ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ 'ಅಂತರಪಟ' ಸೀರಿಯಲ್ ನಟಿ, ಗಿಣಿ ಮೂಗು ಸುಂದರಿ ಎಂದ ಫ್ಯಾನ್ಸ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನರ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲೊಂದು 'ಅಂತರಪಟ' ಸೀರಿಯಲ್. ಈ ಧಾರಾವಾಹಿಯಲ್ಲಿ ನಾಯಕಿಯಾಗಿರುವುದು ಆರಾಧನಾ ಉರ್ಫ್ ತನ್ವಿ. ಇತ್ತೀಚಿಗೆ ಹಳದಿ ಮತ್ತು ನೇರಳೆ ಬಣ್ಣದ ಮೈಸೂರು ಸಿಲ್ಕ್ ಸೀರೆಯುಟ್ಟು ಸಖತ್ತಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನರ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲೊಂದು 'ಅಂತರಪಟ' ಸೀರಿಯಲ್. ಮಿಡ್ಲ್ ಕ್ಲಾಸ್ ಹುಡುಗಿಯ ಜೀವನದ ಕಥಾಹಂದರವನ್ನು ಹೊಂದಿರುವ ಸೀರಿಯಲ್ ಪ್ರೇಕ್ಷಕರಿಗೂ ಅಚ್ಚುಮೆಚ್ಚು. ಈ ಧಾರಾವಾಹಿಯಲ್ಲಿ ನಾಯಕಿಯಾಗಿರುವುದು ಆರಾಧನಾ ಉರ್ಫ್ ತನ್ವಿ
ಅಂತರಪಟ ಸೀರಿಯಲ್ನಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ಬೊಂಬೆ, ನೇಹಾ ಗೌಡರ ಪತಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ತನ್ವಿ ಬಾಲರಾಜ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ತನ್ವಿ ನಿಜ ಜೀವನದಲ್ಲಿಯೂ ಮಿಡಲ್ ಕ್ಲಾಸ್ ಕುಟುಂಬದಿಂದಲೇ ಬಂದವರು. ಹೀಗಾಗಿಯೇ ಇವರ ಅಭಿನಯ ಎಲ್ಲರಿಗೂ ಇಷ್ಟವಾಗುತ್ತಿದೆ.
ತನ್ವಿ ಬಾಲರಾಜ್ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ಯಾವಾಗಲೂ ತಮ್ಮ ಸುಂದರವಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಹಳದಿ ಮತ್ತು ನೇರಳೆ ಬಣ್ಣದ ಮೈಸೂರು ಸಿಲ್ಕ್ ಸೀರೆಯುಟ್ಟು ಸಖತ್ತಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ತನ್ವಿ, ತನ್ನ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಟ್ರೆಡಿಶನಲ್ ಹಾಗೂ ಮಾಡರ್ನ್ ಲುಕ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಆದ್ರೆ ಇತ್ತೀಚಿಗಿನ ಸ್ಯಾರಿ ಲುಕ್ಗೆ ಮಾತ್ರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮೈಸೂರು ಸಿಲ್ಕ್ ಸೀರೆಯುಟ್ಟ ತನ್ವಿ ಪರ್ಲ್ ನೆಕ್ಲೇಸ್, ಇಯರಿಂಗ್ ಧರಿಸಿ ಮುದ್ದಾಗಿ ನಗೆ ಬೀರಿದ್ದಾರೆ. ನೆಟ್ಟಿಗರು ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ದೇವತೆ, ಗಾರ್ಜಿಯಸ್, ಕ್ಯೂಟ್, ಗಿಣಿ ಮೂಗು ಸುಂದರಿ, ಬ್ಯೂಟಿಫುಲ್ ಸ್ಮೈಲ್ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು ಸೀರಿಯಲ್ನಲ್ಲಿ ನಿಮ್ಮ ಆಕ್ಟಿಂಗ್ ಸಿಕ್ಕಾಪಟ್ಡೆ ಸೂಪರ್ ಆಗಿದೆ ಮೇಡಂ ಎಂದು ಹೇಳಿದ್ದಾರೆ.
ತನ್ವಿ ತಂದೆ ಮಂಡ್ಯದಲ್ಲಿ ಕಾಂಟ್ರ್ಯಾಕ್ಟ್ ಕೆಲಸ ಮಾಡುತ್ತಾರೆ, ತಾಯಿ ಹೂವ ಕಟ್ಟಿ ಮಾರುತ್ತಾರೆ. ಮೂವರು ಹೆಣ್ಣುಮಕ್ಕಳಲ್ಲಿ ತನ್ವಿ ಕೊನೆಯವರು. ಇಬ್ಬರು ಅಕ್ಕಂದಿರು ಮದುವೆಯಾಗಿ ಬೆಂಗಳೂರಿನಲ್ಲಿದ್ದಾರೆ.
ಗಿಣಿರಾಮಾ ಸೀರಿಯಲ್ನ ವಿಶೇಷ ಎಪಿಡೋಸ್ ಶೂಟಿಂಗ್ ಸಮಯದಲ್ಲಿ ಪ್ರಮುಖ ಪಾತ್ರಧಾರಿಗಳಿಗೆ ತನ್ವಿ ಡ್ಯಾನ್ಸ್ ಹೇಳಿಕೊಡುತ್ತಿದ್ದರು. ಆಗ ಸೀರಿಯಲ್ EP ಕುಳಿತುಕೊಂಡು ನೋಡುತ್ತಿದ್ದರಂತೆ. ಅಲ್ಲಿ ಅವರ ಕಣ್ಣಿಗೆ ತನ್ವಿ ಕಾಣಿಸಿಕೊಂಡು ಫೋಟೋ ಪಡೆದು ಆಡಿಷನ್ ಮಾಡಿ ಧಾರಾವಾಹಿಗೆ ಆಯ್ಕೆ ಮಾಡಿದ್ದಾರೆ.
ಡ್ಯಾನ್ಸ್ನ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದು ನನ್ನ ತಂದೆಗೆ ಚೂರು ಇಷ್ಟವಿಲ್ಲ.ಹಾಗಂತ ಡ್ಯಾನ್ಸ್ ಬಿಡುವುದಕ್ಕೆ ನನಗೆ ಇಷ್ಟವೇ ಇರಲಿಲ್ಲ ಅವರಿಗೆ ಬೇಸರ ಮಾಡುವ ಉದ್ದೇಶ ನನಗೆ ಇರಲಿಲ್ಲ ಆದರೂ ನೈಟ್ ಡ್ಯಾನ್ಸ್ ಶೂಟ್ ಮುಗಿಸಿಕೊಂಡು ಕೆಲವ ಮಾಡುತ್ತಿದ್ದೆ ಎಂದು ಖಾಸಗಿ ಸಂದರ್ಶನದಲ್ಲಿ ತನ್ವಿ ತಿಳಿಸಿದ್ದರು.