MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Theri baby ದಿವ್ಯಾ ಸಾಶಾ ಇವರೇನಾ? ಹೀರೋಯಿನ್ ಥರ ಬದಲಾದ ಸಿಎಂ ವಿಜಯ್ ಮಗಳು!

Theri baby ದಿವ್ಯಾ ಸಾಶಾ ಇವರೇನಾ? ಹೀರೋಯಿನ್ ಥರ ಬದಲಾದ ಸಿಎಂ ವಿಜಯ್ ಮಗಳು!

Divya Saasha viral photos: ಸಿಎಂ ವಿಜಯ್ ಮಗಳು ದಿವ್ಯಾ ಸಾಶಾ ತಮ್ಮ ಅಣ್ಣ ನಿರ್ದೇಶನ ಮಾಡಿರುವ 'ಸಿಗ್ಮಾ' ಸಿನಿಮಾ ನೋಡೋಕೆ ಥಿಯೇಟರ್‌ಗೆ ಬಂದಿದ್ದಾರೆ. ಸದ್ಯ ಈ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.

2 Min read
Author : Ashwini HR
Published : Oct 03 2026, 12:50 PM IST
Share this Photo Gallery
  • FB
  • TW
  • Linkdin
  • Whatsapp
15
ಸಿಗ್ಮಾ ಸಿನಿಮಾ ನೋಡಲು ಬಂದ ವಿಜಯ್ ಮಗಳು
Image Credit : X

ಸಿಗ್ಮಾ ಸಿನಿಮಾ ನೋಡಲು ಬಂದ ವಿಜಯ್ ಮಗಳು

ಸಿಗ್ಮಾ ಸಿನಿಮಾ ನೋಡಲು ಬಂದ ವಿಜಯ್ ಮಗಳು
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ಸಂಗೀತ ದಂಪತಿಗೆ ಮದುವೆಯಾಗಿ 25 ವರ್ಷಗಳೇ ಕಳೆದಿವೆ. ಇವರಿಗೆ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಜೇಸನ್ ಸಂಜಯ್ ಈಗ ತಮಿಳು ಸಿನಿಮಾರಂಗದಲ್ಲಿ ನಿರ್ದೇಶಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರು ನಿರ್ದೇಶನ ಮಾಡಿರುವ 'ಸಿಗ್ಮಾ' ಸಿನಿಮಾ ಈಗ ಥಿಯೇಟರ್‌ಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನೊಂದೆಡೆ ವಿಜಯ್ ಮಗಳು ದಿವ್ಯಾ ಸಾಶಾ ಏನ್ಮಾಡ್ತಿದ್ದಾರೆ ಅನ್ನೋದು ಮಾತ್ರ ಇಷ್ಟು ದಿನ ಸಸ್ಪೆನ್ಸ್ ಆಗಿಯೇ ಇತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವೈರಲ್ ಆಗುತ್ತಿರುವ ದಿವ್ಯಾ ಸಾಶಾ ಫೋಟೋಗಳು
Image Credit : X

ವೈರಲ್ ಆಗುತ್ತಿರುವ ದಿವ್ಯಾ ಸಾಶಾ ಫೋಟೋಗಳು

ವೈರಲ್ ಆಗುತ್ತಿರುವ ದಿವ್ಯಾ ಸಾಶಾ ಫೋಟೋಗಳು
ಬಹಳ ದಿನಗಳಿಂದ ಚೆನ್ನೈ ಕಡೆ ಮುಖ ಮಾಡದ ದಿವ್ಯಾ, ನಿನ್ನೆ ತಮ್ಮ ಅಣ್ಣ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ಸಿನಿಮಾದ ಫಸ್ಟ್ ಶೋ ನೋಡಲು ಚೆನ್ನೈನ ಕಮಲಾ ಥಿಯೇಟರ್‌ಗೆ ಬಂದಿದ್ದರು. ತಾಯಿ ಸಂಗೀತ ಜೊತೆ ದಿವ್ಯಾ ಸಾಶಾ ಬಂದಿದ್ದಾಗ ತೆಗೆದ ಫೋಟೋ ಹಾಗೂ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸಿಎಂ ಮಗಳು ಅನ್ನೋ ಯಾವುದೇ ಅಹಂಕಾರ ಇಲ್ಲದೆ, ತುಂಬಾನೇ ಸಿಂಪಲ್ ಆಗಿ ಬಂದು ದಿವ್ಯಾ ಸಾಶಾ ಸಿನಿಮಾ ನೋಡಿ ಹೋಗಿರೋದು ಎಲ್ಲರ ಗಮನ ಸೆಳೆದಿದೆ.

