Asianet Suvarna News Asianet Suvarna News

ಇದು ಪರ್ಪ್ಯೂಮ್ ಫಿಲಾಸಫಿ: ಸುಗಂಧದ್ರವ್ಯದ 6 ಸೂತ್ರಗಳು

ಇದಕ್ಕೇ ಆದಂಥ ನಿರ್ದಿಷ್ಟ ಜಾಗಗಳಿವೆ. ಅಲ್ಲದೆ, ಸುಗಂಧ ದ್ರವ್ಯವನ್ನು ದಿನದ ಎಲ್ಲ ಸಮಯದಲ್ಲೂ ಹಚ್ಚಿಕೊಂಡರೂ ಅದು ಚರ್ಮಕ್ಕೆ ಹಾನಿ ತರಬಹುದು. ಸುಗಂಧ ದ್ರವ್ಯ ಬಳಕೆಯ ಒಂದಿಷ್ಟು ಗುಟ್ಟುಗಳು ಇಲ್ಲಿವೆ.

Information about Perfume

ಮನುಷ್ಯನ ದೇಹಕ್ಕೆ ಪರಿಮಳ ಇರುವುದಿಲ್ಲ. ನಮ್ಮ ಚರ್ಮವು ಬೆವರನ್ನಷ್ಟೇ ಉತ್ಪಾದಿಸಿ, ದುರ್ಗಂಧವನ್ನು ಹೊರಹಾಕುತ್ತದೆ ಬಿಟ್ಟರೆ ಸುಗಂಧವನ್ನು ಉತ್ಪಾದಿಸುವುದಿಲ್ಲ. ಈ ಕಾರಣದಿಂದ ನಾವು ಪರಿಮಳದ ಮೊರೆ ಹೋಗುತ್ತೇವೆ. ಪರ್ಪ್ಯೂಮ್ ನಮ್ಮನ್ನು ಇನ್ನಷ್ಟು ಪರಿಮಳಯುಕ್ತ ಆಗಿಸುವ ದ್ರವ್ಯ. ಆದರೆ, ಅನೇಕರಿಗೆ ಇದರ ಬಳಕೆ ಬಗ್ಗೆ ಇನ್ನೂ ತಿಳಿವಳಿಕೆಯ ಕೊರತೆಯಿದೆ. ಈ ಸುಗಂಧ ದ್ರವ್ಯವನ್ನು ದೇಹದ ಎಲ್ಲೆಂದರಲ್ಲಿ ಪೂಸಿಕೊಳ್ಳುವ ಹಾಗಿಲ್ಲ. ಇದಕ್ಕೇ ಆದಂಥ ನಿರ್ದಿಷ್ಟ ಜಾಗಗಳಿವೆ. ಅಲ್ಲದೆ, ಸುಗಂಧ ದ್ರವ್ಯವನ್ನು ದಿನದ ಎಲ್ಲ ಸಮಯದಲ್ಲೂ ಹಚ್ಚಿಕೊಂಡರೂ ಅದು ಚರ್ಮಕ್ಕೆ ಹಾನಿ ತರಬಹುದು. ಸುಗಂಧ ದ್ರವ್ಯ ಬಳಕೆಯ ಒಂದಿಷ್ಟು ಗುಟ್ಟುಗಳು ಇಲ್ಲಿವೆ.

1. ಮೊದಲು ಲೋಷನ್ ಬಳಸಿ

ಸುಗಂಧದ್ರವ್ಯವನ್ನು ಪೂಸಿಕೊಳ್ಳುವ ಮೊದಲು ಚರ್ಮ ತೇವಯುಕ್ತವಾಗಿರಬೇಕು. ಚರ್ಮವನ್ನು ತೇವಯುಕ್ತವಾಗಿಡುವ ಲೋಷನ್ ಬಳಸಿ, ಅದರ ಮೇಲೆ ಪರ್ಪ್ಯೂಮ್'ಅನ್ನು ಸಿಂಪಡಿಸಿಕೊಂಡರೆ ದೇಹ ಹೆಚ್ಚು ಹೊತ್ತು ಪರಿಮಳಯುಕ್ತವಾಗಿರುತ್ತದೆ.

