ಗ್ರ್ಯಾಂಡ್ ಲೆಹಂಗಾದಲ್ಲಿ ಮಿಂಚಿದ ಸಂಗೀತಾ ಶೃಂಗೇರಿ, ಕರ್ನಾಟಕ ಕ್ರಶ್ ಎಂದು ಕರೆದ ಫ್ಯಾನ್ಸ್
ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ, ಬಿಗ್ಬಾಸ್ ಮನೆಯೊಳಗೆ ಹೋಗಿ ಬಂದ ನಂತರ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಗ್ರ್ಯಾಂಡ್ ಲೆಹಂಗಾ ತೊಟ್ಟಿರೋ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಚಾರ್ಲಿ ಬೆಡಗಿ, ಸಂಗೀತಾ ಶೃಂಗೇರಿ ಇದೀಗ ಕನ್ನಡಿಗರಿಗೆಲ್ಲಾ ಪರಿಚಯವಾದವರು. ಬಿಗ್ಬಾಸ್ ಸೀಸನ್ 10ನಲ್ಲಿ ಸ್ಟ್ರಾಂಗೆಸ್ಟ್ ಸ್ಪರ್ಧಿ ಎನಿಸಿಕೊಂಡು ಗ್ರ್ಯಾಂಡ್ ಫಿನಾಲೆಯ ವರೆಗೂ ತಲುಪಿದವರು. ಇವರು 2ನೇ ರನ್ನರ್ ಅಪ್ ಆದರೂ ವಿಶೇಷವೆಂದರೆ, ಈ ಸೀಸನ್ನಲ್ಲಿ ಫೈನಲಿಸ್ಟ್ ಎನಿಸಿಕೊಂಡ ಏಕೈಕ ಮಹಿಳಾ ಸ್ಪರ್ಧಿ ಇವರೇ.
ನಟಿ ಸಂಗೀತಾ ಶೃಂಗೇರಿ ಅವರು ಬಿಗ್ಬಾಸ್ 10 ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಜೊತೆಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಇತ್ತೀಚಿಗೆ ಗ್ರ್ಯಾಂಡ್ ಲೆಹಂಗಾ, ಜ್ಯುವೆಲ್ಲರಿ ತೊಟ್ಟ ಫೋಟೋಗಳನ್ನು ಶೇರ್ ಮಾಡ್ಕೊಂಡಿದ್ದಾರೆ.
ಪರ್ಪಲ್ ಬಣ್ಣದ ಹೆವಿ ವರ್ಕ್ ಇರೋ ಸ್ಕರ್ಟ್, ಬ್ಲೌಸ್, ಲೆಹಂಗಾ ತೊಟ್ಟು ಸಂಗೀತಾ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಇದಕ್ಕೆ ದೊಡ್ಡ ಹರಳಿನ ಕಿವಿಯೋಲೆ, ಮಾಂಗ್ ಟಿಕಾ, ಮೂಗುತ್ತಿಯನ್ನು ಪೇರ್ ಮಾಡಿದ್ದು ಅದ್ಭುತವಾಗಿ ಕಾಣುತ್ತಿದ್ದಾರೆ.
ಸಂಗೀತಾ ನ್ಯೂ ಲುಕ್ಗೆ ಫ್ಯಾನ್ಸ್ ಲೈಕ್ ಹಾಗೂ ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ಗಾರ್ಜಿಯಸ್, ಕ್ಯೂಟಿ ಪೈ, ಸೂಪರ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವು ಅಭಿಮಾನಿಗಳು, ಕರ್ನಾಟಕ ಕ್ರಶ್, ಜ್ಯೂನಿಯರ್ ದೀಪಿಕಾ ಪಡುಕೋಣೆ, ಅಭಿನಯ ಹಾಗೂ ಸೌಂದರ್ಯದ ಸಂಗಮವೇ ನಮ್ಮ ಸಂಗೀತಾ ಶೃಂಗೇರಿ, ಸೌಂದರ್ಯದ ಗಣಿ ನಮ್ ಸಂಗೀತಾ ಗಿಣಿ ಎಂದೆಲ್ಲಾ ಹೊಗಳಿದ್ದಾರೆ.
ಸಂಗೀತಾ ಅವರು ಗುರುತಿಸಿಕೊಂಡಿದ್ದು 777 ಚಾರ್ಲಿ ಸಿನಿಮಾ ಮೂಲಕ. ಸಂಗೀತ ಬಿಗ್ ಬಾಸ್ 10ರ ಗೆಲ್ಲುವ ಸ್ಪರ್ಧಿ ಆಗಿದ್ರು. ಆದ್ರೆ 2ನೇ ರನ್ನರ್ ಅಪ್ ಆಗಿ ಹೊರ ಹೋಗಿದ್ದು ಮಾತ್ರ ಸಂಗೀತ ಅಭಿಮಾನಿಗಳಲ್ಲಿ ತೀರಾ ನೋವುಂಟು ಮಾಡಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಸಂಗೀತಾ ಶೃಂಗೇರಿ ಆ್ಯಕ್ಟಿವ್ ಆಗಿದ್ದು ತಮ್ಮ ಕುರಿತಾದ ಎಲ್ಲಾ ವಿಚಾರಗಳನ್ನೂ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಫೋಟೋಸ್ ಹಾಗೂ ವಿಡಿಯೋಸ್ ಅಪ್ಲೋಡ್ ಮಾಡುತ್ತಿರುತ್ತಾರೆ.
ಸಂಗೀತಾ ಶೃಂಗೇರಿ ಧಾರಾವಾಹಿಗಳ ಮೂಲಕ ಸದ್ದು ಮಾಡುತ್ತಾ ಕೊನೆಗೆ ಕನ್ನಡ ಬೆಳ್ಳಿತೆರೆ ಮೇಲೆ ಕೂಡ ಮಿಂಚಿದ್ದರು. ಅದರಲ್ಲೂ ಕೆಲವು ವರ್ಷದ ಹಿಂದೆ ರಿಲೀಸ್ ಆಗಿದ್ದ ಸಂಗೀತಾ ಶೃಂಗೇರಿ ಅವರ ಸಿನಿಮಾ '777 ಚಾರ್ಲಿ' ಸಖತ್ ಸೌಂಡ್ ಮಾಡಿತ್ತು.