ಸ್ಯಾರಿಯುಟ್ಟು ಬಾಸ್ ಲೇಡಿ ಲುಕ್ನಲ್ಲಿ ಅನುಪಮಾ ಗೌಡ, ನಿತ್ಯಾ ಮೆನನ್ ಥರ ಕಾಣ್ತಿದ್ದೀರಿ ಎಂದ ಫ್ಯಾನ್ಸ್
ಕಿರುತೆರೆಯಲ್ಲಿ ಕಮಾಲ್ ಮಾಡಿ ಹಿರಿತೆರೆಯತ್ತ ಮುಖ ಮಾಡಿದ ನಟಿ ಅನುಪಮಾ ಗೌಡ. ನಟನೆ ಮಾತ್ರವಲ್ಲ ನಿರೂಪಣೆಯಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಬಾಸ್ ಲೇಡಿ ಲುಕ್ನಲ್ಲಿ ಮಿಂಚಿದ್ದಾರೆ.
ಕಿರುತೆರೆಯಲ್ಲಿ ಕಮಾಲ್ ಮಾಡಿ ಹಿರಿತೆರೆಯತ್ತ ಮುಖ ಮಾಡಿದ ನಟಿ ಅನುಪಮಾ ಗೌಡ. ನಟನೆ ಮಾತ್ರವಲ್ಲ ನಿರೂಪಣೆಯಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇತ್ತೀಚಿಗೆ ಬಾಸ್ ಲೇಡಿ ಲುಕ್ನಲ್ಲಿ ಮಿಂಚಿದ್ದಾರೆ.
ನಿರೂಪಕಿಯಾಗಿ ಎಲ್ಲರ ಮನಸ್ಸು ಗೆದ್ದಿರುವಾಕೆ ಅನುಪಮಾ ಗೌಡ. ಮೊದಲು ಸೀರಿಯಲ್ನಲ್ಲಿ ಅಭಿನಯಿಸುತ್ತಿದ್ದು,ಬಿಗ್ಬಾಸ್ಗೆ ಹೋಗಿ ಬಂದ ನಂತರ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಎಲ್ಲರ ಮನಗೆಲ್ಲುತ್ತಿದ್ದಾರೆ.
ಇತ್ತೀಚಿಗೆ ತಿಳಿ ಹಸಿರು ಬಣ್ಣದ ಕಾಟನ್ ಸೀರೆಯುಟ್ಟು, ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಬಾಸ್ ಲೇಡಿ ಲುಕ್ನಲ್ಲಿ ಮಿಂಚಿದ್ದಾರೆ. ಅನುಪಮಾ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೊಗಳಲು ಪದಗಳೇ ಸಾಲವು, ಸೋ ಕ್ಯೂಟ್, ಬ್ಯೂಟಿಫುಲ್, ಲೇಡಿ ಬಾಸ್, ನಮ್ಮ ಸೂಪರ್ ವುಮೆನ್, ಪ್ರೆಟ್ಟೀ, ಸ್ಟನಿಂಗ್ ಎಂದೆಲ್ಲಾ ಹೊಗಳಿದ್ದಾರೆ.
ಮತ್ತೆ ಕೆಲವರು, 'ಮೇಡಂ ನೀವೆಂದು ಗೊತ್ತೇ ಆಗಿಲ್ಲ. ನಾನು ಯಾರೋ ಟೈಟಾನಿಕ್ ಹೀರೋಯಿನ್ ಅನ್ಕೊಂಡೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, 'ನನ್ನ ಮದ್ವೆ ಆಗ್ತೀರಾ' ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಅಭಿಮಾನಿ, 'ನಿತ್ಯಾ ಮೆನನ್ ಥರಾ ಕಾಣ್ತಿದ್ದೀರಿ' ಎಂದಿದ್ದಾರೆ. ಇನ್ನೊಬ್ಬರು ನಟಿ ಮೃಣಾಲ್ ಠಾಕೂರ್ಗೆ ಹೋಲಿಸಿದ್ದಾರೆ.
ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ನಟಿ ಅನುಪಮಾ ಗೌಡ. ಕನ್ನಡದ ಕಿರುತೆರೆ ನಟಿ 'ಅಕ್ಕ' ಸೀರಿಯಲ್ನಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ಎರಡು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದವರು.
ಆ ನಂತರ ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.
ಅನುಪಮಾ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿತ್ತು.
ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಾಯಕಿಯಾಗಿ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.