MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Fashion
  • ದಿನ ಪೂರ್ತಿ ಫ್ರೆಶ್ ಸುವಾಸನೆ ಹೊಂದಿರಲು ಏನು ಮಾಡಬೇಕು ಗೊತ್ತಾ?

ದಿನ ಪೂರ್ತಿ ಫ್ರೆಶ್ ಸುವಾಸನೆ ಹೊಂದಿರಲು ಏನು ಮಾಡಬೇಕು ಗೊತ್ತಾ?

Beauty and Wellness Tips: ಕೆಲವು ಜನರು ಯಾವಾಗಲೂ ಒಳ್ಳೆಯ ವಾಸನೆಯನ್ನು ಹೊಂದಿರುತ್ತಾರೆ. ಒಳ್ಳೆಯ ವಾಸನೆ ಎಂದರೆ ಅದು ನೀವು ಆನಂದಿಸುವ ಪರಿಮಳವನ್ನು ಕಂಡುಕೊಳ್ಳುವುದು. ಕೆಲವರಿಗೆ, ಒಳ್ಳೆಯ ವಾಸನೆ ಎಂದರೆ ಅವರು ಪ್ರವೇಶಿಸುವ ಪ್ರತಿಯೊಂದು ಕೋಣೆಗೆ ಮೋಡಿಮಾಡುವ ಸುಗಂಧದ್ರವ್ಯವನ್ನು ಸ್ಪ್ರೇ ಮಾಡುವುದು ಎಂದರ್ಥ. ಇತರರಿಗೆ, ದೀರ್ಘ ದಿನದ ಕೆಲಸದ ನಂತರ ದೇಹದ ವಾಸನೆಯನ್ನು ದೂರ ಮಾಡಲು ಸುಗಂಧ ದ್ರವ್ಯವನ್ನು ಬಳಕೆ ಮಾಡುವುದು. 

2 Min read
Contributor Asianet
Published : Apr 18 2022, 06:03 PM IST
Share this Photo Gallery
  • FB
  • TW
  • Linkdin
  • Whatsapp
18

ಸುಗಂಧದ್ರವ್ಯವನ್ನು(Perfume) ಬಳಸದೆಯೇ ನೀವು ನಿಜವಾಗಿಯೂ ಉತ್ತಮ ವಾಸನೆಯನ್ನು ಹೊಂದಬಹುದು ಎಂದು ನಿಮಗೆ ತಿಳಿದಿದೆಯೇ? ಸುಗಂಧದ್ರವ್ಯವಿಲ್ಲದೆಯೂ,  ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಯಾರಿಗಾದರೂ ಒಳ್ಳೆಯ ವಾಸನೆ ಬರಲು ಸಾಧ್ಯವಿದೆ. ಆದ್ದರಿಂದ ನಿಮ್ಮ ಸುವಾಸನೆಯನ್ನು ಹೆಚ್ಚಿಸಲು ಮತ್ತು ನೀವು ಹೋದಲ್ಲೆಲ್ಲಾ ಉತ್ತಮ ವಾಸನೆಯನ್ನು ಹರಡುವಂತೆ ಮಾಡಲು ನೀವು ಒಂದು ಮಾರ್ಗವನ್ನು ಹುಡುಕುತ್ತಿದ್ದರೆ, ಇಲ್ಲಿದೆ ನಿಮಗಾಗಿ ಟಿಪ್ಸ್. 

28

 ಪ್ರತಿ ದಿನವೂ ಉತ್ತಮ ವಾಸನೆ ಹೇಗೆ?

