Vastu Tips: ದಿನ ನೋಡಿ ಶಾಪಿಂಗ್ ಮಾಡಿ, ಇಲ್ಲಿವೆ ಸಿಂಪಲ್ ಟಿಪ್ಸ್
ಶಾಪಿಂಗ್ ಅಂದ ತಕ್ಷಣ ಕಿವಿ ನೆಟ್ಟಗಾಗುತ್ತದೆ. ಶಾಪಿಂಗ್ ಯಾರಿಗೆ ಇಷ್ಟವಿಲ್ಲ ಹೇಳಿ. ಆದ್ರೆ ಮನಸ್ಸಿಗೆ ಬಂದ ಹಾಗೆ ಶಾಪಿಂಗ್ ಮಾಡುವ ಬದಲು ದಿನ ನೋಡಿ ಖರೀದಿ ಮಾಡಿದ್ರೆ ಒಳ್ಳೆಯದು.
ನಾವು ಮಾಡುವ ಪ್ರತಿಯೊಂದು ಕೆಲಸ (Work) ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಬಾರಿ ನಮಗೆ ತಿಳಿಯದೇ ನಾವು ಮಾಡಿದ ತಪ್ಪಿಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿ ದಿನಕ್ಕೆ ವಿಶೇಷ ಮಹತ್ವವಿದೆ. ವಾರದ ಏಳು ದಿನ (Seven Days) ಗಳನ್ನು ಒಂದೊಂದು ದೇವರಿ (God) ಗೆ ಮೀಸಲಿಡಲಾಗಿದೆ. ಜನರು, ಆ ದಿನ ಆಯಾ ದೇವರಿಗೆ ವಿಶೇಷ ಪೂಜೆ ಸಲ್ಲಿಸ್ತಾರೆ. ಯಾವುದೇ ಕೆಲಸ ಮಾಡುವಾಗ್ಲೂ ಜನರು ಶುಭ ದಿನ ಹಾಗೂ ಮಂಗಳಕರ ಕ್ಷಣವನ್ನು ನೋಡ್ತಾರೆ. ಆ ಶುಭ ಸಮಯದಲ್ಲಿ ಕೆಲಸ ಮಾಡಲು ಬಯಸ್ತಾರೆ. ಆ ದಿನ ಹಾಗೂ ಸಮಯದಲ್ಲಿ ಕೆಲಸ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಿಗಿದೆ. ಸಾಮಾನ್ಯವಾಗಿ ಜನರು ಮನೆ ಪ್ರವೇಶ, ಮದುವೆ (Wedding), ಪೂಜೆ ಸೇರಿದಂತೆ ಕೆಲ ಶುಭ ಕೆಲಸಕ್ಕೆ ಮಾತ್ರ ಮುಹೂರ್ತ ನೀಡ್ತಾರೆ. ಪ್ರವಾಸ, ಶಾಪಿಂಗ್ (Shopping ) ನಂತಹ ವಿಷ್ಯಕ್ಕೆ ಯಾರೂ ಮುಹೂರ್ತ ನೋಡಲು ಹೋಗುವುದಿಲ್ಲ. ಕೈನಲ್ಲಿ ಹಣವಿದ್ದಾಗ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದ್ರೆ ಹಿಂದೂ ಧರ್ಮದ ಪ್ರಕಾರ ಇದು ಸೂಕ್ತವಲ್ಲ. ಶಾಪಿಂಗ್ ಗೆ ಕೆಲ ದಿನಗಳು ನಿಗದಿಯಾಗಿವೆ. ಆಯಾ ದಿನ ಆಯಾ ವಸ್ತುಗಳನ್ನು ಖರೀದಿ ಮಾಡ್ಬೇಕು. ಬೇರೆ ದಿನಗಳಲ್ಲಿ ಅದನ್ನು ಖರೀದಿ ಮಾಡಿದ್ರೆ ಅಶುಭ ಫಲ ಪ್ರಾಫ್ತಿಯಾಗುತ್ತದೆ ಎಂದು ನಂಬಲಾಗಿದೆ. ಇಂದು ನಾವು ವಾರದ ಏಳು ದಿನಗಳಲ್ಲಿ ಯಾವ ಯಾವ ದಿನ, ಏನೇನು ಖರೀದಿ ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಸೋಮವಾರ (Monday) : ಎಲ್ಲರಿಗೂ ತಿಳಿದಿರುವಂತೆ ಸೋಮವಾರ ಶಿವನಿಗೆ ಸಮರ್ಪಿತವಾಗಿದೆ. ಈ ದಿನ ಕಂಪ್ಯೂಟರ್, ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವುದು ಅಶುಭವೆಂದು ನಂಬಲಾಗಿದೆ. ದಿನ ಧಾನ್ಯಗಳು, ಡೈರಿ ಉತ್ಪನ್ನಗಳನ್ನು ಖರೀದಿಸುವುದು ಮಂಗಳಕರವಾಗಿದೆ. ಹಾಗಾಗಿ ಸೋಮವಾರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬೇಡಿ.
