ಭಾಗಲ್ಪುರಿ ರೇಷ್ಮೆ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ, ನೆಕ್ಲೇಸ್ ಬೆಲೆ ಎಷ್ಟೂಂತ ತಲೆಕೆಡಿಸಿಕೊಂಡ ನೆಟ್ಟಿಗರು!
ನೀತಾ ಅಂಬಾನಿ ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಯಶಸ್ವೀ ಉದ್ಯಮದ ಹೊರತಾಗಿ, ನೀತಾ ತಮ್ಮ ಅಪ್ರತಿಮ ಸೌಂದರ್ಯ ಮತ್ತು ಬೆರಗುಗೊಳಿಸುವ ಫ್ಯಾಷನ್ ಸೆನ್ಸ್‌ನಿಂದ ಫೇಮಸ್ ಆಗಿದ್ದಾರೆ. ಇತ್ತೀಚಿಗೆ ತಮ್ಮ ಕಲ್ಚರಲ್ ಸೆಂಟರ್‌ನ ಕಾರ್ಯಕ್ರಮದಲ್ಲಿ ನೀತಾ ಭಾಗ್‌ಲ್ಪುರಿ ರೇಷ್ಮೆ ಸೀರೆ ಹಾಗೂ ಗ್ರ್ಯಾಂಡ್ ನೆಕ್ಲೇಸ್ ಧರಿಸಿ ಎಲ್ಲರ ಗಮನ ಸೆಳೆದ್ರು.
ನೀತಾ ಅಂಬಾನಿ ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ತಮ್ಮ ವೈವಿಧ್ಯಮಯ ಕೆಲಸ ಮತ್ತು ಯಶಸ್ಸಿಗೆ ಸಾಕಷ್ಟು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಇವುಗಳ ಹೊರತಾಗಿ, ನೀತಾ ತಮ್ಮ ಅಪ್ರತಿಮ ಸೌಂದರ್ಯ ಮತ್ತು ಬೆರಗುಗೊಳಿಸುವ ಫ್ಯಾಷನ್ ಸೆನ್ಸ್‌ನಿಂದ ಫೇಮಸ್ ಆಗಿದ್ದಾರೆ.
ಭಾರತೀಯ ಸಾಂಪ್ರದಾಯಿಕ ಉಡುಗೆಗಳಿಂದ ಆರಂಭಿಸಿ ವಿವಿಧ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಫ್ಯಾಷನೆಬಲ್ ಬಟ್ಟೆಗಳನ್ನು ಸಹ ನೀತಾ ಅಂಬಾನಿ ಧರಿಸುತ್ತಾರೆ, ನೀತಾ ಅಂಬಾನಿಯ ದಿರಿಸುಗಳು ಎಲ್ಲಾ ಪಾರ್ಟಿ, ಸಮಾರಂಭಗಳಲ್ಲಿ ಎಲ್ಲರ ಗಮನ ಸೆಳೆಯುತ್ತದೆ.
ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಪ್ರಾರಂಭದ ಮೊದಲ ವರ್ಷದ ವಾರ್ಷಿಕೋತ್ಸವದಲ್ಲಿ ಈ ಕಣ್ಮನ ಸೆಳೆಯುವ ಭಾಗಲ್ಪುರಿ ರೇಷ್ಮೆ ಸೀರೆ, ಗ್ರ್ಯಾಂಡ್ ನೆಕ್ಲೇಸ್ ಧರಿಸಿದ್ದರು. ಇದನ್ನು ರಿಲಯನ್ಸ್ ಫೌಂಡೇಶನ್‌ನ ಸ್ವದೇಶದಿಂದ ಸುಜಾನಿ ಟಸ್ಸಾರ್ ರೇಷ್ಮೆ ಸೀರೆಯಾಗಿತ್ತು.
