- Home
- Life
- Fashion
- ನೀತಾ ಅಂಬಾನಿ ವಾಟರ್ ಬಾಟಲ್ ಬೆಲೆಗೆ ಬೆಂಗಳೂರಲ್ಲಿ 2BHK ಫ್ಲ್ಯಾಟ್ ಖರೀಸಿಸಬಹುದು! ಐಷಾರಾಮಿ ಬಾಟಲ್ ವಿಶೇಷತೆಯೇನು?
ನೀತಾ ಅಂಬಾನಿ ವಾಟರ್ ಬಾಟಲ್ ಬೆಲೆಗೆ ಬೆಂಗಳೂರಲ್ಲಿ 2BHK ಫ್ಲ್ಯಾಟ್ ಖರೀಸಿಸಬಹುದು! ಐಷಾರಾಮಿ ಬಾಟಲ್ ವಿಶೇಷತೆಯೇನು?
ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಕುಡಿಯುವ 'ಅಕ್ವಾ ಡಿ ಕ್ರಿಸ್ಟಾಲೋ ಟ್ರಿಬ್ಯೂಟೊ ಎ ಮೋಡಿಗ್ಲಿಯಾನಿ' ಎಂಬ ನೀರಿನ ಬಾಟಲಿಯ ಬೆಲೆ ಸುಮಾರು 49 ಲಕ್ಷ ರೂಪಾಯಿ. ಅವರ ಒಂದು ವಾಟರ್ ಬಾಟಲ್ ಬೆಲೆಗೆ ಮಿಡ್ಲ್ ಕ್ಲಾಸ್ ಜನರು ನಗರ ಪ್ರದೇಶದಲ್ಲಿ ಒಂದು 2ಬಿಎಚ್‌ಕೆ ಫ್ಲ್ಯಾಟ್ ಖರೀದಿ ಮಾಡಬಹುದು ಎನ್ನಲಾಗುತ್ತಿದೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಜೀವನಶೈಲಿ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅವರು ಧರಿಸುವ ಸೀರೆಗಳು, ವ್ಯಾನಿಟಿ ಬ್ಯಾಗ್‌ಗಳು (Handbags) ಮತ್ತು ಆಭರಣಗಳ ಬೆಲೆ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳಾಗಿರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ನೀತಾ ಅಂಬಾನಿ ಕುಡಿಯುವ ಒಂದು ಬಾಟಲಿ ನೀರಿನ ಬೆಲೆ ಕೇಳಿದರೆ ನೀವು ಖಂಡಿತವಾಗಿಯೂ ಬೆಚ್ಚಿಬೀಳುತ್ತೀರಿ. ಆ ಒಂದು ಬಾಟಲಿ ನೀರಿನ ಬೆಲೆಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ನಗರ ಪ್ರದೇಶದಲ್ಲಿ ಸುಸಜ್ಜಿತವಾದ ಡಬಲ್ ಬೆಡ್‌ರೂಮ್ (2BHK) ಫ್ಲ್ಯಾಟ್ ಅನ್ನೇ ಖರೀದಿಸಬಹುದು!
49 ಲಕ್ಷ ರೂಪಾಯಿಯ ನೀರಿನ ಬಾಟಲಿ!
ಹೌದು, ವರದಿಗಳ ಪ್ರಕಾರ ನೀತಾ ಅಂಬಾನಿ ಬಳಸುವ ಒಂದು ಬಾಟಲಿ ನೀರಿನ ಬೆಲೆ ಅಂದಾಜು 49 ಲಕ್ಷ ರೂಪಾಯಿಗಳು (ಸುಮಾರು $60,000). ಮಧ್ಯಮ ವರ್ಗದ ಕುಟುಂಬವೊಂದು ತನ್ನ ಜೀವನಪರ್ಯಂತ ಉಳಿಸಿದ ಹಣದಲ್ಲಿ ಖರೀದಿಸುವ ಮನೆಯ ಬೆಲೆ ಈ ಒಂದು ನೀರಿನ ಬಾಟಲಿಗೆ ಸಮಾನವಾಗಿದೆ. ಅಷ್ಟಕ್ಕೂ ಈ ನೀರಿನಲ್ಲಿ ಅಂತಹ ವಿಶೇಷತೆ ಏನಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ.