Related Articles

Related image1
TVK; ಬಸ್‌ನೊಳಗೆ ಪ್ರತ್ಯಕ್ಷರಾಗಿ ಟಿಕೆಟ್ ಕಟ್ ಮಾಡಿದ ಸಿಎಂ ವಿಜಯ್; ವಿಡಿಯೋ ಫುಲ್ ವೈರಲ್!
Related image2
ನೀನು ಚೆನ್ನಾಗಿ ಆ್ಯಕ್ಟ್​ ಮಾಡ್ತಿಯಾ ಮಗಳೇ ಎಂದು ಅಪ್ಪ ಹೇಳ್ಲೇ ಇಲ್ಲ: ಮೊನಿಷಾ ವಿಜಯ್​ ಭಾವುಕ- ನಟಿ ಹೇಳಿದ್ದೇನು
35
ಓದಿನ ಕಡೆ ಹೆಚ್ಚು ಗಮನ ಹರಿಸುತ್ತಿರುವ ದಿವ್ಯಾ
Image Credit : X

ಓದಿನ ಕಡೆ ಹೆಚ್ಚು ಗಮನ ಹರಿಸುತ್ತಿರುವ ದಿವ್ಯಾ

ಓದಿನ ಕಡೆ ಹೆಚ್ಚು ಗಮನ ಹರಿಸುತ್ತಿರುವ ದಿವ್ಯಾ
ಈ ಫೋಟೋಗಳು ವೈರಲ್ ಆದ ಬೆನ್ನಲ್ಲೇ ದಿವ್ಯಾ ಸಾಶಾ ಬಗ್ಗೆ ನೆಟ್ಟಿಗರು ಹುಡುಕಾಟ ಶುರು ಮಾಡಿದ್ದಾರೆ. 2005ರಲ್ಲಿ ಹುಟ್ಟಿದ ದಿವ್ಯಾ ಸಾಶಾ, ಚಿಕ್ಕ ವಯಸ್ಸಿನಿಂದಲೂ ಓದಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಚೆನ್ನೈನ ಎಐಎಸ್‌ಸಿ (AISC) ಶಾಲೆಯಲ್ಲಿ ಅವರು ತಮ್ಮ ಶಾಲಾ ಶಿಕ್ಷಣ ಮುಗಿಸಿದ್ದಾರೆ. ಓದಿನ ಜೊತೆಗೆ ಆಟದಲ್ಲೂ ದಿವ್ಯಾಗೆ ತುಂಬಾನೇ ಆಸಕ್ತಿ ಇದೆ. ಅದರಲ್ಲೂ ಬ್ಯಾಡ್ಮಿಂಟನ್ ಆಟದಲ್ಲಿ ತಮ್ಮ ಪ್ರತಿಭೆ ತೋರಿಸಿರುವ ಅವರು, ಶಾಲಾ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ.

45
'ಥೇರಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ
Image Credit : instagram

'ಥೇರಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ

'ಥೇರಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ
ಬರೀ ವಿಜಯ್ ಮಗಳು ಅನ್ನೋ ಗುರುತು ಮಾತ್ರವಲ್ಲದೆ, ಚಿಕ್ಕ ವಯಸ್ಸಿನಲ್ಲೇ ದಿವ್ಯಾ ಸಾಶಾ ಬೆಳ್ಳಿತೆರೆ ಮೇಲೂ ಕಾಣಿಸಿಕೊಂಡಿದ್ದಾರೆ. ಅಟ್ಲೀ ನಿರ್ದೇಶನದಲ್ಲಿ ವಿಜಯ್ ನಟಿಸಿದ್ದ 'ಥೇರಿ' ಸಿನಿಮಾ 2016ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ವಿಜಯ್ ಮಗಳಾಗಿ ದಿವ್ಯಾ ಸಾಶಾ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆ ದೃಶ್ಯಗಳು ರಿಲೀಸ್ ಆದಾಗ ವಿಜಯ್ ಅಭಿಮಾನಿಗಳ ಗಮನ ಸೆಳೆದಿದ್ದರು. ಆಮೇಲೆ ದಿವ್ಯಾ ಬೇರೆ ಯಾವ ಸಿನಿಮಾದಲ್ಲೂ ನಟಿಸಲಿಲ್ಲ. ಸದ್ಯಕ್ಕಂತೂ ಅವರು ತಮ್ಮ ಓದಿನ ಕಡೆ ಮಾತ್ರ ಗಮನ ಹರಿಸುತ್ತಿದ್ದಾರೆ.

