ಸೀರೆ ಸೈಡಿಗಿಟ್ಟು ಸ್ಟೈಲಿಶ್ ಜೀನ್ಸ್ ಡ್ರೆಸ್ನಲ್ಲಿ ಶೋಭಾ ಶೆಟ್ಟಿ ಹಾಟ್ಲುಕ್, ಫ್ಯಾನ್ಸ್ ಫಿದಾ!
ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಕಿರುತೆರೆಯಲ್ಲಿ ಈಗ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಯಾವಾಗ್ಲೂ ಸೀರೆಯುಟ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳೋ ಶೋಭಾ ಶೆಟ್ಟಿ ಇತ್ತೀಚಿಗೆ ಸ್ಟೈಲಿಶ್ ಜೀನ್ಸ್ ಡ್ರೆಸ್ನಲ್ಲಿ ಬೋಲ್ಡ್ ಫೋಸ್ ಕೊಟ್ಟಿದ್ದಾರೆ.
ಕನ್ನಡತಿ ಶೋಭಾ ಶೆಟ್ಟಿ, ತೆಲುಗು ಬಿಗ್ಬಾಸ್ 7ರಲ್ಲಿ ಭಾಗವಹಿಸಿದ ನಂತರ ಹೆಚ್ಚು ಫೇಮಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ.
ಆಗಾಗ ಇನ್ಸ್ಟಾಗ್ರಾಂನಲ್ಲಿ ಮಾಡರ್ನ್ ಹಾಗೂ ಟ್ರೆಡಿಶನಲ್ ಲುಕ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಯಾವಾಗ್ಲೂ ಸೀರೆಯುಟ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳೋ ಶೋಭಾ ಶೆಟ್ಟಿ ಇತ್ತೀಚಿಗೆ ಜೀನ್ಸ್ ಡ್ರೆಸ್ನಲ್ಲಿ ಹಾಟ್ ಲುಕ್ ಕೊಟ್ಟಿದ್ದಾರೆ.
ನೆಟ್ಟಿಗರು ಫೋಟೋಗೆ ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ಲುಕ್ಕಿಂಗ್ ಸೋ ಕ್ಯೂಟ್, ವೆರಿ ನೈಸ್, ಬೆಸ್ಟ್ ಡ್ರೆಸ್ಸಿಂಗ್ ಎಂದೆಲ್ಲಾ ಹೊಗಳಿದ್ದಾರೆ.
ಮತ್ತೆ ಕೆಲವರು ಬಾರ್ಬಿ ಡಾಲ್ನಂಗೆ ಕಾಣ್ತಿದ್ದೀರಿ, ಬ್ಯಾಕ್ ಲುಕ್ ಸೂಪರ್, ಸ್ಟೈಲಿಶ್ ಕ್ವೀನ್ ಎಂದೆಲ್ಲಾ ಹೊಗಳಿ ಕಮೆಂಟಿಸಿದ್ದಾರೆ.
ಕನ್ನಡದಲ್ಲಿ ನಟಿ ಮೊದಲು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇದರಲ್ಲಿ ಶೋಭಾ ಶೆಟ್ಟಿ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 6 ವರ್ಷಗಳಿಗೂ ಅಧಿಕ ಕಾಲ ಕಲರ್ಸ್ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಪ್ರಸಾರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ ತನು ಪಾತ್ರದಲ್ಲಿ ನಟಿಸಿದ್ದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಾವಗುತ್ತಿದ್ದ ರುಕ್ಕು ಧಾರಾವಾಹಿಯಲ್ಲೂ ಶೋಭಾ ಶೆಟ್ಟಿ ಕೆಲ ತಿಂಗಳ ಕಾಲ ನಟಿಸಿದರು. ಈ ಸೀರಿಯಲ್ನ ಟಿಆರ್ಪಿ ಚೆನ್ನಾಗಿಲ್ಲವಾದ ಕಾರಣ ಧಾರಾವಾಹಿಯಿಂದ ಹೊರ ನಡೆದರು.
ಆ ನಂತರ ನಟಿ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಲು ಆರಂಭಿಸಿದರು. ಇವರು ಅಭಿನಯಿಸಿದ 'ಕಾರ್ತಿಕ ದೀಪಂ' ಸೀರಿಯಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ಶೋಭಾ ಶೆಟ್ಟಿ ಅವರನ್ನು ಬಿಗ್ಬಾಸ್ಗೆ ಆಯ್ಕೆ ಮಾಡಲಾಗಿತ್ತು.
ಬಿಗ್ಬಾಸ್ ಮನೆ ಸೇರಿದಾಗಿನಿಂದಲೂ ತಮ್ಮ ಬಾಯಿ ಬೊಂಬಾಯಿಯಿಂದಾಗಿ ಶೋಭಾ ಶೆಟ್ಟಿ, ತೆಲುಗು ಟ್ರೋಲ್ ಪೇಜ್ಗಳಲ್ಲಿ ಸಖತ್ ಟ್ರೋಲ್ ಆಗಿದ್ದರು.