ಏನಿದರ ವಿಶೇಷತೆ?
ನೀತಾ ಅಂಬಾನಿ ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಅವರು ಕುಡಿಯುವ ಈ ನೀರನ್ನು 'ಅಕ್ವಾ ಡಿ ಕ್ರಿಸ್ಟಾಲೋ ಟ್ರಿಬ್ಯೂಟೊ ಎ ಮೋಡಿಗ್ಲಿಯಾನಿ' (Acqua di Cristallo Tributo a Modigliani) ಎಂದು ಕರೆಯಲಾಗುತ್ತದೆ.
ಬಂಗಾರದ ಬಾಟಲಿ: ಈ ಬಾಟಲಿಯನ್ನು ಪ್ರಖ್ಯಾತ ಮೆಕ್ಸಿಕನ್ ವಿನ್ಯಾಸಕ ಫೆರ್ನಾಂಡೋ ಅಲ್ಟಾಮಿರಾನೊ ವಿನ್ಯಾಸಗೊಳಿಸಿದ್ದಾರೆ. ಈ ಬಾಟಲಿಯು 24 ಕ್ಯಾರೆಟ್ ಶುದ್ಧ ಚಿನ್ನದಿಂದ ಮಾಡಲ್ಪಟ್ಟಿದೆ.
ಚಿನ್ನದ ಅಂಶವಿರುವ ನೀರು: ಈ ಬಾಟಲಿಯಲ್ಲಿರುವ ನೀರು ಕೇವಲ ಸಾಮಾನ್ಯ ನೀರಲ್ಲ. ಇದು ಫ್ರಾನ್ಸ್, ಫಿಜಿ ಮತ್ತು ಐಸ್‌ಲ್ಯಾಂಡ್‌ನ ನೈಸರ್ಗಿಕ ಮೂಲಗಳಿಂದ ಸಂಗ್ರಹಿಸಿದ ನೀರಿನ ಮಿಶ್ರಣವಾಗಿದೆ. ಅಚ್ಚರಿಯ ವಿಷಯವೆಂದರೆ, ಈ ನೀರಿನಲ್ಲಿ 5 ಗ್ರಾಂನಷ್ಟು 24 ಕ್ಯಾರೆಟ್ ಚಿನ್ನದ ಭಸ್ಮ ಅಥವಾ ಕಣಗಳನ್ನು ಬೆರೆಸಲಾಗುತ್ತದೆ.
ಆರೋಗ್ಯದ ಲಾಭಗಳು: ಈ ನೀರನ್ನು ಕುಡಿಯುವುದರಿಂದ ಚರ್ಮವು ಕಾಂತಿಯುತವಾಗಿರುತ್ತದೆ ಮತ್ತು ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದೇ ನೀತಾ ಅಂಬಾನಿ ಅವರ ನಿತ್ಯನೂತನ ಸೌಂದರ್ಯದ ರಹಸ್ಯ ಎನ್ನಲಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ:
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ‘ಈ ಬಾಟಲಿಯನ್ನು ತೊಳೆಯಲು ಯಾವ ನೀರು ಬಳಸುತ್ತಾರೆ?’ ಎಂದು ಕೆಲವರು ತಮಾಷೆ ಮಾಡಿದರೆ, ಇನ್ನು ಕೆಲವರು ಶ್ರೀಮಂತರ ಜೀವನಶೈಲಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೂ, ಅಂಬಾನಿ ಕುಟುಂಬದ ಇಂತಹ ಐಷಾರಾಮಿ ಜೀವನ ಪ್ರತಿ ಬಾರಿಯೂ ಜನರನ್ನು ಬೆರಗುಗೊಳಿಸುತ್ತಲೇ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

