ಅಂಬಾನಿ ಮಗಳ ರಾಯಲ್ ಲುಕ್, ಲಂಡನ್ ಫ್ಯಾಷನ್ ಡಿಸೈನರ್ನ ಪಿಂಕ್ ಗೌನ್ನಲ್ಲಿ ಮಿಂಚಿದ ಇಶಾ!
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಗಳು ಅದ್ಧೂರಿಯಾಗಿ ನಡೀತಿದೆ. ಅಂಬಾನಿ ಕುಟುಂಬ ಸದಸ್ಯರು ಗ್ರ್ಯಾಂಡ್ ಡ್ರೆಸ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮುಕೇಶ್ ಅಂಬಾನಿ ಮಗಳು ಇಶಾ ಗುಲಾಬಿ ಬಣ್ಣದ ಗೌನ್ನಲ್ಲಿ ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ.
ಮುಕೇಶ್ ಅಂಬಾನಿ ಪುತ್ರ,ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಗಳು ಅದ್ಧೂರಿಯಾಗಿ ನಡೀತಿದೆ. ಅಂಬಾನಿ ಕುಟುಂಬ ಸದಸ್ಯರು ಗ್ರ್ಯಾಂಡ್ ಡ್ರೆಸ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಗುಲಾಬಿ ಬಣ್ಣದ ಗೌನ್ನಲ್ಲಿ ಇಶಾ ಅಂಬಾನಿ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ನಡೆದ ಸಮಾರಂಭದಲ್ಲಿ ತನ್ನ ಸಹೋದರ ಅನಂತ್ ಅಂಬಾನಿ ಅವರ ವಿವಾಹಪೂರ್ವ ಕಾರ್ಯಕ್ರಮಕ್ಕಾಗಿ ಇಶಾ ಅಂಬಾನಿ ಮೃದುವಾದ ಗುಲಾಬಿ ಬಣ್ಣದ ಗೌನ್ನಲ್ಲಿ ಕಾಣಿಸಿಕೊಂಡರು.
ಗುಜರಾತ್ನ ಜಾಮ್ನಗರದಲ್ಲಿ ಮಾರ್ಚ್ 1ರಿಂದ ಅನಂತ್-ರಾಧಿಕಾ ರಾಯಲ್ ಪ್ರಿ ವೆಡ್ಡಿಂಗ್ ಸೆಲೆಬ್ರೇಷನ್ ಶುರುವಾಗಿದೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶದ ಅನೇಕ ಸೆಲೆಬ್ರಿಟಿಗಳ ಜೊತೆಗೆ ಅಂತಾರಾಷ್ಟ್ರೀಯ ತಾರೆಯರು ಸಹ ಆಗಮಿಸುತ್ತಿದ್ದಾರೆ.
ಇಶಾ ಧರಿಸಿದ್ದ ಆಫ್ ಶೋಲ್ಡರ್ ಶೀರ್ ಗೌನ್ ಅನ್ನು ಲಂಡನ್ ಮೂಲದ ಫ್ಯಾಷನ್ ಡಿಸೈನರ್ ಮಿಸ್ ಸೊಹೀ ವಿನ್ಯಾಸಗೊಳಿಸಿದ್ದಾರೆ. ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಈ ಅದ್ಭುತ ಗೌನ್ ಧರಿಸಿ ಮಿಂಚಿದ್ದರು.
ಇದು ಎಲ್ಲಾ ಕಡೆ ಹೂವಿನ ಮೋಟಿಫ್ಗಳನ್ನು ಒಳಗೊಂಡಿತ್ತು. ಗೌನ್ಗೆ ಪ್ರತ್ಯೇಕವಾದ ಸ್ಯಾಟಿನ್ ಸ್ಲೀವ್ಸ್ಗಳನ್ನು ಅಟ್ಯಾಚ್ ಮಾಡಲಾಗಿತ್ತು.
ಇಶಾ ಅಂಬಾನಿಯವರ ಈ ಗೌನ್ನಲ್ಲಿ ಸುಂದರವಾದ ಫ್ಲೋರಲ್ ಹ್ಯಾಂಡ್ ವರ್ಕ್ ಬ್ಲಾಸಮ್ ಹೂಗಳನ್ನು ಮಾಡಲಾಗಿದೆ. ಇದು ಸ್ವರೋಸ್ಕಿ ಕ್ರಿಸ್ಟಲ್ ಕಸೂತಿ ಮಾಡಿದ ನವಿಲು ಡಿಸೈನ್ನ್ನು ಹೊಂದಿದೆ. ಇದು ಗೌನ್ನ್ನು ತುಂಬಾ ವಿಭಿನ್ನವಾಗಿ ಕಾಣುವಂತೆ ಮಾಡಿದೆ
ಇಶಾ ಈ ಸ್ಟೈಲಿಶ್ ಗೌನ್ಗೆ ರೀಗಲ್ ನೆಕ್ಪೀಸ್ ಮತ್ತು ಕಿವಿಯೋಲೆಗಳನ್ನು ಹಾಕಿಕೊಂಡಿದ್ದರು. ಕೂದಲನ್ನು ಅಚ್ಚುಕಟ್ಟಾಗಿ ಬನ್ಗೆ ಕಟ್ಟಿದ್ದರು. ಸಿಂಪಲ್ ಮೇಕಪ್ನಲ್ಲಿ ಅದ್ಭುತವಾಗಿ ಕಾಣುತ್ತಿದ್ದರು.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದ ಕಾಕ್ಟೈಲ್ ಪಾರ್ಟಿಯಲ್ಲಿ ಇಶಾ ಅಂಬಾನಿಯ ಗೌನ್ ಲುಕ್ ಎಲ್ಲರ ಗಮನ ಸೆಳೆಯಿತು.
ಲಂಡನ್ ವಿನ್ಯಾಸಕರು ಪ್ರಾಣಿಗಳ ಥೀಮ್ನಿಂದ ಪ್ರೇರಿತರಾಗಿ ಈ ಸ್ಪೆಷಲ್ ಗೌನ್ನ್ನು ತಯಾರಿಸಿದ್ದಾರೆ ಎಂದು ತಿಳಿದುಬಂದಿದೆ.