ಮಗಳ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಮೋಹನ್‌ಲಾಲ್? ಏನಿದು 'ತುಡಕ್ಕಂ' ರಹಸ್ಯ!
ಮೋಹನ್‌ಲಾಲ್ ಪುತ್ರಿ ವಿಸ್ಮಯಾ ನಾಯಕಿಯಾಗಿ ನಟಿಸುತ್ತಿರುವ 'ತುಡಕ್ಕಂ' ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ. '2018' ಖ್ಯಾತಿಯ ಜ್ಯೂಡ್ ಆ್ಯಂಟನಿ ಜೋಸೆಫ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ರಿಲೀಸ್ ಡೇಟ್ ಅನೌನ್ಸ್
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಪುತ್ರಿ ವಿಸ್ಮಯಾ ಮೋಹನ್‌ಲಾಲ್, ನಾಯಕಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ 'ತುಡಕ್ಕಂ'. ಜ್ಯೂಡ್ ಆ್ಯಂಟನಿ ಜೋಸೆಫ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ದೃಶ್ಯಂ 3' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ 'ತುಡಕ್ಕಂ' ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದೆ.

ಆಗಸ್ಟ್ 7 ರಂದು ತೆರೆಗೆ
ಈ ಸಿನಿಮಾ ಆಗಸ್ಟ್ 7 ರಂದು ತೆರೆಗೆ ಬರಲಿದೆ. ಕಳೆದ ವರ್ಷ ನವೆಂಬರ್ 17, ಸೋಮವಾರದಂದು ಕುಟ್ಟಿಕಾನಂನಲ್ಲಿ 'ತುಡಕ್ಕಂ' ಚಿತ್ರದ ಶೂಟಿಂಗ್ ಶುರುವಾಗಿತ್ತು. ಆಶಿರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆ್ಯಂಟನಿ ಪೆರುಂಬಾವೂರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಕ್ಟೋಬರ್ 30 ರಂದು ಕೊಚ್ಚಿಯಲ್ಲಿ ಚಿತ್ರದ ಅಧಿಕೃತ ಮುಹೂರ್ತ ಸಮಾರಂಭ ನಡೆದಿತ್ತು.
ಅತಿಥಿ ಪಾತ್ರದಲ್ಲಿ ಮೋಹನ್‌ಲಾಲ್?
ಈ ಚಿತ್ರ ಒಂದು ಚಿಕ್ಕ ಕೌಟುಂಬಿಕ ಸಿನಿಮಾ ಅಂತ ನಿರ್ದೇಶಕ ಜ್ಯೂಡ್ ಆ್ಯಂಟನಿ ಜೋಸೆಫ್ ಲಾಂಚಿಂಗ್ ವೇಳೆ ಹೇಳಿದ್ದರು. ಆದರೆ, ಇದೊಂದು ಕೇವಲ ಫ್ಯಾಮಿಲಿ ಚಿತ್ರವಾಗಿರದೆ, ಇದರಲ್ಲಿ ಇನ್ನಷ್ಟು ಕುತೂಹಲಕಾರಿ ಅಂಶಗಳಿವೆ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ, 'ತುಡಕ್ಕಂ'ನಲ್ಲಿ ಮೋಹನ್‌ಲಾಲ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ.
ಪ್ರಮುಖ ಪಾತ್ರದಲ್ಲಿ ಆಶಿಶ್ ಜೋ ಆ್ಯಂಟನಿ
'2018' ರಂತಹ ಮೆಗಾಹಿಟ್ ಸಿನಿಮಾ ಕೊಟ್ಟ ನಂತರ ಜ್ಯೂಡ್ ಆ್ಯಂಟನಿ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದರಿಂದ 'ತುಡಕ್ಕಂ' ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ, ನಿರ್ಮಾಪಕ ಆ್ಯಂಟನಿ ಪೆರುಂಬಾವೂರ್ ಅವರ ಮಗ ಆಶಿಶ್ ಜೋ ಆ್ಯಂಟನಿ ಕೂಡ ಈ ಚಿತ್ರದಲ್ಲಿ ವೊಂದನ್ನು ಮಾಡುತ್ತಿದ್ದಾರೆ. ಈ ಮೂಲಕ ಅವರು ಮೇನ್‌ಸ್ಟ್ರೀಮ್ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ 'ಎಂಪುರಾನ್' ಚಿತ್ರದಲ್ಲಿ ಆಶಿಶ್ ಒಂದು ಸಣ್ಣ ಪಾತ್ರದಲ್ಲಿ ಮಿಂಚಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

