Year 2025: ಬಿಡುಗಡೆಯಾದ ಮೊದಲ ದಿನವೇ ಅತ್ಯಧಿಕ ಗಳಿಕೆ ಮಾಡಿದ ಟಾಪ್ 10 ಸಿನಿಮಾಗಳು
2025 ವರ್ಷದ ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷಕ್ಕೆ ಬಿಡುಗಡೆಯಾಗಲು ಹಲವು ಸಿನಿಮಾಗಳು ಸಿದ್ಧಗೊಂಡಿವೆ. 2025ರಲ್ಲಿ ಬಿಡುಗಡೆಯಾದ ಮೊದಲ ದಿನವೇ ಅತ್ಯಧಿಕ ಗಳಿಕೆ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.

ಮೊದಲ ದಿನವೇ ಅತ್ಯಧಿಕ ಗಳಿಕೆ
2025 ವರ್ಷದ ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷಕ್ಕೆ ಬಿಡುಗಡೆಯಾಗಲು ಹಲವು ಸಿನಿಮಾಗಳು ಸಿದ್ಧಗೊಂಡಿವೆ. ಮತ್ತೊಂದೆಡೆ ವರ್ಷದ ಕೊನೆಯ ತಿಂಗಳಾದ್ರೂ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗ್ತಿವೆ. 2025ರಲ್ಲಿ ಬಿಡುಗಡೆಯಾದ ಮೊದಲ ದಿನವೇ ಅತ್ಯಧಿಕ ಗಳಿಕೆ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.
ಟಾಪ್ 10
ಸಿತಾರೆ ಜಮೀನ್ ಪರ್
ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಆಮಿರ್ ಖಾನ್ ಅವರ ಸಿತಾರೆ ಜಮೀನ್ ಪರ್ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು, ಮೊದಲ ದಿನವೇ ₹10.7 ಕೋಟಿ ಗಳಿಸಿತು. ನಂತರದ ದಿನಗಳಲ್ಲಿ ಈ ಸಿನಿಮಾ ನೆಗೆಟಿವ್ ರಿಮಾರ್ಕ್‌ನಿಂದ ಸೋಲಿನ ಸುಳಿಗೆ ಸಿಲುಕಿತು.
ಟಾಪ್ 9
ಸ್ಕೈ ಫೋರ್ಸ್
ಈ ವರ್ಷ ಬಿಡುಗಡೆಯಾದ ಅಕ್ಷಯ್ ಕುಮಾರ್ ಮತ್ತು ವೀರ್ ಪಹಾಡಿಯಾ ಅಭಿನಯದ ಸ್ಕೈ ಫೋರ್ಸ್ ಚಿತ್ರವೂ ಉತ್ತಮ ಪ್ರತಿಕ್ರಿಯೆ ಪಡೆಯಿತು. ಈ ಚಿತ್ರವು ತನ್ನ ಮೊದಲ ದಿನದಂದು ₹12.25 ಕೋಟಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿತ್ತು.
ಟಾಪ್ 8
ರೈಡ್ 2
ಅಜಯ್ ದೇವಗನ್ ಮತ್ತು ರಿತೇಶ್ ದೇಶಮುಖ್ ಅಭಿನಯದ 'ರೈಡ್ 2' ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು, ಮೊದಲ ದಿನ ₹18.25 ಕೋಟಿ ಗಳಿಸಿತು. ಆದ್ರೆ ಚಿತ್ರ ನಿರೀಕ್ಷೆಯಂತೆ ಗೆಲುವು ಕಾಣಲು ವಿಫಲವಾಯ್ತು.
ಟಾಪ್ 7
ಸೈಯಾರ
2025 ರಲ್ಲಿ ಅಹಾನ್ ಪಾಂಡೆ ಮತ್ತು ಅನಿತ್ ಪಡ್ಡಾ ಅಭಿನಯದ 'ಸೈಯಾರಾ' ಚಿತ್ರ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿತು. ಈ ಚಿತ್ರವು ಮೊದಲ ದಿನ ₹21.5 ಕೋಟಿ ಗಳಿಸಿತು. ಮ್ಯೂಸಿಕಲ್ ಹಿಟ್ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ
ಟಾಪ್ 6
ಹೌಸ್‌ಫುಲ್ 5
ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಮತ್ತು ಅಭಿಷೇಕ್ ಬಚ್ಚನ್ ಅಭಿನಯದ ಬಹುತಾರಾಗಣದ ಹೌಸ್‌ಫುಲ್ 5 ಚಿತ್ರವು ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ₹24.35 ಕೋಟಿ ಗಳಿಸಿತು. ಆದರೆ ಈ ಚಿತ್ರ ಅಷ್ಟೇನೂ ಚೆನ್ನಾಗಿ ಗಳಿಕೆ ಮಾಡಲಿಲ್ಲ. ಜನರನ್ನು ತಲುಪುವಲ್ಲಿ ವಿಫಲವಾಯ್ತು.
ಟಾಪ್ 5
ಥಾಮಾ
ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಥಮಾ' ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತು. ಈ ಚಿತ್ರವು ಮೊದಲ ದಿನ ₹25 ಕೋಟಿ ಗಳಿಸಿತು.
ಟಾಪ್ 4
ಸಿಕಂದರ್
ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 2025 ರ ಚಿತ್ರ ಸಿಕಂದರ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೂ ಸಿಕಂದರ್ ಚಿತ್ರವು ಉತ್ತಮ ಪ್ರದರ್ಶನ ನೀಡಿ, ಮೊದಲ ದಿನದಂದು ₹26 ಕೋಟಿ ಗಳಿಸಿತು. ಈ ಚಿತ್ರದಿಂದ ಸಲ್ಮಾನ್ ಖಾನ್ ಮತ್ತೆ ಸೋಲಿನ ರುಚಿ ನೋಡುವಂತಾಯ್ತು.
ಟಾಪ್ 3
ಧುರಂಧರ್
ಡಿಸೆಂಬರ್‌ನಲ್ಲಿ ಬಿಡುಗಡೆಯಾದ ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮತ್ತು ಸಂಜಯ್ ದತ್ ಅಭಿನಯದ 'ಧುರಂಧರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ ಈ ಚಿತ್ರ ₹28 ಕೋಟಿ ಗಳಿಸಿತು. ಇನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಟಾಪ್ 2
ಛಾವಾ
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ್ದು, ಮೊದಲ ದಿನವೇ ₹33 ಕೋಟಿ ಗಳಿಸಿತ್ತು. ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಛಾವಾ ಸಹ ಒಂದಾಗಿದೆ.
ಟಾಪ್ 1
ವಾರ್ 2
2025 ರಲ್ಲಿ ಬಿಡುಗಡೆಯಾದ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ವಾರ್ 2, ಮೊದಲ ದಿನವೇ ₹52.5 ಕೋಟಿ ಗಳಿಸಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯಿತು. ಈ ಚಿತ್ರ ದೊಡ್ಡಮಟ್ಟದ ನಿರೀಕ್ಷೆಯನ್ನು ಮೂಡಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

