ಐಬ್ರೋ ಹೇರ್ ಹೆಚ್ಚಿಸಲು ಈ ಎಣ್ಣೆ ಟ್ರೈ ಮಾಡಿ
ಐಬ್ರೋ ನಿಮ್ಮ ಕಣ್ಣುಗಳ ಸೌಂದರ್ಯ ಹೆಚ್ಚಿಸುತ್ತೆ. ನಿಮ್ಮ ಹುಬ್ಬು ತೆಳ್ಳಗೆ ಮತ್ತು ತಿಳಿ ಬಣ್ಣದಲ್ಲಿದ್ದರೆ, ಅದು ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಅನೇಕ ಮಹಿಳೆಯರು ಐಬ್ರೋಕಪ್ಪು ಮತ್ತು ದಪ್ಪವಾಗಿಸಲು ವಿವಿಧ ಕ್ರಮ ತೆಗೆದುಕೊಳ್ಳುತ್ತಾರೆ.

ಐಬ್ರೋ (Eye brow)ಹೆಚ್ಚಿಸಲು, ದಪ್ಪವಾಗಿಸಲು ನೀವು ಸಹ ಹೋಂ ರೆಮೆಡಿಸ್ ಅಳವಡಿಸಿಕೊಳ್ಳಲು ಬಯಸಿದರೆ, ನೀವು ಅನೇಕ ರೀತಿಯ ಎಣ್ಣೆ ಬಳಸಬಹುದು. ಹೌದು, ಅನೇಕ ಎಣ್ಣೆಗಳಿವೆ, ಅವುಗಳ ಸಹಾಯದಿಂದ ಐಬ್ರೋ ಹೆಚ್ಚಿಸಬಹುದು.
ಐಬ್ರೋ ಆಯಿಲ್ (Oil)ಹುಬ್ಬುಗಳನ್ನು ಕಪ್ಪಾಗಿಸಲು ಸಹ ಸಹಾಯ ಮಾಡುತ್ತೆ. ಐಬ್ರೋ ಹೆಚ್ಚಿಸಲು ಯಾವ ಎಣ್ಣೆ ಬಳಸಬೇಕು ಎಂದು ತಿಳಿಯೋಣ? ಇವುಗಳನ್ನು ಬಳಸಿ ಸುಂದರವಾದ, ಆಕರ್ಷಕ ಮುಖವನ್ನು ಪಡೆಯಿರಿ.
ಐಬ್ರೋ ಬೆಳವಣಿಗೆ ಯಾವ ಎಣ್ಣೆ ಒಳ್ಳೆದು?
ಆಲಿವ್ ಎಣ್ಣೆ(Olive oil)
ಐಬ್ರೋ ವೇಗವಾಗಿ ಹೆಚ್ಚಿಸಲು ಮಲಗುವ ಮೊದಲು ಆಲಿವ್ ಎಣ್ಣೆಯನ್ನು ನಿಯಮಿತವಾಗಿ ಬಳಸಿ. ಆಲಿವ್ ಎಣ್ಣೆಯಿಂದ ಐಬ್ರೋ ಮಸಾಜ್ ಮಾಡೋದ್ರಿಂದ ಕಣ್ಣುಗಳ ಸೌಂದರ್ಯ ಹೆಚ್ಚುತ್ತೆ. ಹಾಗೆಯೇ ಇದು ಐಬ್ರೋ ಬೆಳವಣಿಗೆ ಚೆನ್ನಾಗಿ ಕಾಣಲು ಸಹ ಸಹಾಯ ಮಾಡುತ್ತೆ.
ಬಾದಾಮಿ ಎಣ್ಣೆ(Almond oil)
ಐಬ್ರೋ ಹೆಚ್ಚಿಸಲು ಬಾದಾಮಿ ಎಣ್ಣೆ ಕೂಡ ಸಾಕಷ್ಟು ಆರೋಗ್ಯಕರ. ಈ ಎಣ್ಣೆ ಐಬ್ರೋ ಬೆಳವಣಿಗೆಯನ್ನು ಸುಧಾರಿಸುತ್ತೆ. ಇದು ಹುಬ್ಬು ಗಾಢವಾಗಿಸಬಹುದು. ಇದಕ್ಕಾಗಿ, ರಾತ್ರಿ ಮಲಗುವ ಮೊದಲು ನಿಯಮಿತವಾಗಿ ಹುಬ್ಬುಗಳಿಗೆ ಬಾದಾಮಿ ಎಣ್ಣೆ ಹಚ್ಚಿ.
ಜೋಜೊಬಾ ಎಣ್ಣೆ(Jojoba oil)
ಜೋಜೊಬಾ ಎಣ್ಣೆಯನ್ನು ಹುಬ್ಬುಗಳ ಮೇಲೆ ಹಚ್ಚುವುದರಿಂದ ಹುಬ್ಬುಗಳ ಬೆಳವಣಿಗೆಯೂ ಸುಧಾರಿಸುತ್ತೆ. , ಇದು ಐಬ್ರೋವನ್ನು ಕಪ್ಪಾಗಿಸಬಹುದು. ಇವುಗಳನ್ನು ನೀವು ಟ್ರೈ ಮಾಡಿ ನೋಡಿ.
ಐಬ್ರೋ ಹೆಚ್ಚಿಸಲು ನೀವು ಜೋಜೊಬಾ ಎಣ್ಣೆ ಬಳಸಬಹುದು. ಈ ಎಣ್ಣೆಗಳಿಂದ ಯಾವುದಾದರೂ ಅಲರ್ಜಿಯ(Allergy) ದೂರುಗಳಿದ್ದರೆ, ಅದನ್ನು ನೇರವಾಗಿ ಚರ್ಮದ ಮೇಲೆ ಹಚ್ಚಬೇಡಿ ಎಂಬುದನ್ನು ನೆನಪಿನಲ್ಲಿಡಿ. ಈ ಎಣ್ಣೆ ಚರ್ಮದ ಮೇಲೆ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.