1. ನಿಮ್ಮ ಸುಗಂಧ ದ್ರವ್ಯವನ್ನು ತಿಳಿದುಕೊಳ್ಳಿ
ನಿಮ್ಮ ಸುಗಂಧದ್ರವ್ಯವನ್ನು ಎಚ್ಚರಿಕೆಯಿಂದ ಆರಿಸಿ. ಸುಗಂಧ ದ್ರವ್ಯಗಳು ವಿವಿಧ ರೀತಿಯ ಚರ್ಮದ (Skin) ಪ್ರಕಾರಗಳಲ್ಲಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ, ಆದ್ದರಿಂದ ಒಬ್ಬ ವ್ಯಕ್ತಿಯ ಮೇಲೆ ಉತ್ತಮ ವಾಸನೆಯು ಇನ್ನೊಬ್ಬ ವ್ಯಕ್ತಿಯ ಮೇಲೆ ಕೆಲಸ ಮಾಡದಿರಬಹುದು. ಅದಕ್ಕಾಗಿಯೇ ನೀವು ನಿಮ್ಮ ಚರ್ಮದ ಮೇಲೆ ಏನು ಕೆಲಸ ಮಾಡುತ್ತದೆ, ನಿಮಗೆ ಉತ್ತಮ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಎಂದು ಹುಡುಕಿಕೊಳ್ಳಬೇಕು. 

38

2. ರಿಸ್ಟ್(Wrist) ಮೇಲೆ ಸುಗಂಧ ದ್ರವ್ಯ 
ನಿಮ್ಮ ಪರಿಮಳವು ಹೆಚ್ಚು ಕಾಲ ಉಳಿಯಬೇಕೆಂದು ನೀವು ಬಯಸಿದರೆ, ನೀವು ನಿಮ್ಮ ರಿಸ್ಟ್ ಮೇಲೆ ಗಮನ ಹರಿಸಬೇಕು. ನೀವು ನಿಮ್ಮ ಪಾದದ ಮೇಲೆ, ಮೊಣಕಾಲುಗಳ ಹಿಂದೆ, ಮಣಿಕಟ್ಟು, ಎದೆ ಮತ್ತು ನಿಮ್ಮ ಕಿವಿಗಳ ಹಿಂದೆ ಸುಗಂಧ ದ್ರವ್ಯ ಸಿಂಪಡಿಸಿದಾಗ, ಪರಿಮಳವು ಹರಡಲು ಸಾಧ್ಯವಾಗುತ್ತೆ ಮತ್ತು ನಿಮ್ಮ ದೇಹದ ಇತರ ಭಾಗಗಳಿಗೆ ನೀವು ಸಿಂಪಡಿಸುವುದಕ್ಕಿಂತ ಹೆಚ್ಚು ಕಾಲ ಪರಿಮಳವು ಉಳಿಯುತ್ತದೆ.

48

3. ಶುಚಿಯಾದ ಬಟ್ಟೆ
ತಾಜಾ ಪರಿಮಳ ಬೀರಬೇಕು ಎಂದಾದರೆ ನಿಮ್ಮ ಬಟ್ಟೆಗಳನ್ನು ಸ್ವಚ್ಛವಾಗಿಡುವುದು ಮತ್ತು ಉತ್ತಮ ಡಿಟರ್ಜೆಂಟ್ (Detergent) ಅನ್ನು ಬಳಸುವುದು ಮುಖ್ಯವಾಗಿವೆ. ಬಟ್ಟೆಯನ್ನು ಸಾಫ್ಟ್ ಮಾಡುವ, ಮತ್ತು ತಾಜಾ ಪರಿಮಳ ಬೀರುವಂತಹ ಲಿಕ್ವಿಡ್ ಬಳಸುವುದರಿಂದ ದಿನವಿಡೀ ನೀವು ಫ್ರೆಶ್ ಆಗಿರುತ್ತೀರಿ. 
 

58

4. ಎಲ್ಲೆಡೆ ಸ್ವಲ್ಪ ಸ್ಪ್ರೇ (Spray) ಮಾಡಿ 
ನಿಮ್ಮ ಸುಗಂಧ ದ್ರವ್ಯವನ್ನು ನಿಮ್ಮ ದೇಹಕ್ಕೆ ಸೀಮಿತಗೊಳಿಸಬೇಡಿ. ನಿಮ್ಮ ಬೆಡ್ ಶೀಟ್ ಗಳು, ಲಾಂಜ್ ಕುರ್ಚಿ, ಉಡುಪುಗಳ ಮೇಲೆ ಸ್ವಲ್ಪ ಸ್ಪ್ರೇ ಮಾಡಿ, ಅದು ದೀರ್ಘಕಾಲದವರೆಗೆ ಉಳಿಯುತ್ತದೆ. ಅಂತೆಯೇ ಕೂದಲಿಗಾಗಿ ಸಾಕಷ್ಟು ಪರಿಮಳಯುಕ್ತ ಸ್ಪ್ರೇ ಗಳಿವೆ, ಅದನ್ನು ಬಳಸುವುದರಿಂದ ಅದು ನಿಮ್ಮ ಕೂದಲಿಗೆ ಹಾನಿಯಾಗದಂತೆ ಸುಂದರವಾದ ವಾಸನೆಯನ್ನು ಬೀಸುತ್ತದೆ.

