ಸೀರೆಯುಟ್ಟು ದೇವತೆಯಂತೆ ಕಂಡ ಮಲೈಕಾ ವಸುಪಾಲ್, ಚೆಂದ ನೋಡಿ 1 ಕೆಜಿ ಐಸ್ಕ್ರೀಂ ಸಿಕ್ಕಷ್ಟೇ ಖುಷಿಯಾಯ್ತು ಎಂದ ನೆಟ್ಟಿಗರು!
ಹಿಟ್ಲರ್ ಕಲ್ಯಾಣ ಸೀರಿಯಲ್ ಮತ್ತು ಉಪಾಧ್ಯಕ್ಷ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿರುವ ದುಂಡು ಮುಖದ ಚೆಲುವೆ ನಟಿ ಮಲೈಕಾ ವಸುಪಾಲ್ ಆಗಾಗ ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋಸ್ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಟ್ರೆಡಿಶನಲ್ ಲುಕ್ನಲ್ಲಿ ಸಖತ್ತಾಗಿ ಫೋಟೋಶೂಟ್ ಮಾಡಿಸ್ಕೊಂಡಿದ್ದಾರೆ.
ಹಿಟ್ಲರ್ ಕಲ್ಯಾಣ, ಉಪಾಧ್ಯಕ್ಷ ಸಿನಿಮಾದಲ್ಲಿ ಮಿಂಚುತ್ತಿರುವ ಬೆಡಗಿ ಮಲೈಕಾ ವಸುಪಾಲ್. ಕನ್ನಡಿಗರ ಮನೆಮಾತಾಗಿರುವ ದುಂಡು ಮುಖದ ಚೆಲುವೆ ನಟಿ ಮಲೈಕಾ ವಸುಪಾಲ್ ಆಗಾಗ ಇನ್ಸ್ಟಾಗ್ರಾಂನಲ್ಲಿ ಹೊಸ ಫೋಟೋಸ್ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಟ್ರೆಡಿಶನಲ್ ಲುಕ್ನಲ್ಲಿ ಸಖತ್ತಾಗಿ ಫೋಟೋಶೂಟ್ ಮಾಡಿಸ್ಕೊಂಡಿದ್ದಾರೆ.
ಮೆಹಂದಿ ಗ್ರೀನ್ ಮೈನಲ್ಲಿ ರೆಡ್ ಬಾರ್ಡರ್ ಇರೋ ಸೀರೆಯಲ್ಲಿ ಮಲೈಕಾ ಸುಂದರವಾಗಿ ಕಾಣುತ್ತಿದ್ದಾರೆ. ಸೀರೆಗೆ ಒಪ್ಪುವಂತೆ ಗ್ರ್ಯಾಂಡ್ ಆಭರಣಗಳನ್ನು ಸಹ ಧರಿಸಿದ್ದಾರೆ. ಹಿಟ್ಲರ್ ಕಲ್ಯಾಣ ನಟಿಯ ಟ್ರೆಡಿಶನಲ್ ಲುಕ್ ನೆಟ್ಟಿಗರು ಫಿದಾ ಆಗಿದ್ದಾರೆ. ಹಾರ್ಟ್, ಲೈಕ್ಸ್ ಕಳುಹಿಸಿ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ಅಭಿಮಾನಿಗಳು, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್, ಕ್ಯೂಟ್ ಸ್ಮೈಲ್, ಸೋ ಬ್ಯೂಟಿಫುಲ್, ಕಿಲ್ಲಿಂಗ್ ಲುಕ್, ಬ್ಯೂಟಿ ಕ್ವೀನ್, 1 ಕೆಜಿ ಐಸ್ಕ್ರೀಂ ಸಿಕ್ಕಷ್ಟೇ ಸಮಾಧಾನ ಆಯಿತು, ಮೈಂಡ್ ಬ್ಲೋಯಿಂಗ್, ಸೋ ಕ್ಯೂಟ್ ಸುಂದರಿ, ಅಪ್ಸರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣದ ಮೂಲಕ ಎಡವಟ್ಟು ರಾಣಿ ಲೀಲಾ ಆಗಿ ನಟನಾ ಜಗತ್ತಿಗೆ ಕಾಲಿಟ್ಟ ನಟಿ ಮಲೈಕಾ ವಸುಪಾಲ್. ಮೊದಲ ಸೀರಿಯಲ್ ಮೂಲಕವೇ ಕನ್ನಡಿಗರ ಮನಗೆದ್ದಿದ್ದರು.