2. ನಿರ್ದಿಷ್ಟ ಭಾಗಗಳು

ತಲೆಕೂದಲಿಗೆ, ಕಿವಿಯ ಹಿಂಭಾಗ, ಮಣಿಕಟ್ಟು, ಗಂಟಲಿನ ಕೆಳಭಾಗ, ಮಂಡಿಯ ಹಿಂಭಾಗ, ನಾಭಿ ಸುತ್ತಮುತ್ತ, ಬೆನ್ನಿನ ಕೆಳಭಾಗ ಮಾತ್ರವೇ ಸುಗಂಧದ್ರವ್ಯ ಸಿಂಪಡಿಸಿಕೊಳ್ಳಬೇಕು ಎನ್ನುವುದು ಪರ್ಪ್ಯೂಮ್  ತಜ್ಞರ ಮಾತು. ಇವೆಲ್ಲ ಹೆಚ್ಚು ಉಷ್ಣಾಂಶ ಪ್ರಕಟಿಸುವ ಜಾಗಗಳು. ದುರ್ಗಂಧಕ್ಕೆ ದಾರಿ ಮಾಡಿಕೊಡುವ ಪ್ರದೇಶಗಳು.

3. ಉಜ್ಜಬೇಡಿ

ಅನೇಕರಿಗೆ ಸೆಂಟ್ ಪೂಸಿಕೊಂಡ ತಕ್ಷಣವೇ ಆ ಜಾಗವನ್ನು ಉಜ್ಜಿಕೊಳ್ಳುವ ಅಭ್ಯಾಸವಿರುತ್ತದೆ. ಇದರಿಂದ ಚರ್ಮಕ್ಕೆ ಏನೂ ಹಾನಿ ಇಲ್ಲ. ಆದರೆ, ಸುಗಂಧ ದ್ರವ್ಯ ಸಿಂಪಡಿಸಿಯೂ ಏನೂ ಪ್ರಯೋಜನವಿಲ್ಲವಾಗುತ್ತದೆ. ದ್ರವ್ಯದ ಅಣುಗಳು ಬೇರ್ಪಡುವುದರಿಂದ ಅವು ಪರಿಮಳದ ಶಕ್ತಿಯನ್ನೇ ಕಳೆದುಕೊಳ್ಳುತ್ತವೆ.

4. ಮೈಮೇಲಷ್ಟೇ ಸಿಂಪಡಣೆ

ಮತ್ತೆ ಕೆಲವರಿಗೆ ಬಟ್ಟೆಯ ಮೇಲೂ ಪರ್ಪ್ಯೂಮ್ ಬಳಿದುಕೊಳ್ಳುವ ಅಭ್ಯಾಸವಿರುತ್ತದೆ. ಈ ರಾಸಾಯನಿಕಗಳು ಬಟ್ಟೆಯ ಗುಣಮಟ್ಟವನ್ನು ಹಾಳು ಮಾಡುವುದಲ್ಲದೆ, ಬಟ್ಟೆಯ ಬಣ್ಣ ಬಿಟ್ಟು ಚರ್ಮದ ಅಲರ್ಜಿಗೂ ದಾರಿ ಮಾಡಿಕೊಡುವ ಸಾಧ್ಯತೆಯಿರುತ್ತದೆ.

5. ಉಷ್ಣಪ್ರದೇಶದಲ್ಲಿ ಇಡದಿರಿ

ಸುಗಂಧದ್ರವ್ಯ ಕೂಡ ಸೂಕ್ತ ವಾತಾವರಣ ಬಯಸುತ್ತದೆ. ಬಿಸಿಲು ಬೀಳುವ, ಉಷ್ಣ ಇರುವ ಪ್ರದೇಶಗಳಲ್ಲಿ ಇದನ್ನು ಇಡಲೇಬಾರದು. ಹಾಗೆ ಇಟ್ಟಂತೆ ಇದರ ಗುಣಮಟ್ಟ ಹಾಳಾಗುತ್ತದೆ. ಆದಷ್ಟು ಶೀತದ ವಾತಾವರಣ ಇರುವ ಅಥವಾ ಫ್ರಿಡ್ಜಿನಲ್ಲಿಟ್ಟರೂ ನಡೆಯುತ್ತದೆ.

6. ಪರಸ್ಪರ ಬಳಕೆ ಬೇಡ

ಕಂಪನಿಗಳು ತಜ್ಞರ ನೇತೃತ್ವದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ತಕ್ಕಂತೆ ಸುಗಂಧದ್ರವ್ಯಗಳನ್ನು ಸಿದ್ಧಪಡಿಸಿರುತ್ತವೆ. ಆದರೆ, ಮಹಿಳೆಯರ ಪರ್ಪ್ಯೂಮ್ ಅನ್ನು ಪುರುಷರೂ, ಪುರುಷರ ಪರ್ಪ್ಯೂಮ್ ಅನ್ನು ಮಹಿಳೆಯರು ಪರಸ್ಪರ ಬಳಸುವುದು ಅವರವರ ಚರ್ಮಕ್ಕೆ ಹಾನಿ.

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios