ಆಫೀಸ್ ಗೆ ಯಾವ ಡ್ರೆಸ್ ಧರಿಸೋದು ಅನ್ನೋ ಯೋಚ್ನೆ ಇದ್ರೆ ಇದನ್ನ ಓದಿ…
ವಾರ್ಡ್ರೋಬ್ ನಲ್ಲಿ (wardrobe) ಸಾಕಷ್ಟು ಬಟ್ಟೆಗಳನ್ನು ಹೊಂದಿದ್ದರೂ, ಪ್ರತಿದಿನ ಕಚೇರಿಗೆ ಡ್ರೆಸ್ (Office Wear) ಆಯ್ಕೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ ಏಕೆಂದರೆ ಈ ಲೇಖನದಲ್ಲಿ ನಾವಿಂದು ಇಂದು ಆಫೀಸ್ ನಲ್ಲಿ ಏನು ಧರಿಸೋದು ಬೆಸ್ಟ್ ಅನ್ನೋದನ್ನು ಹೇಳ್ತೀವಿ ಕೇಳಿ.

ಪ್ರತಿಯೊಬ್ಬ ದುಡಿಯುವ ಮಹಿಳೆಗೂ ಬೆಳಗ್ಗೆ ಎದ್ದ ಮೇಲಿನ ದೊಡ್ಡ ಪ್ರಶ್ನೆಯೆಂದರೆ, ಇಂದು ಏನನ್ನು ಧರಿಸಬೇಕು ಅನ್ನೋದು. ಆಫೀಸ್ ನಲ್ಲಿ ಪಾರ್ಟಿ (office party) ಇದ್ದರೆ, ಗೆಟ್ ಟು ಗೆದರ್ ಇದ್ದರೆ, ಸೆಂಡ್ ಆಫ್ ಪಡೆಯಿರಿ, ಆಗ ಏನಪ್ಪಾ ಧರಿಸೋದು ಅನ್ನೋ ಟೆನ್ಶನ್ ಹೆಚ್ಚಾಗುತ್ತೆ.
ವಾರ್ಡ್ರೋಬ್ ನಲ್ಲಿರುವ ಬಟ್ಟೆಗಳ ರಾಶಿಯಿಂದ ಪ್ರತಿಯೊಂದು ಡ್ರೆಸ್ ತೆಗೆದುಕೊಳ್ಳುವುದು ಎಲ್ಲಾ ಒಕೇಶನ್ ಗೆ ಪರ್ಫೆಕ್ಟ್ ಅನ್ಸೋದಿಲ್ಲ. ಏಕೆಂದರೆ ಶಾಪಿಂಗ್ (Shopping) ಸಮಯ ಬಂದಾಗ, ಆಫೀಸ್ ಬಗ್ಗೆ ನಾವು ಹೆಚ್ಚಾಗಿ ತಲೆ ಕೆಡ್ಸೋದಿಲ್ಲ. ಮದುವೆ, ಔಟಿಂಗ್ಗೆ (Outing) ಬೇಕಾದ ರೀತಿಯ ಡ್ರೆಸ್ ಮಾತ್ರ ಆಯ್ಕೆ ಮಾಡ್ಕೊಳ್ಳುತ್ತೇವೆ.
ಆಫೀಸಿಗೆ ಹೋಗೋವಾಗ ಯಾವ ರೀತಿಯ ಡ್ರೆಸ್ ಧರಿಸಬೇಕು, ಅದನ್ನು ಹೇಗೆ ಆಯ್ಕೆ ಮಾಡಬೇಕು ಅನ್ನೋ ಬಗ್ಗೆ ವಿವರಣೆ ನೀಡಲಾಗಿದೆ. ನೀವು ಇದನ್ನು ತಿಳಿದುಕೊಂಡ್ರೆ ಬೆಳಗ್ಗೆ ಆಫೀಸ್ ಗೆ ಹೊರಡೋವಾಗ ಏನು ಧರಿಸೋದು ಅನ್ನೋದ್ರ ಬಗ್ಗೆ ಯೋಚ್ನೆ ಮಾಡೋದೆ ಬೇಡ.
ಆರಾಮದಾಯಕ ಆಯ್ಕೆ ಮಾಡಿ
ಆಫೀಸ್ ವೇರ್ ಡ್ರೆಸ್ (office wear dress)ಹೇಗಿರಬೇಕು ಅಂದ್ರೆ ಬಹಳ ಸಮಯದವರೆಗೆ ಕುಳಿತುಕೊಳ್ಳುವಾಗ ಹೆಚ್ಚು ಆರಾಮವಾಗಿ ಇರಬೇಕು. ಹಾಗಾಗಿ, ಲೈಟ್ ವೈಟ್ (Light Weight) ಇರುವ ಮತ್ತು ಸಾಫ್ಟ್ ಬಟ್ಟೆಯ ಡ್ರೆಸ್ ಗಳು ದೀರ್ಘ ಕಾಲ ಕುಳಿತುಕೊಳ್ಳುವಾಗ ಆರಾಮದಾಯಕ ಅನುಭವ ನೀಡುತ್ತೆ. ಅಲ್ಲದೆ, ಆಫೀಸ್ ವೇರ್ ನ್ಯಾಚುರಲ್ ಶೇಡ್ ಆಗಿದ್ದರೆ ಉತ್ತಮ.