ಲೀಲಾ ಆಗಿ ಜನಮನ ಗೆದ್ದ ಬೆಡಗಿ ಬಳಿಕ ಸಿನಿಮಾದಲ್ಲೂ ಮಿಂಚಿದರು, ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ನಾಯಕಿಯಾಗಿ ಮಲೈಕಾ ನಟಿಸಿ, ಅಲ್ಲೂ ಕೂಡ ಸೈ ಎನಿಸಿಕೊಂಡಿದ್ದರು.
ಹಿಟ್ಲರ್ ಕಲ್ಯಾಣ, ಧಾರಾವಾಹಿಯಲ್ಲಿ ಲೀಲಾಗೆ ಸರಿಯಾಗಿ ನ್ಯಾಯ ಕೊಡಿಸದೇ ತರಾತುರಿಯಲ್ಲಿ ಸೀರಿಯಲ್ ಮುಗಿಸಿದ್ದಕ್ಕೆ ಸೀರಿಯಲ್ ನಿರ್ದೇಶಕರ ಮೇಲೆ ವೀಕ್ಷಕರು ಸಿಕ್ಕಾಪಟ್ಟೆ ಕೋಪಮಾಡಿಕೊಂಡಿದ್ದರು. ಮತ್ತೆ ಮಲೈಕಾ ಅವರನ್ನು ಕಿರುತೆರೆಯಲ್ಲಿ ನೋಡೋದಕ್ಕೆ ಬಯಸ್ತಿದ್ದಾರೆ ಜನ.
ಸದ್ಯ ಸಿನಿಮಾ, ಸೀರಿಯಲ್ ನಿಂದ ಸ್ವಲ್ಪ ರಿಲ್ಯಾಕ್ಸ್ ಆಗಿರುವ ಮಲೈಕಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೂಲಕ ತಮ್ಮ ಫೊಟೋ, ರೀಲ್ಸ್ ಶೇರ್ ಮಾಡುತ್ತಾ, ತಮ್ಮ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ.
ಮೊದಲ ಸೀರಿಯಲ್ ನಿಂದಾನೆ ಜನಪ್ರಿಯತೆ ಪಡೆದಿರುವ ಮಲೈಕಾಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ, ಸಿನಿಮಾ, ಪರಭಾಷಾ ಸೀರಿಯಲ್ ಗಳಿಂದಲೂ ಆಫರ್ ಸಿಕ್ಕಿವೆಯಂತೆ. ಈಕೆಗೆ ರಮೇಶ್ ಅರವಿಂದ್, ಯಶ್, ದರ್ಶನ್ ಜೊತೆ ಅಭಿನಯಿಸಬೇಕೆಂಬ ಕನಸಂತೆ.
ಈ ಮಿಲ್ಕಿ ಬ್ಯೂಟಿ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸ್ತಾರೆ, ನಟನೆಯಿಂದ ಬ್ರೇಕ್ ಸಿಕ್ಕ ಕೂಡಲೇ ಮುಖಕ್ಕೆ ಹಾಲು ಮತ್ತು ನೀರು ಸೇರಿಸಿ ಮಸಾಜ್ ಮಾಡೋದು, ಮಾಯಿಶ್ಚರೈಸ್ ಮಾಡೋದು, ಕ್ಲೆನ್ಸಿಂಗ್ ಮಾಡೋದು ಇವನ್ನೆಲ್ಲಾ ಮಾಡ್ತಾರಂತೆ ಚೆಲುವೆ.