ಅತ್ಯಂತ ಅಪಾಯಕಾರಿ ರತ್ನಗಳಿವು! ಬೇಕಾಬಿಟ್ಟಿ ಧರಿಸಿದ್ರೆ ಜೀವನ ಬರ್ಬಾದ್
ಮಂಗಳವಾರ (Tuesday) : ಮಂಗಳವಾರವನ್ನು ಹನುಮಂತನಿಗೆ ಅರ್ಪಿಸಲಾಗಿದೆ. ಆ ದಿನ ಹನುಮಂತನಿಗೆ ವಿಶೇಷ ಪೂಜೆ ನಡೆಯುತ್ತದೆ. ಮಂಗಳವಾರ ನೀವು ಪಾದರಕ್ಷೆ ಅಥವಾ ಕಬ್ಬಿಣದ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಬುಧವಾರ (Wednsday) : ಬುಧವಾರ ಗಣೇಶನ ದಿನ. ಹಾಗೆಯೇ ತಾಯಿ ಸರಸ್ವತಿಯ ದಿನ ಎಂದು ನಂಬಲಾಗಿದೆ. ಈ ದಿನ ಔಷಧಿಗಳು, ಪಾತ್ರೆಗಳು ಮತ್ತು ಅಕ್ವೇರಿಯಂಗಳನ್ನು ಖರೀದಿಸಬಾರದು. ಈ ದಿನ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಖರೀದಿಸಬೇಕು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಶನಿ ದೋಷವಿದ್ರೆ ನಿಮ್ಮಲ್ಲಿ ಈ ಸಮಸ್ಯೆಗಳು ಕಂಡು ಬರುತ್ತೆ!
ಗುರುವಾರ (Thursday) : ಗುರುವಾರವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ. ಈ ದಿನ ಯಾವುದೇ ಪಾತ್ರೆಗಳು ಅಥವಾ ಚೂಪಾದ ವಸ್ತುಗಳನ್ನು ಖರೀದಿಸಬಾರದು. ಇದು ಅಶುಭ. ಗುರುವಾರದಂದು ಎಲೆಕ್ಟ್ರಾನಿಕ್ ಅಥವಾ ಆಸ್ತಿ ಸಂಬಂಧಿತ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಶುಕ್ರವಾರ (Friday) : ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಈ ದಿನ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸುವುದು ಮಂಗಳಕರವಾಗಿದೆ. ಶುಕ್ರವಾರದಂದು ನೀವು ಪೂಜೆಗೆ ಸಂಬಂಧಿಸಿದ ವಸ್ತುಗಳು, ಬಟ್ಟೆ ಸೇರಿದಂತೆ ಮಂಗಳಕರ ವಸ್ತುಗಳನ್ನು ಕೂಡ ಖರೀದಿ ಮಾಡ್ಬಹುದು.
ಶನಿವಾರ (Saturday) : ಈ ದಿನ ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಉಪ್ಪು ಇತ್ಯಾದಿಗಳನ್ನು ಖರೀದಿಸಬಾರದು. ಈ ದಿನ ಯಂತ್ರೋಪಕರಣಗಳು ಮತ್ತು ಪೀಠೋಪಕರಣಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಭಾನುವಾರ (Sunday) : ಭಾನುವಾರ ರಜೆ ಇರುವ ಕಾರಣ ಜನರು ಒಂದು ವಾರಕ್ಕಾಗುವಷ್ಟು ಎಲ್ಲ ರೀತಿಯ ವಸ್ತುಗಳನ್ನು ಖರೀದಿಸುತ್ತಾರೆ. ಆದ್ರೆ ಇದು ತಪ್ಪು. ಭಾನುವಾರ ಕಬ್ಬಿಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ಸೂಕ್ತವಲ್ಲ. ಕೆಂಪು ಬಣ್ಣದ ವಸ್ತುಗಳು, ಗೋಧಿ, ಔಷಧಗಳು ಇತ್ಯಾದಿಗಳನ್ನು ಈ ದಿನ ಖರೀದಿಸಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.