ಭಾರತವು 61ನೇ ಲಾ ಬಿನೇಲ್ ಡಿ ವೆನೆಜಿಯಾ ಕಲಾ ಪ್ರದರ್ಶನದಲ್ಲಿ 'ಬೆಸ್ಟ್ ನ್ಯಾಷನಲ್ ಪೆವಿಲಿಯನ್' ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತೀಯ ಕಲೆ ಮತ್ತು ಸೃಜನಶೀಲತೆಗೆ ದೊರೆತ ಅಪಾರ ಮನ್ನಣೆಯಾಗಿದೆ.
ಬೆಂಗಳೂರು (ನ.27): ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಸಿಕ್ಕ ಐತಿಹಾಸಿಕ ಜಯದಲ್ಲಿ, 61ನೇ ಅಂತರರಾಷ್ಟ್ರೀಯ ಕಲಾ ಪ್ರದರ್ಶನವಾದ ಲಾ ಬಿನೇಲ್ ಡಿ ವೆನೆಜಿಯಾ 2026 (La Biennale di Venezia 2026) ನಲ್ಲಿ ಭಾರತವು 'ಬೆಸ್ಟ್ ನ್ಯಾಷನಲ್ ಪೆವಿಲಿಯನ್ – ವಿಸಿಟರ್ಸ್ ಲಯನ್' (Best National Pavilion – Visitors’ Lion) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ವಿಶ್ವದಾದ್ಯಂತದ ಸಂದರ್ಶಕರು ನೀಡಿದ ಮತಗಳ ಆಧಾರದ ಮೇಲೆ ದೊರೆತ ಈ ಅಸಾಧಾರಣ ಮನ್ನಣೆಯು ಭಾರತದ ಸೃಜನಶೀಲ ಪ್ರತಿಭೆ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯ ಸಂಭ್ರಮವಾಗಿದೆ. ಜಾಗತಿಕ ಕಲಾ ರಂಗದಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯ ಹಿರಿಮೆ ಮತ್ತೊಮ್ಮೆ ಎತ್ತರಕ್ಕೆ ಏರಿದೆ. ವಿಶ್ವದಾದ್ಯಂತದ ಸಂದರ್ಶಕರು ನೀಡಿದ ಮತಗಳ ಮೂಲಕ ಲಭಿಸಿದ ಈ ಗೌರವವು, ಜಾಗತಿಕ ವೇದಿಕೆಯಲ್ಲಿ ಭಾರತೀಯ ಕಲಾವಿದರ ಸೃಜನಶೀಲತೆಗೆ ಸಂದ ದೊಡ್ಡ ಮನ್ನಣೆಯಾಗಿದೆ.
ಇಶಾ ಅಂಬಾನಿ ಸಂತಸ: 'ತಾಯಿ ನೀತಾ ಎಂ. ಅಂಬಾನಿ ಅವರ ಕನಸು ನನಸಾದ ಕ್ಷಣ'
ವೆನೆಜಿಯಾ ಬಿನೇಲ್ನಲ್ಲಿ ಭಾರತಕ್ಕೆ ಸಿಕ್ಕಿರುವ ಮನ್ನಣೆಯ ಕುರಿತು ಇಶಾ ಅಂಬಾನಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ವೆನೆಜಿಯಾ ಬಿನೇಲ್ನಲ್ಲಿ ಭಾರತಕ್ಕೆ ಸಿಕ್ಕಿರುವ ಮನ್ನಣೆಯು ಅಪಾರ ರಾಷ್ಟ್ರೀಯ ಹೆಮ್ಮೆಯ ಕ್ಷಣವಾಗಿದೆ. ಭಾರತದ ಅತ್ಯುತ್ತಮ ಅಂಶಗಳನ್ನು ಜಗತ್ತಿನ ಮುಂದೆ ತರುವುದು ಯಾವಾಗಲೂ ನನ್ನ ತಾಯಿ ನೀತಾ ಎಂ. ಅಂಬಾನಿ ಅವರ ಕನಸಾಗಿತ್ತು. ವೆನೆಜಿಯಾ ಬಿನೇಲ್ನಲ್ಲಿ ಭಾರತದ ಉಪಸ್ಥಿತಿ ಇರಬೇಕು ಎಂದು ಅವರು ದೃಢವಾಗಿ ನಂಬಿದ್ದರು, ಮತ್ತು ಆ ಕನಸನ್ನು ದೃಢನಿಶ್ಚಯ ಹಾಗೂ ಸಂಕಲ್ಪದಿಂದ ಮುನ್ನಡೆಸಿದ ಕಾರಣ ಅಂತಿಮವಾಗಿ ಭಾರತದ ಪುನರಾಗಮನ ಸಾಧ್ಯವಾಯಿತು ಎಂದಿದ್ದಾರೆ.
ಆ ಕನಸು ನನಸಾಗುವುದನ್ನು ನೋಡುವುದು ಮತ್ತು ಇಂತಹ ಅಸಾಧಾರಣ ಜಾಗತಿಕ ಮನ್ನಣೆ ಪಡೆಯುವುದು ಅತ್ಯಂತ ವಿಶೇಷವಾಗಿದೆ. ಈ ಗೌರವವು ನಮ್ಮ ಅದ್ಭುತ ಕಲಾವಿದರು ಮತ್ತು ಭಾರತದ ಪೆವಿಲಿಯನ್ಗೆ ಜೀವ ತುಂಬಲು ಒಂದಾದ ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ರಾಷ್ಟ್ರೀಯ ಪೆವಿಲಿಯನ್ ಅನ್ನು ಹಲವು ಸಂಸ್ಥೆಗಳು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ರೂಪಿಸಲಾಗಿತ್ತು. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ (Ministry of Culture) ಪ್ರಸ್ತುತಿಯಲ್ಲಿ, ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (Nita Mukesh Ambani Cultural Centre) ಮತ್ತು ಸೆರೆಂಡಿಪಿಟಿ ಆರ್ಟ್ಸ್ ಫೌಂಡೇಶನ್ (Serendipity Arts Foundation) ಸಹಯೋಗದೊಂದಿಗೆ ಮೂಡಿಬಂದ ಭಾರತದ ರಾಷ್ಟ್ರೀಯ ಪೆವಿಲಿಯನ್ ಅನ್ನು ಡಾ. ಅಮೀನ್ ಜಾಫರ್ ಅವರು ಕ್ಯೂರೇಟ್ ಮಾಡಿದ್ದಾರೆ. ಈ ಪೆವಿಲಿಯನ್ ಅಲ್ವಾರ್ ಬಾಲಸುಬ್ರಮಣಿಯಂ, ರಂಜನಿ ಶೆಟ್ಟರ್, ಸುಮಾಕ್ಷಿ ಸಿಂಗ್, ಸ್ಕರ್ಮಾ ಸೋನಮ್ ತಾಶಿ ಮತ್ತು ಆಸಿಂ ವಾಖಿಫ್ ಅವರ ಅಸಾಧಾರಣ ಕಲಾಕೃತಿಗಳನ್ನು ಪ್ರದರ್ಶಿಸಿತು. ಇತಿಹಾಸ ಸೃಷ್ಟಿಸಿ ಭಾರತಕ್ಕೆ ಹೆಮ್ಮೆ ತಂದಿರುವ ಕಲಾವಿದರು, ಪಾಲುದಾರರು ಮತ್ತು ಸಹಯೋಗಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.