ಭಾಗಲ್ಪುರಿ ರೇಷ್ಮೆ ಸೀರೆಯು ಬಿಹಾರದ ಸಂಸ್ಕೃತಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಈ ಸೀರೆಯನ್ನು ಉಡುವ ಮೂಲಕ ನೀತಾ ಅಂಬಾನಿ ಕರಕುಶಲತೆಯ ಬಗ್ಗೆ ತಮ್ಮ ಪ್ರೀತಿಯನ್ನು ತೋರಿಸಿದರು. ಸೀರೆಯು ಸುಂದರವಾದ ಥ್ರೆಡ್‌ವರ್ಕ್‌ನ್ನು ಒಳಗೊಂಡಿ. ನೀಲಿ ಬಣ್ಣದ ರೇಷ್ಮೆ ಸೀರೆ
ಎಲ್ಲರನ್ನೂ ಬೆರಗುಗೊಳಿಸುವಂತಿತ್ತು.
ನೀತಾ ತನ್ನ ಭಾಗಲ್ಪುರಿ ರೇಷ್ಮೆ ಸೀರೆಯನ್ನು ಮುತ್ತು ಮತ್ತು ಹೊಳೆಯುವ ಕಡುಗೆಂಪು ರತ್ನಗಳಿಂದ ರಚಿಸಲಾದ ಮೂರು-ಪದರದ ಗುಟ್ಟಪುಸಲು ನೆಕ್ಲೇಸ್‌ನೊಂದಿಗೆ ಪೇರ್ ಮಾಡಿದ್ದರು.. ಜೊತೆಗೆ, ಕೆಂಪು ರತ್ನದ ಕಲ್ಲುಗಳು, ಎಂಬೆಡೆಡ್ ಸ್ಟಡ್ ಕಿವಿಯೋಲೆಗಳು, ಮುತ್ತು-ಹೊದಿಕೆಯ ಬಳೆ, ಉಂಗುರವನ್ನು ಧರಿಸಿದ್ದರು.
NMACCಯ ವಾರ್ಷಿಕೋತ್ಸವದ ಈ ಹಿಂದಿನ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಗುಲಾಬಿ ಬಣ್ಣದ ಲ್ಯಾವೆಂಡರ್-ಟೋನ್ ಬನಾರಸಿ ಸೀರೆಯನ್ನು ಧರಿಸಿದ್ದರು.ಮಲ್ಬೆರಿ ರೇಷ್ಮೆ ಸೀರೆಯು ಗೋಲ್ಡನ್ ಝರಿ ಕೆಲಸ ಮತ್ತು ಕೊನಿಯಾ ಮೋಟಿಫ್‌ಗಳನ್ನು ಒಳಗೊಂಡಿತ್ತು. ಈ ಸುಂದರವಾದ ಸೀರೆ ಧರಿಸಲು 40 ದಿನದ ಸಮಯ ತಗುಲಿತ್ತು.
ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ ಮೊದಲ ವರ್ಷದ ಸಂಭ್ರಮಾಚರಣೆಯಲ್ಲಿ ಪೈಥಾನಿ ಸೀರೆಯಲ್ಲಿ ನೀತಾ ಅಂಬಾನಿ ಸುಂದರವಾಗಿ ಕಾಣುತ್ತಿದ್ದರು. ನವಿಲು ನೀಲಿ ಬಣ್ಣದ ಸೀರೆಯನ್ನು ಮಹಾರಾಷ್ಟ್ರದ ಕುಶಲಕರ್ಮಿಗಳು ರಿಲಯನ್ಸ್‌ನ ಬ್ರಾಂಡ್, ಸ್ವದೇಶ್ ಸಹಯೋಗದೊಂದಿಗೆ ನೇಯ್ದಿದ್ದಾರೆ. ಇದು ಶುದ್ಧ ಚಿನ್ನದ ಝರಿ ಕೆಲಸಗಳನ್ನು ಒಳಗೊಂಡಿತ್ತು.