ರೇಷ್ಮೆ ಸೀರೆಯುಟ್ಟು ಮಲ್ಲಿಗೆ ಮುಡಿದು 'ನಾನು ಕುಡ್ಲದ ಪೊಣ್ಣು' ಎಂದ ಪೂಜಾ ಹೆಗ್ಡೆ, ಕರಾವಳಿ ಬೆಡಗಿ ಲುಕ್ಗೆ ಫ್ಯಾನ್ಸ್ ಫಿದಾ
ಬಾಲಿವುಡ್-ಟಾಲಿವುಡ್ ಬೆಡಗಿ, ಕರಾವಳಿ ಹುಡುಗಿ ಪೂಜಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಇತ್ತೀಚಿಗೆ ಹಳದಿ ಬಣ್ಣದ ರೇಷ್ಮೆ ಸೀರೆಯುಟ್ಟು Mangalorean ಎಂದು ಶೀರ್ಷಿಕೆ ನೀಡಿ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೆಟ್ಟಿಗರು ಕುಡ್ಲದ ಹುಡುಗಿಯ ಬ್ಯೂಟಿಗೆ ಫಿದಾ ಆಗಿದ್ದಾರೆ.
ಬಾಲಿವುಡ್-ಟಾಲಿವುಡ್ ಬೆಡಗಿ, ಕರಾವಳಿ ಹುಡುಗಿ ಪೂಜಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಟ್ರೆಡಿಶನಲ್ ಹಾಗೂ ಮಾಡರ್ನ್ ಡ್ರೆಸ್ನಲ್ಲಿ ಸುಂದರವಾದ ಫೋಟೋಗಳನ್ನು ಆಗಾಗ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇತ್ತೀಚಿಗೆ ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದು ನಸು ನಗು ಬೀರಿದ್ದಾರೆ
ಹಳದಿ ಬಣ್ಣದ ರೇಷ್ಮೆ ಸೀರೆಯುಟ್ಟುಕೊಂಡಿರುವ ಪೂಜಾ, ಜಡೆ ಹೆಣೆದು ಮಲ್ಲಿಗೆ ಮುಡಿದಿದ್ದಾರೆ. ಹಸಿರು ಕಲ್ಲಿನ ನೆಕ್ಲೇಸ್, ಇಯರಿಂಗ್ಸ್, ನೆತ್ತಿ ಬೈತಲೆ, ಸೊಂಟದ ಡಾಬು ಹಾಕಿಕೊಂಡಿದ್ದಾರೆ. ಸುಂದರವಾದ ಸೀರೆಯಲ್ಲಿ ಮುದ್ದಾಗಿ ಫೋಸ್ ನೀಡಿದ್ದಾರೆ.
ಪೋಟೋಗಳಿಗೆ ಇನ್ಸ್ಟಾಗ್ರಾಂನಲ್ಲಿ The Mangalorean ಎಂದು ಶೀರ್ಷಿಕೆ ನೀಡಿಡಿದ್ದಾರೆ. ನೆಟ್ಟಿಗರು ಕುಡ್ಲದ ಹುಡುಗಿಯ ಬ್ಯೂಟಿಗೆ ಫಿದಾ ಆಗಿದ್ದಾರೆ. ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ.
ದಕ್ಷಿಣ ಭಾರತದಲ್ಲಿ ಹಿಟ್ ಚಿತ್ರಗಳನ್ನು ನೀಡಿ, ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಎಥ್ನಿಕ್ ಲುಕ್ ನಲ್ಲಿ ಸಖತ್ತಾಗಿ ಕಾಣುತ್ತಾರೆ. ಆಗಾಗ ಸೀರೆಯುಟ್ಟ ಫೋಟೋಗಳನ್ನು ಶೇರ್ ಮಾಡುತ್ತಾರೆ.
ತೆಲುಗು ಸಿನಿಮಾ ರಂಗದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ, ಸದ್ಯ ಬಾಲಿವುಡ್ ನ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಕಿಸೀ ಕಾ ಭಾಯ್, ಕಿಸೀ ಕಾ ಜಾನ್ ಸಿನಿಮಾದಲ್ಲಿ ಈ ಹಿಂದೆ ನಟಿಸಿದ್ದರು.
ಇದೀಗ ಹೊಸ ಹಿಂದಿ ಸಿನಿಮಾ ಒಂದರಲ್ಲಿ ಪೂಜಾ ನಟಿಸುತ್ತಿದ್ದು, ರೋಶನ್ ಆಂಡ್ರ್ಯೂ ನಿರ್ದೇಶನದ ದೇವಾ ಸಿನಿಮಾದಲ್ಲಿ ಶಾಹೀದ್ ಕಪೂರ್ ಗೆ ನಾಯಕಿಯಾಗಿ ಪೂಜಾ ನಟಿಸುತ್ತಿದ್ದಾರೆ.
ತಮ್ಮ ಬ್ಯುಸಿ ಕರಿಯರ್ ಮಧ್ಯ ಬಿಡುವು ಮಾಡಿಕೊಂಡು ಇತ್ತೀಚೆಗೆ ಪೂಜಾ ಮಂಗಳೂರಿಗೆ ಆಗಮಿಸಿದ್ದು, ತಮ್ಮ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ, ಮಂಗಳೂರಿನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.