55
ಸಿನಿಮಾದಲ್ಲಿ ಹೀರೋಯಿನ್ ಆಗ್ತಾರಾ ದಿವ್ಯಾ?
Image Credit : X

ಸಿನಿಮಾದಲ್ಲಿ ಹೀರೋಯಿನ್ ಆಗ್ತಾರಾ ದಿವ್ಯಾ?

ಸಿನಿಮಾದಲ್ಲಿ ಹೀರೋಯಿನ್ ಆಗ್ತಾರಾ ದಿವ್ಯಾ?
ವಿಜಯ್ ಟಾಪ್ ನಟರಾಗಿ (ಈಗ ಸಿಎಂ), ಅವರ ಮಗ ಜೇಸನ್ ಸಂಜಯ್ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ ತೋರಿಸುತ್ತಿರುವಾಗ, ದಿವ್ಯಾ ಸಾಶಾ ಭವಿಷ್ಯ ಕೂಡ ಸಿನಿಮಾದತ್ತ ಸಾಗುತ್ತಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಆದ್ರೆ ಸದ್ಯಕ್ಕೆ ದಿವ್ಯಾ ಸಾಶಾ ತಮ್ಮ ಉನ್ನತ ಶಿಕ್ಷಣದ ಕಡೆ ಗಮನ ಹರಿಸುತ್ತಿದ್ದಾರೆ. ಲಂಡನ್‌ನಲ್ಲಿ ಉಳಿದುಕೊಂಡು ಓದುತ್ತಿರುವ ದಿವ್ಯಾ ಸಾಶಾ, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾದಲ್ಲಿ ನಟಿಸ್ತಾರಾ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
 

Latest Videos
Recommended Stories
Recommended image1
Amruthadhaare Serialನಲ್ಲಿ ಗೌತಮ್​ ಪಾತ್ರ ಮುಗಿದೋಯ್ತಾ? ಧಾರಾವಾಹಿ ನಿರ್ದೇಶಕ ಹೇಳಿದ್ದೇನು
Recommended image2
Soundarya: ಮದುವೆ ಬಟ್ಟೆಯಲ್ಲೇ ಸೌಂದರ್ಯ ಶ್ರದ್ಧಾಂಜಲಿ ಸಭೆಗೆ ಬಂದಿದ್ದ ಆ ನಟಿ ಯಾರು ಗೊತ್ತಾ?
Recommended image3
'ಮಧ್ಯರಾತ್ರಿ ಬಾಗಿಲು ತಟ್ಟಿ ಅಪ್ಪಿಕೋ ಅಂದಿದ್ದ..' ಬಾಲಿವುಡ್ ನಿರ್ದೇಶಕನ ಕಹಿ ಘಟನೆ ಬಿಚ್ಚಿಟ್ಟ ಸ್ವರಾ ಭಾಸ್ಕರ್
Related Stories
Recommended image1
TVK; ಬಸ್‌ನೊಳಗೆ ಪ್ರತ್ಯಕ್ಷರಾಗಿ ಟಿಕೆಟ್ ಕಟ್ ಮಾಡಿದ ಸಿಎಂ ವಿಜಯ್; ವಿಡಿಯೋ ಫುಲ್ ವೈರಲ್!
Recommended image2
ನೀನು ಚೆನ್ನಾಗಿ ಆ್ಯಕ್ಟ್​ ಮಾಡ್ತಿಯಾ ಮಗಳೇ ಎಂದು ಅಪ್ಪ ಹೇಳ್ಲೇ ಇಲ್ಲ: ಮೊನಿಷಾ ವಿಜಯ್​ ಭಾವುಕ- ನಟಿ ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved