ಗೋಲ್ಡನ್-ರೆಡ್ ಸೀರೆಯಲ್ಲಿ ಮುದ್ದಾದ ನಗೆ ಬೀರಿದ ಸಾರಾ ಅಣ್ಣಯ್ಯ, ಮಿಲಿಯನ್ ಡಾಲರ್ ಸ್ಮೈಲ್ ಎಂದ ಫ್ಯಾನ್ಸ್
ಸಾರಾ ಅಣ್ಣಯ್ಯ, ಮಾಡರ್ನ್ ಲುಕ್ಗೂ ಸೈ, ಟ್ರೆಡಿಶನಲ್ ಡ್ರೆಸ್ಗೂ ಜೈ ಅನ್ನೋ ಕಿರುತೆರೆ ನಟಿ. ಇತ್ತೀಚಿಗೆ ಗೋಲ್ಡನ್ ಕಲರ್ ಸೀರೆ ಹಾಗೂ ರೆಡ್ ಬ್ಲೌಸ್ ಹಾಕ್ಕೊಂಡು ಸಖತ್ತಾಗಿ ಮಿಂಚಿದ್ದಾರೆ. ನೆಟ್ಟಿಗರು ಸಾರಾ ಮಿಲಿಯನ್ ಡಾಲರ್ ಸ್ಮೈಲ್ಗೆ ಮನ ಸೋತಿದ್ದಾರೆ.
ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸೀರಿಯಲ್ನಲ್ಲಿ ಮಾಡರ್ನ್ ಲುಕ್ನಲ್ಲಿ ಕಾಣಿಸಿಕೊಳ್ಳೋ ಸಾರಾ ರಿಯಲ್ ಲೈಫ್ನಲ್ಲಿ ಸೀರೆಯುಟ್ಟು ಮಿಂಚುತ್ತಾರೆ.
ಇತ್ತೀಚಿಗೆ ಗೋಲ್ಡನ್ ಕಲರ್ ಸೀರೆ ಹಾಗೂ ರೆಡ್ ಬ್ಲೌಸ್ ಹಾಕ್ಕೊಂಡು ಸಖತ್ತಾಗಿ ಮಿಂಚಿದ್ದಾರೆ. ನೆಟ್ಟಿಗರು ಸಾರಾ ಸೀರೆ ಲುಕ್ಗೆ ಮನ ಸೋತಿದ್ದಾರೆ.
ನಾನಾ ರೀತಿಯಲ್ಲಿ ಫೋಸ್ ನೀಡಿ ಫೋಟೋಸ್ ಪೋಸ್ಟ್ ಮಾಡಿರುವ ಸಾರಾ, 'ಈಸ್ ಇಟ್ ಟೂ ಚೀಸೀ ಟು ಸೇ ಸಾರಿ ನಾಟ್ ಸೋರಿ'' ಎಂದು ಟೈಟಲ್ ನೀಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾರಾ ಸ್ಯಾರಿ ಲುಕ್ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಕಳುಹಿಸಿದ್ದಾರೆ. 'ಸೋ ಗಾರ್ಜಿಯಸ್, ಮಿಲಿಯನ್ ಡಾಲರ್ ಸ್ಮೈಲ್' ಎಂದು ಹೊಗಳಿದ್ದಾರೆ. ಮತ್ತೆ ಕೆಲವರು ಸೋ ಕ್ಯೂಟ್ ಎಂದಿದ್ದಾರೆ..
ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಸೀರಿಯಲ್ ನಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟಿ ಸಾರಾ ಅಣ್ಣಯ್ಯ ತಮ್ಮ ಸ್ಟೈಲ್ ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಕನ್ನಡತಿ ಸೀರಿಯಲ್ ನಲ್ಲಿ ವರೂಧಿನಿ ಪಾತ್ರದ ಮೂಲಕ ಜನಕ್ಕೆ ಹತ್ತಿರವಾದ ನಟಿ ಸಾರಾ. ಈ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರೂ, ಆಕೆಯ ಸೈಕೋ ಕ್ಯಾರೆಕ್ಟರ್ ಜನರಿಗೆ ತುಂಬಾನೆ ಇಷ್ಟವಾಗಿತ್ತು.
ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಈ ಮೂರು ಸೀರಿಯಲ್ ನಲ್ಲೂ ಸಾರಾ ತುಂಬಾನೆ ಮಾಡರ್ನ್ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಹಾಗೇ ನೋಡಿದ್ರೆ ಸಾರಾ ಮಾಡರ್ನ್ ಡ್ರೆಸ್ಸಲ್ಲೂ, ಸೀರೆಯಲ್ಲು ಅದ್ಭುತ ಬ್ಯೂಟಿ ಅನ್ನೋದ್ರಲ್ಲಿ ತಪ್ಪಿಲ್ಲ.
ಬೆಂಗಳೂರಲ್ಲಿ ಹುಟ್ಟಿ ಬೆಳೆದಿರುವ ಈ ಬೋಲ್ಡ್ ಬ್ಯೂಟಿ ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ತುಂಬಾನೆ ಫೇಮಸ್. ಕನ್ನಡ ಸಿನಿಮಾ, ತಮಿಳು ವೆಬ್ ಸೀರೀಸ್ ಗಳಲ್ಲೂ ನಟಿಸಿರುವ ಸಾರಾ, ಸದ್ಯ ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರ ಮಾಡುತ್ತಿದ್ದಾರೆ.