ಬ್ಲ್ಯಾಕ್ ಕಲರ್ ಸೀರೆಯಲ್ಲಿ ಮಿಂಚಿದ ರಶ್ಮಿಕಾ, ವಿಜಯ್ ದೇವರಕೊಂಡಗೆ ಜೋಡಿಯಾಗಲು ರೆಡಿನಾ ಅಂತಿದ್ದಾರೆ ನೆಟ್ಟಿಗರು
ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳೋ ಕೊಡಗಿನ ಕುವರಿ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ 'ಅನಿಮಲ್' ಚಿತ್ರದ ಸಕ್ಸಸ್ನ ನಂತರ ಇನ್ನಷ್ಟು ಫೇಮಸ್ ಆಗಿದ್ದಾರೆ. ಹೊಸ ಫೋಟೋಶೂಟ್ವೊಂದರಲ್ಲಿ ರಶ್ಮಿಕಾ ಮಂದಣ್ಣ, ಬ್ಲ್ಯಾಕ್ ಕಲರ್ ಸೀರೆಯುಟ್ಟು ಸಖತ್ ಆಗಿ ಫೋಸ್ ಕೊಟ್ಟಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳೋ ಕೊಡಗಿನ ಕುವರಿ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ 'ಅನಿಮಲ್' ಚಿತ್ರದ ಸಕ್ಸಸ್ನ ನಂತರ ಇನ್ನಷ್ಟು ಫೇಮಸ್ ಆಗಿದ್ದಾರೆ. ಫ್ಯಾನ್ ಫಾಲೋವಿಂಗ್ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ನಟಿ ಫೋಟೋಶೂಟ್ ಮಾಡಿಸ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ಹೊಸ ಫೋಟೋಶೂಟ್ವೊಂದರಲ್ಲಿ ರಶ್ಮಿಕಾ ಮಂದಣ್ಣ, ಬ್ಲ್ಯಾಕ್ ಕಲರ್ ಸೀರೆಯುಟ್ಟು ಸಖತ್ ಫೋಸ್ ಕೊಟ್ಟಿದ್ದಾರೆ. ಕಪ್ಪು ಬಣ್ಣದಲ್ಲಿ ಆರೆಂಜ್ ಕಲರ್ ಫ್ಲವರ್ಸ್ ಇರೋ ಸೀರೆಯಲ್ಲಿ ರಶ್ಮಿಕಾ ತುಂಬಾ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ. ಮುದ್ದಾದ ಫೋಟೋಗೆ ನೆಟ್ಟಿಗರು ಹಾರ್ಟ್ ಎಮೋಜಿ, ಲೈಕ್ಸ್ ಕಳುಹಿಸಿ ಕೊಟ್ಟಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಅಲ್ಲು ಅರ್ಜುನ್ ಜೊತೆಗಿನ 'ಪುಷ್ಪಾ' ಸಿನಿಮಾ ಸೂಪರ್ಹಿಟ್ ಆದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಈಗ ಬ್ಯುಸಿಯಾಗಿದ್ದಾರೆ. ತನ್ನ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದ ರಶ್ಮಿಕಾ ಇದೀಗ ಹೊಸ ಫೋಟೋಶೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ರಶ್ಮಿಕಾ ಚಾಕೊಲೇಟ್ ಕಲರ್ನ ಶಾರ್ಟ್ ಡ್ರೆಸ್ ಹಾಕ್ಕೊಂಡು ರಶ್ಮಿಕಾ ಮಂದಣ್ಣ ಮಿಂಚಿದ್ದರು. ಅದರ ನಂತರ ಈಗ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ರಶ್ಮಿಕಾ ನಯಾ ಲುಕ್ಗೆ 16 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಸಾವಿರಾರು ಕಾಮೆಂಟ್ಸ್ ಬಂದಿದೆ.
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಲುಕ್ ನೋಡಿ ನೆಟ್ಟಿಗರು, ಹಾಟ್, ಸೋ ಬ್ಯೂಟಿಫುಲ್, ನ್ಯಾಷ್ನಲ್ಲ ಕ್ರಶ್ಮಿಕಾ ಹಾಗೂ ಟೆಡ್ಡಿಬೇರ್ಗಿಂತ ನೀವೆ ಸುರಸುಂದರಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದಲ್ಲಿ ರಣ್ಬೀರ್- ರಶ್ಮಿಕಾ ಜೋಡಿ ಮೋಡಿ ಮಾಡಿದೆ. ಲಿಪ್ಲಾಕ್ ಸೇರಿದಂತೆ ಹಲವು ಹಸಿಬಿಸಿ ದೃಶ್ಯಗಳಲ್ಲಿ ಕೊಡಗಿನ ಬೆಡಗಿ ನಟಿಸಿದ್ದಾರೆ. ಅನಿಮಲ್ ಸಿನಿಮಾದ ಸಕ್ಸಸ್ನಿಂದ ರಶ್ಮಿಕಾ ಬಾಲಿವುಡ್ನಲ್ಲಿ ಮತ್ತಷ್ಟು ಮನ್ನಣೆ ಸಿಕ್ಕಿದೆ.
ಅದೆಷ್ಟೇ ಟ್ರೋಲ್ ಆದ್ರೂ ಅನಿಮಲ್ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅನಿಮಲ್ ಸಿನಿಮಾದಲ್ಲಿ ಆಂಧ್ರ ಹುಡುಗಿಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ತೆಲುಗು, ಕನ್ನಡ, ತಮಿಳು, ಹಿಂದಿ ಹೀಗೆ ಎಲ್ಲಾ ಇಂಡಸ್ಟ್ರಿಗಳಲ್ಲೂ ತಮ್ಮ ಶಕ್ತಿ ತೋರಿಸುತ್ತಿದ್ದಾರೆ.
ಹಿಂದಿಯಲ್ಲಿ ಟಾಪ್ ಟಕ್ಕರ್ ಎಂಬ ಆಲ್ಬಂ ಮೂಲಕ ಫೇಮಸ್ ಆದ ರಶ್ಮಿಕಾ ನಂತರ ‘ಗುಡ್ ಬೈ’ ಮತ್ತು ‘ಮಿಷನ್ ಮಜ್ನು’ ಚಿತ್ರಗಳ ಮೂಲಕ ಬಾಲಿವುಡ್ ಜರ್ನಿ ಆರಂಭಿಸಿದ್ರು.