Soundarya: ಮದುವೆ ಬಟ್ಟೆಯಲ್ಲೇ ಸೌಂದರ್ಯ ಶ್ರದ್ಧಾಂಜಲಿ ಸಭೆಗೆ ಬಂದಿದ್ದ ಆ ನಟಿ ಯಾರು ಗೊತ್ತಾ?
Soundarya death anniversary memories: ಸೌಂದರ್ಯ ನಿಧನದ ಸುದ್ದಿ ಕೇಳಿ ಈ ನಟಿ ಅಕ್ಷರಶಃ ಕುಸಿದುಹೋಗಿದ್ದರು. ಸೌಂದರ್ಯ ಜೊತೆಗಿನ ಒಡನಾಟ ಅಂಥದ್ದು. ಸರಿಯಾಗಿ ಇವರ ಮದುವೆ ಸಮಯದಲ್ಲೇ ಸೌಂದರ್ಯ ತೀರಿಕೊಂಡರು. ಆಗ ಮದುವೆ ಬಟ್ಟೆಯಲ್ಲೇ ಬಂದು ಸೌಂದರ್ಯಗೆ ಶ್ರದ್ಧಾಂಜಲಿ ಸಲ್ಲಿಸಿದ ಆ ನಟಿ ಯಾರು ಗೊತ್ತಾ?

90ರ ದಶಕದ ಟಾಪ್ ಹಿರೋಯಿನ್ಸ್..
90ರ ದಶಕದ ಟಾಪ್ ಹಿರೋಯಿನ್ಸ್..
ತೆಲುಗು ಚಿತ್ರರಂಗದಲ್ಲಿ 90ರ ದಶಕದಲ್ಲಿ ಸೌಂದರ್ಯ ಮತ್ತು ರಾಶಿ ಇಬ್ಬರೂ ಸ್ಟಾರ್ ಹಿರೋಯಿನ್‌ಗಳಾಗಿ ಮೆರೆದಿದ್ದರು. ಬೆಳ್ಳಿತೆರೆ ಮೇಲೆ ಇಬ್ಬರ ಮಧ್ಯೆ ಪೈಪೋಟಿ ಇದ್ದರೂ, ವೈಯಕ್ತಿಕವಾಗಿ ಇಬ್ಬರೂ ತುಂಬಾ ಆಪ್ತರಾಗಿದ್ದರು. ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದ ಸೀನಿಯರ್ ನಟಿ ರಾಶಿ, ಸೌಂದರ್ಯ ನಿಧನದ ಸುದ್ದಿ ಕೇಳಿದಾಗ ತಮಗಾದ ಆಘಾತವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಸ್ವಂತ ತಂಗಿ ತರ ನೋಡ್ತಿದ್ರು..
ಸ್ವಂತ ತಂಗಿ ತರ ನೋಡ್ತಿದ್ರು..
ಸೌಂದರ್ಯ ಜೊತೆಗಿನ ಒಡನಾಟದ ಬಗ್ಗೆ ನಟಿ ರಾಶಿ ಇತ್ತೀಚೆಗೆ ಮಾತನಾಡಿದ್ದಾರೆ. "ಸೌಂದರ್ಯ ಅವರಿಗಿಂತ ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವಳು. ಹಾಗಾಗಿ ಅವರು ನನ್ನನ್ನು ಸ್ವಂತ ತಂಗಿ ತರ, ಮನೇಲಿರೋ ಸಣ್ಣ ಮಗುವಿನ ತರ ನೋಡ್ತಿದ್ರು. ಶೂಟಿಂಗ್ ಟೈಮ್‌ನಲ್ಲಿ ನಮ್ಮ ಗೆಸ್ಟ್ ಹೌಸ್ ರೂಮ್‌ಗಳು ಅಕ್ಕಪಕ್ಕದಲ್ಲೇ ಇರ್ತಿತ್ತು. ನಮ್ಮ ಮೇಡಂಗೆ ಪೈಪೋಟಿ ಕೊಡೋಕೆ ಇನ್ನೊಬ್ಬ ಹಿರೋಯಿನ್ ಬಂದಿದ್ದಾಳೆ ಅಂತ ಸೌಂದರ್ಯ ಅವರ ಸ್ಟಾಫ್ ತಮಾಷೆ ಮಾಡ್ತಿದ್ರು" ಅಂತ ರಾಶಿ ನೆನಪಿಸಿಕೊಂಡಿದ್ದಾರೆ. ಇಬ್ಬರ ಮಧ್ಯೆ ಅಷ್ಟು ಒಳ್ಳೆಯ ಸ್ನೇಹ ಇತ್ತು.
