗೆ ಸಣ್ಣ ಬುಟ್ಟಾ ಹಾಕಿಸಿಕೊಂಡು, ಹಣೆಬೊಟ್ಟು, ಸಿಂಧೂರದೊಂದಿಗೆ ಸಜ್ಜಾಗಿದ್ದ ಸೋನಾಕ್ಷಿಯ ಲುಕ್, ಬಾಲಿವುಡ್ ನಟಿ ರೇಖಾರ ಸಾಮಾನ್ಯ ಲುಕ್ಗೆ ಹೊಂದಿಕೆಯಾಗುತ್ತಿತ್ತು.