ಬನಾರಸ್ ಸೀರೆ, ಡೈಮಂಡ್ ಬ್ರೇಸ್ಲೆಟ್ ಮೂಲಕ ಯುವತಿಯರನ್ನೇ ನಾಚಿಸಿದ ನೀತಾ ಅಂಬಾನಿ
ಇದು ನೀತಾ ಅಂಬಾನಿಯಾ? ಹಲವರು ಈ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ. ಕಾರಣ ನೀತಾ ಅಂಬಾನಿ ವಯಸ್ಸು ಇಳಿಕೆಯಾಗುತ್ತಿದೆ, ಸೌಂದರ್ಯ ಹೆಚ್ಚುತ್ತಿದೆ. ಇದೀಗ ನೀತಾ ಅಂಬಾನಿ ಬನಾರಸ್ ಸೀರೆ, ಡೈಮಂಡ್ ಬ್ರೇಸ್ಲೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಫ್ಯಾಶನ್, ಫಿಟ್ನೆಸ್, ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ. ರಿಲಯನ್ಸ ಫೌಂಡೇಶನ್ ಸೇರಿದಂತೆ ಹಲವು ಸಂಸ್ಥೆಗಳ ಜವಾಬ್ದಾರಿ ನಿರ್ವಹಿಸುವ ನೀತಾ ಅಂಬಾನಿ ಇದೀಗ ತಮ್ಮ ಫ್ಯಾಶನ್ ಹಾಗೂ ಸೌಂದರ್ಯದಿಂದ ಯುವತಿಯರನ್ನೇ ನಾಚಿಸಿದ್ದಾರೆ. ನೀತಾ ಅಂಬಾನಿಯ ಹೊಸ ಫ್ಯಾಶನ್ ಫೋಟೋಗಳು ಭಾರಿ ಸದ್ದುು ಮಾಡುತ್ತಿದೆ. ಕಾರಣ ನೀತಾ ಅಂಬಾನಿ ಬನಾರಸ್ ಸೀರೆ ಹಾಗೂ ಡೈಮಂಡ್ ಬ್ರೇಸ್ಲೆಟ್ ಮೂಲಕ ಕಾಣಿಸಿಕೊಂಡಿದ್ದಾರೆ. ಇದಕ್ಕೆ ತಕ್ಕಂತೆ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ.
ಹೊಸ ಹೇರ್‌ಸ್ಟೈಲ್, ಹೊಸ ವಿನ್ಯಾಸ, ಹೊಸ ಡೈಮಂಡ್ ಬ್ರಾಸ್ಲೆಟ್ ಹಾಗೂ ಹೊಸ ಬನಾರಸ್ ಸೇರಿ ಮೂಲಕ ನೀತಾ ಅಂಬಾನಿ ಫೋಟೋಶೂಟ್ ಮಾಡಿಸಿದ್ದಾರೆ. ನೀತಾ ಅಂಬಾನಿಗೆ ಹೈರ್ ಡೈಸೈನ್ ಮಾಡಿದ ಸೆಲೆಬ್ರೆಟಿ ಹೇರ್ ಸ್ಟೈಲೀಶ್ ಯಿಯಾನ್ನಿ ಸಪತೋರಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಕಾರಣ ಸೀರೆ, ಹೇರ್‌ಸ್ಟೈಲ್ ಹಾಗೂ ಆಭರಣ ನೀತಾ ಅಂಬಾನಿ ಸೌಂದರ್ಯ ಹೆಚ್ಚಿಸಿದೆ.
ನೀತಾ ಅಂಬಾನಿ ಕೇಶ ವಿನ್ಯಾಸದಲ್ಲಿ ಸ್ವದೇಶ್ ಬ್ರ್ಯಾಂಡ್‌ನ ಎರಡು ಬ್ರೂಚ್ ಬಳಸಲಾಗಿದೆ. ಭಾರತೀಯ ಕರಕುಶಲತೆ ಸಾರುವ ವಿನ್ಯಾಸ ಸೌಂದರ್ಯ ಡಬಲ್ ಮಾಡಿದೆ. ರೋಸ್ ಕಟ್ ಡೈಮಂಡ್ ಹಾಗೂ ಹೂವಿನ ಮಾದರಿಯ ಬ್ರೂಚ್ ಬಳಸಲಾಗಿದೆ. ವಜ್ರದ ಕಿವಿಯೋಲೆ, ಪಚ್ಚೆ ಡೈಮಂಡ್ ಕಟ್ ಬ್ರೇಸ್ಲೆಟ್ ಹಾಗೂ ದೊಡ್ಡದಾದ ಪೆಡೆಂಟ್ ಹೊಂದಿರು ನೆಕ್‌ಪೀಸ್ ಧರಿಸಿದ್ದಾರೆ. ಇದು ನೀತಾ ಅಂಬಾನಿಯ ಸೌಂದರ್ಯ ಹೆಚ್ಚಿಸಿದೆ. ಜೊತೆಗೆ ಹೊಸ ಫ್ಯಾಶನ್ ನೀತಾ ಅಂಬಾನಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಿದೆ.
ನೀತಾ ಅಂಬಾನಿ ಧರಿಸಿರುವ ಬನಾಸರ್ ಹ್ಯಾಂಡ್ಲೂಮ್ ಸೀರೆ, ಗೋಲ್ಡನ್ ಬ್ರೊಕ್ಯಾಡ್ ಎಂಬ್ರಾಯಿಡರಿ ಡಿಸೈನ್ ಹೊಂದಿದೆ. ಬಾರ್ಡರ್ ಪಟ್ಟಿ ಹಾಗೂ ಗ್ರೀನ್ ಶೇಡ್ ಹೊಂದಿರುವ ವಿನ್ಯಾಸದ ಸೀರೆಗೆ ಮ್ಯಾಚಿಂಗ್ ಬ್ಯಾಕ್‌ಲೆಸ್ ಡಿಸೈನ್ ಗ್ರೀನ್ ಸಿಲ್ಕ್ ಬ್ಲೌಸ್ ಧರಿಸಿದ್ದಾರೆ. ವೈಡ್ ಯು ನೆಕ್‌ಲೈನ್ ಹಾಗೂ ಹಾಫ್ ಲೆಂತ್ ಸ್ಲೀವ್ಸ್ ನೀತಾ ಅಂಬಾನಿಗೆ ಒಪ್ಪುವಂತಿದೆ.
ನೀತಾ ಅಂಬಾನಿ ಪ್ರತಿ ಕಾರ್ಯಕ್ರಮ, ಹಬ್ಬಗಳಿಗೆ ಅದಕ್ಕೆ ತಕ್ಕಂತೆ ಡ್ರೆಸ್ ವಿನ್ಯಾಸ ಮಾಡಿಸುತ್ತಾರೆ. ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ನೀತಾ ಅಂಬಾನಿ ಸೀರೆ, ನಕ್ಲೆಸ್ ಬಾರಿ ಸದ್ದು ಮಾಡಿತ್ತು. ಫ್ಯಾಶನ್ ವಿಚಾರದಲ್ಲಿ ನೀತಾ ಅಂಬಾನಿ ಹಲವ ಯುವತಿಯರನ್ನೇ ನಾಚಿಸುತ್ತಾರೆ. ಫ್ಯಾಶನ್ ಸೆನ್ಸ್ ಜೊತೆಗೆ ಫಿಟ್ನೆಸ್ ಬಗ್ಗೆಯೂ ಅಷ್ಟೇ ಕಾಳಜಿ ವಹಿಸುತ್ತಾರೆ.