ಮದುವೆ ಟೈಮ್‌ನಲ್ಲೇ ಅನಿರೀಕ್ಷಿತ ದುರಂತ
ಮದುವೆ ಟೈಮ್‌ನಲ್ಲೇ ಅನಿರೀಕ್ಷಿತ ದುರಂತ
ಸೌಂದರ್ಯ ತೀರಿಕೊಂಡಾಗ ರಾಶಿ ಅವರ ಮದುವೆ ಕೆಲಸಗಳು ನಡೀತಿತ್ತು. ರಾಶಿಗೆ ಮದುವೆ ಹೆಣ್ಣಿನ ಶಾಸ್ತ್ರ ಮಾಡ್ತಿದ್ರು. ಸರಿಯಾಗಿ ಅದೇ ಟೈಮ್‌ಗೆ ಸೌಂದರ್ಯ ವಿಮಾನ ಅಪಘಾತದಲ್ಲಿ ತೀರಿಕೊಂಡರು ಅನ್ನೋ ಶಾಕಿಂಗ್ ನ್ಯೂಸ್ ಬಂತು. ಈ ಸುದ್ದಿ ಕೇಳಿ ರಾಶಿ ಅಕ್ಷರಶಃ ಕುಸಿದುಹೋದರು. ಸೌಂದರ್ಯ ಅವರ ಪಾರ್ಥಿವ ಶರೀರವನ್ನು ಕಡೆ ಬಾರಿಗೆ ನೋಡೋಕೆ ಬೆಂಗಳೂರಿಗೆ ಹೋಗಬೇಕು ಅಂತ ರಾಶಿ ಅಂದುಕೊಂಡಿದ್ದರು. ಆದರೆ ಅಲ್ಲಿ ಕೇವಲ ಅಸ್ಥಿ ಮಾತ್ರ ಉಳಿದಿದೆ ಅನ್ನೋ ವಿಚಾರ ಅವರಿಗೆ ತಿಳಿಯಿತು.
ಶಾಸ್ತ್ರಗಳನ್ನು ಬದಿಗಿಟ್ಟು ಶ್ರದ್ಧಾಂಜಲಿ
ಶಾಸ್ತ್ರಗಳನ್ನು ಬದಿಗಿಟ್ಟು ಶ್ರದ್ಧಾಂಜಲಿ
ಹೈದರಾಬಾದ್‌ನಲ್ಲಿ ಸೌಂದರ್ಯ ಅವರ ಶ್ರದ್ಧಾಂಜಲಿ ಸಭೆ ಏರ್ಪಡಿಸಿದಾಗ, ಅಲ್ಲಿಗೆ ಹೋಗಿ ನಮನ ಸಲ್ಲಿಸಲು ರಾಶಿ ನಿರ್ಧರಿಸಿದರು. ಆದರೆ ಆ ಟೈಮ್‌ನಲ್ಲಿ ರಾಶಿ ಮದುವೆ ಹೆಣ್ಣಾಗಿದ್ದರಿಂದ, ಶುಭಕಾರ್ಯ ನಡೆಯುವಾಗ ಇಂಥ ಶೋಕ ಸಭೆಗಳಿಗೆ ಹೋಗಬಾರದು ಅಂತ ಮನೆಯಲ್ಲಿ ನಿರ್ಬಂಧ ಹಾಕಿದ್ದರು. ಆದರೆ ರಾಶಿ ಆ ಮಾತುಗಳನ್ನು ಕೇಳಲಿಲ್ಲ.
"ನನ್ನ ಜೀವನದಲ್ಲಿ ಅತಿ ಮುಖ್ಯವಾದ ವ್ಯಕ್ತಿ ಸೌಂದರ್ಯ. ಅವರಿಗೆ ನಮನ ಸಲ್ಲಿಸುವುದು ನನಗೆ ತುಂಬಾ ಮುಖ್ಯ" ಅಂತ ಹೇಳಿ, ಅದೇ ಮದುವೆ ಬಟ್ಟೆಯಲ್ಲೇ ಶ್ರದ್ಧಾಂಜಲಿ ಸಭೆಗೆ ಹೋದರು. ಅಲ್ಲಿ ಸೌಂದರ್ಯ ಫೋಟೋಗೆ ಹೂವಿನ ಹಾರ ಹಾಕಿ ಕಣ್ಣೀರಿನ ವಿದಾಯ ಹೇಳಿದರು. ನಟಿ ರಾಶಿ ಹೇಳಿದ ಈ ಘಟನೆ ಸೌಂದರ್ಯ ಮೇಲಿದ್ದ ಅಭಿಮಾನವನ್ನು ತೋರಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

