61ರ ಹರೆಯದಲ್ಲಿಯೂ ಫಿಟ್ ಆಗಿರಲು ನೀತಾ ಅಂಬಾನಿ ಲಕ್ಷ ಲಕ್ಷ ಖರ್ಚು ಮಾಡ್ತಾರೆ. ಅವರ ಫಿಟ್ನೆಸ್ ಟ್ರೈನರ್ ವಿನೋದ್ ಚನ್ನಾ ಅವರ ಶುಲ್ಕ ಎಷ್ಟು?
ಅಂಬಾನಿ ಕುಟುಂಬ ಭಾರತದ ಅತಿ ಶ್ರೀಮಂತ ಕುಟುಂಬಗಳಲ್ಲಿ ಒಂದು. ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಇಬ್ಬರೂ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಈಗ ಸೋಶಿಯಲ್ ಮೀಡಿಯಾದಲ್ಲಿ ಅಂಬಾನಿ ಕುಟುಂಬದ ಆರೋಗ್ಯದ ಬಗ್ಗೆ ಚರ್ಚೆ ನಡೀತಿದೆ. ಮುಖೇಶ್ ಅಂಬಾನಿ ಅವರ ಕಿರಿಯ ಮಗ ಆನಂದ್ ಅಂಬಾನಿ ತೂಕ ಹೆಚ್ಚಳದಿಂದಾಗಿ ಆಗಾಗ್ಗೆ ಟೀಕೆಗೆ ಒಳಗಾಗ್ತಿದ್ರು. ಆದರೆ 2016 ರಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವಂತೆ ಆನಂದ್ 108 ಕೆಜಿ ತೂಕ ಇಳಿಸಿಕೊಂಡರು. ಕೇವಲ 18 ತಿಂಗಳಲ್ಲಿ ಆನಂದ್ ಈ ಸಾಧನೆ ಮಾಡಿದ್ರು. ಇದಕ್ಕೆ ಪ್ರಸಿದ್ಧ ಫಿಟ್ನೆಸ್ ತರಬೇತುದಾರ ವಿನೋದ್ ಚನ್ನಾ ಸಹಾಯ ಮಾಡಿದ್ರು. ಈಗ 61 ವರ್ಷದ ನೀತಾ ಅಂಬಾನಿ ಕೂಡ ತಮ್ಮ ಫಿಟ್ನೆಸ್ ಗುಟ್ಟುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿನೋದ್ ಚನ್ನಾ ಅವರೇ ನೀತಾ ಅಂಬಾನಿ ಅವರಿಗೂ ಫಿಟ್ನೆಸ್ ತರಬೇತಿ ನೀಡ್ತಿದ್ದಾರೆ. ವಿನೋದ್ ಚನ್ನಾ ಅವರ ಶುಲ್ಕ ಎಷ್ಟು?
ನೀತಾ ಅಂಬಾನಿ, ಕುಮಾರ್ ಮಂಗಳಂ ಬಿರ್ಲಾ, ಅನನ್ಯಾ ಬಿರ್ಲಾ ಮುಂತಾದ ಪ್ರಮುಖ ಉದ್ಯಮಿಗಳಿಗೆ ಮತ್ತು ಜಾನ್ ಅಬ್ರಹಾಂ, ಶಿಲ್ಪಾ ಶೆಟ್ಟಿ, ಹರ್ಷವರ್ಧನ್ ರಾಣೆ, ವಿವೇಕ್ ಓಬೆರಾಯ್, ಅರ್ಜುನ್ ರಾಂಪಾಲ್ ಸೇರಿದಂತೆ ಹಲವು ಬಾಲಿವುಡ್ ತಾರೆಯರಿಗೆ ವಿನೋದ್ ಚನ್ನಾ ಫಿಟ್ನೆಸ್ ತರಬೇತಿ ನೀಡ್ತಾರೆ. ವರದಿಗಳ ಪ್ರಕಾರ, ಚನ್ನಾ ಅವರ ಜಿಮ್‌ನಲ್ಲಿ 12 ತರಗತಿಗಳಿಗೆ 1.5 ಲಕ್ಷ ರೂ. ಮತ್ತು ಒಬ್ಬ ಕ್ಲೈಂಟ್‌ಗೆ ಇಡೀ ದಿನದ ತರಬೇತಿಗೆ 2 ರಿಂದ 2.5 ಲಕ್ಷ ರೂ. ಶುಲ್ಕ ವಿಧಿಸುತ್ತಾರೆ. ಹಾಗಾಗಿ ನೀತಾ ಅಂಬಾನಿ ತಮ್ಮ ವರ್ಕೌಟ್‌ಗಳಿಗೆ ತಿಂಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡ್ತಾರೆ.
ಭಾರತದ ಟಾಪ್ ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಲ್ಲಿ ವಿನೋದ್ ಚನ್ನಾ ಒಬ್ಬರು. 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಳ್ಳಲು ಆನಂದ್ ಅಂಬಾನಿಗೆ ಸಹಾಯ ಮಾಡಿದ ನಂತರ ಚನ್ನಾ ಹೆಚ್ಚು ಜನಪ್ರಿಯರಾದರು. ಒಂದು ಕಾಲದಲ್ಲಿ ವಿನೋದ್ ಚನ್ನಾ ಕೂಡ ತೂಕದ ಕಾರಣದಿಂದಾಗಿ ಟೀಕೆಗೆ ಒಳಗಾಗಿದ್ದರು. ಆದರೆ ಅದು ತೂಕ ಕಡಿಮೆ ಇದ್ದಿದ್ದಕ್ಕಾಗಿ ಎಂದು ಅವರು ಹೇಳುತ್ತಾರೆ. ಬೆಳೆಯುತ್ತಿದ್ದಾಗ ತನಗೆ ಪೌಷ್ಟಿಕಾಂಶದ ಕೊರತೆ ಇತ್ತು ಮತ್ತು ಆಗಾಗ್ಗೆ ಊಟವನ್ನು ಬಿಟ್ಟುಬಿಡುತ್ತಿದ್ದೆ ಎಂದು ಚನ್ನಾ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಫಿಟ್ನೆಸ್ ತರಬೇತುದಾರರಾಗುವ ಮೊದಲು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದಾಗಿ ಚನ್ನಾ ಈ ಹಿಂದೆ ಹೇಳಿದ್ದಾರೆ.