ಅಗತ್ಯವಿರುವ ಅಕ್ಸೆಸರಿಗಳು
ಕಪ್ಪು ಟೀ-ಶರ್ಟ್ (black t shirt)ಮೇಲೆ, ಫಿರೋಜಿ ಸ್ಟೋನ್ ಹಾರ ಅಥವಾ ಮಣಿಗಳ ಹಾರ ಧರಿಸಿದ್ರೆ ಚೆನ್ನಾಗಿ ಕಾಣುತ್ತೆ.
ಪಲಾಜೊ ಸೂಟ್ ಧರಿಸಿದ್ದರೆ, ಹ್ಯಾಂಗಿಂಗ್ ಇಯರ್ ರಿಂಗ್ ಚೆನ್ನಾಗಿ ಕಾಣುತ್ತವೆ. ಕಚೇರಿಯಲ್ಲಿ ಒಂದು ಫಂಕ್ಷನ್ ಇದ್ದರೆ, ಸಣ್ಣ ಕಿವಿಯೋಲೆಗಳನ್ನು ಸಹ ಧರಿಸಬಹುದು.
ಅಗತ್ಯದ್ರೆ ಮಾತ್ರ ಕಡಗ ಮತ್ತು ಕೈಯಲ್ಲಿರುವ ಗಡಿಯಾರ (watch) ಬಿಟ್ಟು ಬೇರೆ ಏನಾದರೂ ಧರಿಸಿ. ಇಲ್ಲವಾದರೆ ಸಿಂಪಲ್ ಆಗಿರಿ.
ನೀವು ಸೀರೆ (Saree) ಧರಿಸಲು ಬಯಸಿದರೆ, ಚಿನ್ನ ಅಥವಾ ಬೆಳ್ಳಿಯ ಆಭರಣ ತಪ್ಪಿಸಿ. ಅದರ ಬದಲು ಕಲ್ಲು ಅಥವಾ ದಾರದ ಆಭರಣಗಳನ್ನು ಧರಿಸಿ.
ಫೂಟ್ ವೇರ್ ಬಗ್ಗೆ ಗಮನ ಹರಿಸಿ
ಲೋಫರ್ ಧರಿಸುವುದು ಕಚೇರಿಯಲ್ಲಿ ಹೆಚ್ಚು ಆರಾಮದಾಯಕವಾಗಿದೆ. ಇದನ್ನು ಹಾಕೋದ್ರಿಂದ ಹೆಚ್ಚು ನಡೆದರೂ ನೋವು ಅನಿಸೋದಿಲ್ಲ. ಹಾಗಾಗಿ ಹೀಲ್ಸ್ (heels) ಬದಲು ಪ್ರತಿದಿನ ಲೋಫರ್ ಟ್ರೈ ಮಾಡಬಹುದು.
ನೀವು ಹೀಲ್ಸ್ ಧರಿಸಲು ಬಯಸಿದರೆ, ಪ್ಲಾಟ್ಫಾರ್ಮ್ ಹೀಲ್ಸ್ ಧರಿಸಿ.ಇದು ಸ್ಟೈಲಿಶ್ ಲುಕ್ ನೀಡುತ್ತೆ. ಹೆಚ್ಚು ಹೊಳೆಯುವ ಚಪ್ಪಲಿಗಳು ಅಥವಾ ಚಪ್ಪಲಿಗಳನ್ನು ಧರಿಸುವುದನ್ನು ತಪ್ಪಿಸಿ. ಇದು ಆಫೀಸ್ ಗೆ ಸೂಕ್ತವಲ್ಲ. ಸ್ಟೈಲಿಶ್ ಆಗಿ ಕಾಣೋದಿಲ್ಲ.
ಹ್ಯಾಂಡ್ ಬ್ಯಾಗ್ (hand bag) ಹೀಗಿರಲಿ
ನೀವು ಕಚೇರಿಗೆ ಹೋಗಬೇಕಾದರೆ, ಟಿಫಿನ್ ಸೇರಿ ಹಲವು ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಅದನ್ನೆಲ್ಲಾ ಇಡಲು ಬ್ಯಾಗ್ ಬೇಕು. ಬ್ಯಾಗ್ ಯಾವತ್ತೂ ಸಣ್ನದಾಗಿರಲಿ, ದೊಡ್ಡದಾದಷ್ಟು ವಸ್ತುಗಳು ಸಹ ಹೆಚ್ಚಾಗುತ್ತೆ. ಇನ್ನು ಬ್ಯಾಗ್ ಬ್ಲ್ಯಾಕ್ ಅಥವಾ ಬ್ಲೂ ಬಣ್ಣದಲ್ಲಿದ್ದರೆ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.