ಬ್ಲ್ಯಾಕ್ ಜಾಕೆಟ್ ಧರಿಸಿ ಬುಲೆಟ್ ಏರಿ ಬಂದ ಭೂಮಿ ಶೆಟ್ಟಿ, ಬೋಲ್ಡ್ ಲುಕ್ಗೆ ಸುಸ್ತಾದ್ರು ಪಡ್ಡೆ ಹೈಕ್ಳು!
ಬಿಗ್ ಬಾಸ್ ಸ್ಪರ್ಧಿ ಹಾಗೂ ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಭೂಮಿ ಶೆಟ್ಟಿ. ಯಾವಾಗ್ಲೂ ತುಂಡುಡುಗೆ ಹಾಕ್ಕೊಂಡು ಹಾಟ್ ಲುಕ್ ಕೊಟ್ಟು ಎಲ್ಲರ ಗಮನ ಸೆಳೆಯುತ್ತಾರೆ. ಇತ್ತೀಚಿಗೆ ಬುಲೆಟ್ ಏರಿ ಬೋಲ್ಡ್ ಫೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ಬಳಿಕ ಬಿಗ್ ಬಾಸ್ ಸೀಸನ್ 7ರಲ್ಲಿ ಮಿಂಚಿದ ರಾಯಲ್ ಶೆಟ್ಟಿ ಎಂದೇ ಖ್ಯಾತಿ ಪಡೆದ ನಟಿ ಭೂಮಿ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರ್ತಾರೆ.
ಮಾಡರ್ನ್ ಹಾಗೂ ಟ್ರೆಡಿಶನಲ್ ಲುಕ್ನಲ್ಲಿ ತಮ್ಮ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿರ್ತಾರೆ. ಅದರಲ್ಲೂ ಭೂಮಿ ಶೆಟ್ಟಿ ಬೋಲ್ಡ್ ಲುಕ್ನಿಂದಾನೇ ಸುದ್ದಿಯಾಗೋದು ಹೆಚ್ಚು.
ಇದೀಗ ಭೂಮಿ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ ಬುಲೆಟ್ ಏರಿ ಬೋಲ್ಡ್ ಫೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಬ್ಲ್ಯಾಕ್ ಡ್ರೆಸ್, ಬ್ಲ್ಯಾಕ್ ಜಾಕೆಟ್ ತೊಟ್ಟು ವಿಚಿತ್ರ ಹೇರ್ಸ್ಟೈಲ್ ಮಾಡ್ಕೊಂಡು ರಾಯಲ್ ಎನ್ಫೀಲ್ಡ್ ಏರಿದ್ದಾರೆ. ಬ್ಲ್ಯಾಕ್ ಬ್ಯೂಟಿಯ ಹಾಟ್ಲುಕ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ಒಬ್ಬರು, 'ಬರ್ತಾ ಬರ್ತಾ ತುಂಬಾ ಚೇಂಜ್ ಆಗೋದ್ರಿ ಭೂಮಿ ನೀವು' ಎಂದಿದ್ದಾರೆ. ಮತ್ತೆ ಕೆಲವರು ಬೆಂಕಿ, ಕ್ಲಾಸೀ, ಬ್ಲ್ಯಾಕ್ ಬ್ಯೂಟಿ, ಸೂಪರ್, ಡಾರ್ಲಿಂಗ್, ಎಂದೆಲ್ಲಾ ಹೊಗಳಿದ್ದಾರೆ.
ಕನ್ನಡದಲ್ಲಿ ಕಿನ್ನರಿ ಧಾರಾವಾಹಿ ಬಳಿಕ ತೆಲುಗಿನ 'ನಿನ್ನೆ ಪೆಳ್ಳಾಡಾತಾ' ಹಾಗೂ 'ಅಕ್ಕ ಚೆಲುಲು' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು. ಇದೀಗ ಸಿನಿಮಾಗಳಲ್ಲಿ ಮಿಂಚಲು ರೆಡಿಯಾಗ್ತಿದ್ದಾರೆ ಭೂಮಿ.
ಕಿನ್ನರಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕ ಪ್ರವೇಶಿಸಿದ ಭೂಮಿ ಶೆಟ್ಟಿ ಕಿನ್ನರಿಯಾಗಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು. ಇದಾದ ನಂತರ ಅವರು ತಮಿಳು, ತೆಲುಗು ಸೀರಿಯಲ್ ಗಳಲ್ಲೂ ಸಹ ನಟಿಸಲು ಆರಂಭಿಸಿದರು.
ಬಿಗ್ ಬಾಸ್ ಬಂದ ಮೇಲೆ. ಆಕೆಯ ರಿಯಲ್ ಲೈಫ್, ಮುಗ್ಧತೆ, ಆಟ ಎಲ್ಲವೂ ಸೇರಿ ಭೂಮಿ ಶೆಟ್ಟಿಯನ್ನು ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಮಾಡಿದ್ದಂತೂ ನಿಜ. ಸದ್ಯಕ್ಕೆ ಭೂಮಿ ಶೆಟ್ಟಿ ಸಿನಿಮಾ ರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.