ನೂತನ ಸಿಎಂ ವಿಜಯ್ ಸೇರಿದಂತೆ ಏಳು ಮುಖ್ಯಮಂತ್ರಿಗಳ ಜೊತೆ ನಟಿಸಿದ ಹಿರಿಯ ನಟಿ ಯಾರು?
ದಕ್ಷಿಣ ಭಾರತದ ಹಿರಿಯ ನಟಿ ದೇಶದ ಏಳು ಮುಖ್ಯಮಂತ್ರಿಗಳ ಜೊತೆ ನಟಿಸಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. 1500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ದಕ್ಷಿಣ ಭಾರತದ ನಟಿ
ದಕ್ಷಿಣ ಭಾರತದ ನಟಿಯೊಬ್ಬರು ದೇಶದ ಏಳು ಮುಖ್ಯಮಂತ್ರಿಗಳ ಜೊತೆಯಲ್ಲಿ ನಟಿಸಿದ್ದಾರೆ. ತಮಿಳುನಾಡಿನ ನೂತನ ಸಿಎಂ ಸಿ.ಜೋಸೆಫ್ ವಿಜಯ್ ಜೊತೆಯಲ್ಲಿಯೂ ಹಿರಿಯ ನಟಿ ಕೆಲಸ ಮಾಡಿದ್ದಾರೆ. ಯಾವ ನಟಿಯೂ ಮಾಡದ ದಾಖಲೆ ಇವರ ಹೆಸರಿಗೆ ಸೇರ್ಪಡೆಯಾಗಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳು
ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ಜೆ.ಜಯಲಲಿತಾ ಮತ್ತು ಎಂಜಿಆರ್ ಸಹ ಬಣ್ಣದ ಲೋಕದಿಂದಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರು. ಸಿನಿ ಅಂಗಳದಲ್ಲಿ ದೈತ್ಯರಾಗಿದ್ದ ಎಂಜಿಆರ್ ಅವರ ಜೊತೆಯಲ್ಲಿಯೂ ಈ ನಟಿ ಬಣ್ಣ ಹಚ್ಚಿದ್ದಾರೆ. ಯಾರು ಈ ನಟಿ ಎಂದು ನೋಡೋಣ ಬನ್ನಿ.
ಆಚಿ ಮನೋರಮಾ
ಆಚಿ ಮನೋರಮಾ ಅವರು ದೇಶದ ಏಳು ಸಿಎಂಗಳ ಜೊತೆ ಸಿನಿಮಾಗಳಲ್ಲಿ ನಟನೆ ಮಾಡಿರುವ ಏಕೈಕ ನಟಿ. ಸುಮಾರು 1500ಕ್ಕೂ ಅಧಿಕ ಸಿನಿಮಾ, ಸಾವಿರಾರು ನಾಟಕಗಳಲ್ಲಿ ನಟಿ ಆಚಿ ಮನೋರಮಾ ನಟಿಸಿದ್ದಾರೆ. ಪೌರಾಣಿಕ ಸಿನಿಮಾಗಳಿಂದ ತಮ್ಮ ಬಣ್ಣದ ಬದುಕನ್ನು ಆಚಿ ಮನೋರಮಾ ಆರಂಭಿಸಿದ್ದರು. ರಾಷ್ಟ್ರೀಯ ಚಲನಚಿತ್ರ ಅವಾರ್ಡ್, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಆಚಿ ಮನೋರಮಾ ಪಡೆದುಕೊಂಡಿದ್ದಾರೆ.
ಯಾವ ಮುಖ್ಯಮಂತ್ರಿಗಳ ಜೊತೆ ನಟನೆ?
ಜೆ.ಜಯಲಲಿತಾ (ತಮಿಳುನಾಡು), ಎಂಜಿ ರಾಮಚಂದ್ರನ್ (ತಮಿಳುನಾಡು), ಎಂ.ಕರುಣಾನಿಧಿ (ತಮಿಳುನಾಡು), ಎಂಕೆ ಸ್ಟಾಲಿನ್ (ತಮಿಳುನಾಡು), ಸಿ.ಎನ್.ಅಣ್ಣಾದುರೈ, ಎನ್.ಟಿ.ರಾಮರಾವ್ (ಆಂಧ್ರಪ್ರದೇಶ), ಸಿ.ಜೋಸೆಫ್ ವಿಜಯ್ (ತಮಿಳುನಾಡು)
ಆಚಿ ಮನೋರಮಾ
ಆಚಿ ಮನೋರಮಾ ಅವರು 10ನೇ ಅಕ್ಟೋಬರ್ 2015ರಲ್ಲಿ ನಿಧನರಾಗಿದ್ದು, ಅಂತಿಮ ಕಾಲಘಟ್ಟದವರೆಗೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಹಾಗಾಗಿ 1958ರಿಂದ ನಟಿಸುತ್ತಿರುವ ಕಾರಣ ಇಂದಿನ ಸ್ಟಾರ್ ಹೀರೋಗಳ ಜೊತೆಯಲ್ಲಿ ನಟಿ ಆಚಿ ಮನೋರಮಾ ನಟಿಸಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

