ನೀವೂ ವಯಸ್ಸಾದವರಂತೆ ಕಾಣಿಸ್ತೀರಾ? ಹಾಗಾದ್ರೆ ನಿಮ್ಮ ಮುಖಕ್ಕೆ ಇದನ್ನ ಹಚ್ಚಿ
ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳದಂತೆ ತಡೆಯಲು ಮತ್ತು ತ್ವಚೆ ಹೊಳೆಯುವಂತೆ ಕಾಣಲು ಈ ಸೌಂದರ್ಯ ಉತ್ಪನ್ನಗಳನ್ನು ಬಳಸಿ

ಸೌಂದರ್ಯ ಉತ್ಪನ್ನ
ಕಾಲ ಕಳೆದಂತೆ ಮುಖದ ಹೊಳಪು ಮಾಸಲು ಪ್ರಾರಂಭಿಸುತ್ತದೆ. ನಾವು ಏನೇನೆಲ್ಲಾ ಬಳಸಿದರೂ ಪ್ರಯೋಜನಕ್ಕೆ ಬರುವುದಿಲ್ಲ. ಅದರಿಂದ ನಮಗೆ ಪರಿಹಾರವೂ ಸಿಗುವುದಿಲ್ಲ. ಆದ್ದರಿಂದ ಚರ್ಮದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳದಂತೆ ತಡೆಯಲು ಮತ್ತು ತ್ವಚೆ ಹೊಳೆಯುವಂತೆ ಕಾಣಲು ಈ ಸೌಂದರ್ಯ ಉತ್ಪನ್ನಗಳನ್ನು ಬಳಸಿ.
ಸನ್‌ಸ್ಕ್ರೀನ್
ಬೇಸಿಗೆಯಾಗಿರಲಿ ಅಥವಾ ಯಾವುದೇ ಸೀಸನ್ ಆಗಿರಲಿ ನಿಮ್ಮ ತ್ವಚೆಗೆ ಸನ್‌ಸ್ಕ್ರೀನ್ ಹಚ್ಚಲು ಮರೆಯಬೇಡಿ. 30 ವರ್ಷದ ನಂತರ, ನೀವು ಪ್ರತಿ ಎರಡರಿಂದ ಮೂರು ದಿನಗಳಿಗೊಮ್ಮೆ ಸನ್‌ಸ್ಕ್ರೀನ್ ಬಳಸಿದರೆ, ಅದು ಮುಖದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್ ಹಚ್ಚಿ. ಇಲ್ಲದಿದ್ದರೆ ಅದು ಚರ್ಮಕ್ಕೆ ಹಾನಿ ಮಾಡುತ್ತದೆ.
ವಿಟಮಿನ್ ಸಿ ಸೀರಮ್
ಸನ್‌ಸ್ಕ್ರೀನ್ ಜೊತೆಗೆ, ನೀವು ನಿಮ್ಮ ಮುಖದ ಮೇಲೆ ವಿಟಮಿನ್ ಸಿ ಸೀರಮ್ ಅನ್ನು ಸಹ ಬಳಸಬಹುದು. ನೀವು ಇದನ್ನು ಪ್ರತಿದಿನ ಬಳಸಿದರೆ, ಅದು ನಿಮ್ಮ ಮುಖದಿಂದ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ಬಳಸುವ ಮೊದಲು, ನೀವು ಒಮ್ಮೆ ಪ್ಯಾಚ್ ಟೆಸ್ಟ್ ಮಾಡಬೇಕು, ಇದರಿಂದ ನಂತರ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇದನ್ನು ಬಳಸುವುದು ಹೇಗೆಂದರೆ ಪ್ರತಿದಿನ ಬೆಳಗ್ಗೆ ಮುಖ ಸ್ವಚ್ಛಗೊಳಿಸಿದ ನಂತರ ಮತ್ತು ಮಾಯಿಶ್ಚರೈಸರ್ ಹಚ್ಚುವ ಮೊದಲು 2-3 ಹನಿ ಸೀರಮ್ ಅನ್ನು ಹಚ್ಚಿ.
ನೈಟ್ ಕ್ರೀಮ್
ನೀವು ಹಗಲಿನಲ್ಲಿ ನಿಮ್ಮ ಮುಖಕ್ಕೆ ಅನೇಕ ಕ್ರೀಮ್‌ಗಳನ್ನು ಹಚ್ಚುತ್ತೀರಿ, ಆದರೆ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ನೀವು ರಾತ್ರಿ ನೈಟ್ ಕ್ರೀಮ್ ಅನ್ನು ಸಹ ಹಚ್ಚಬಹುದು. ನಿಮ್ಮ ತ್ವಚೆಯ ಮೇಲೆ ನೈಟ್ ಕ್ರೀಮ್ ಹಚ್ಚಿದರೆ ಅದು ಚರ್ಮದ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ.
ಮೊಯಿಶ್ಚರೈಸರ್
ವಯಸ್ಸಾದಂತೆ ಸ್ಕಿನ್ ಕೇರ್ ಉತ್ಪನ್ನಗಳನ್ನು ಬದಲಾಯಿಸುವ ಅವಶ್ಯಕತೆಯಿದೆ. ನೀವು 30 ವರ್ಷದ ನಂತರ ಹೈಲುರಾನಿಕ್ ಆಮ್ಲವಿರುವ ಮೊಯಿಶ್ಚರೈಸರ್ ಬಳಸಿದರೆ ನಿಮ್ಮ ಚರ್ಮವು ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ. ವಯಸ್ಸಾದಂತೆ ಮುಖದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ನೀವು ಮೊಯಿಶ್ಚರೈಸರ್ ಅನ್ನು ಹಚ್ಚಬಹುದು.
ಕಣ್ಣಿನ ಕ್ರೀಮ್
ಕಾಲಾನಂತರದಲ್ಲಿ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಇದು ಮುಖದ ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನೀವು ಕಣ್ಣುಗಳಿಗೆ ಪ್ರತಿದಿನ ಕಣ್ಣಿನ ಕ್ರೀಮ್ ಬಳಸಿ. ಕಣ್ಣಿನ ಕ್ರೀಮ್ ನಿಮ್ಮ ಚರ್ಮವನ್ನು ಡಾರ್ಕ್ ಸರ್ಕಲ್, ಸೂಕ್ಷ್ಮ ರೇಖೆಗಳು ಮತ್ತು ಊತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.