68

5. ಉತ್ತಮ ಆಹಾರಕ್ರಮವನ್ನು(Healthy food) ಸೇವಿಸಿ
ಆಹಾರವು ನಿಮ್ಮ ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮಗೆ ಉತ್ತಮ ಚರ್ಮವನ್ನು ನೀಡುವುದರ ಜೊತೆಗೆ, ಆರೋಗ್ಯಕರ ಆಹಾರವು ಕೆಟ್ಟ ವಾಸನೆಯನ್ನು ಸಹ ಕಡಿಮೆ ಮಾಡುತ್ತದೆ. ಮಸಾಲೆಗಳು, ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತವೆ, ಆದರೆ ಅದರ ಪರಿಣಾಮವೆಂದರೆ ಅವು ನಿಮ್ಮ ಚರ್ಮದ ಮೂಲಕ ಹೀರಲ್ಪಡುತ್ತವೆ. 

78


ನಿಮ್ಮ ನೈಸರ್ಗಿಕ ದೇಹದ ವಾಸನೆಯನ್ನು ಬದಲಾಯಿಸುವುದರ ಜೊತೆಗೆ, ಇದು ನಿಮ್ಮ ಚರ್ಮಕ್ಕೆ ಹಚ್ಚಿದ ಸುಗಂಧ ದ್ರವ್ಯದ ವಾಸನೆಯ ಮೇಲೂ ಪರಿಣಾಮ ಬೀರಬಹುದು. ಈ ಕಾರಣಕ್ಕಾಗಿ, ತಾಜಾ ಹಣ್ಣುಗಳು(Fresh fruits), ತರಕಾರಿಗಳು ಮತ್ತು ಶುದ್ಧ ಪ್ರೋಟೀನ್ ಸಮೃದ್ಧವಾದ ಆಹಾರವು ಮುಖ್ಯವಾಗಿದೆ.

88

ದಿನವಿಡೀ ನೀವು ಫ್ರೆಶ್ ಆಗಿ ಉಳಿಯಲು ಇಲ್ಲಿದೆ ಇನ್ನು ಕೆಲವು ಟಿಪ್ಸ್:
ಹೆಚ್ಚು ನೀರನ್ನು(Water) ಕುಡಿಯಿರಿ ಪ್ರತಿದಿನವೂ ಸ್ನಾನ ಮಾಡಿ
ಕ್ಲೋಸೆಟ್/ವಾರ್ಡ್ ರೋಬ್ ನಲ್ಲಿ ಸುಗಂಧ ದ್ರವ್ಯವನ್ನು ಸಿಂಪಡಿಸಿ
ನಿಮ್ಮ ಹೇರ್ ಗೆ  ಸುಗಂಧ ದ್ರವ್ಯ ಸ್ಪ್ರೇ ಮಾಡಿ  
ಹೊರಹೋಗುವ ಮೊದಲು ಸುವಾಸನೆ ಒಣಗಲು ಬಿಡಿ 
ಬೆಡ್ ಶೀಟ್ ಮೇಲೆ ಸುಗಂಧದ್ರವ್ಯವನ್ನು ಹಗುರವಾಗಿ ಸಿಂಪಡಿಸಿ ಮತ್ತು ದಿಂಬುಗಳಿಗೂ  ಸಿಂಪಡಿಸಿ.

About the Author

CA
Contributor Asianet
ಜೀವನಶೈಲಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved