MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
Bandipur National Park
Hanur Shootout Case
Bengaluru Schools H1N1 Case
Ayodhye Ram Mandir Theft Case
Tungabhadra Backwaters Accident
DPL Nitish Rana
Congress Vande Mataram Row
Karnataka Housing Scheme
Bengaluru Elevated Corridor
JDS MLC Suraj Revanna
Bengaluru Outer Ring-Road Project
  • Home
  • Entertainment
  • ತಂದೆಯ ದೌರ್ಜನ್ಯದಿಂದ ಮನೆ ಬಿಟ್ಟ ಉರ್ಫಿ ಜಾವೇದ್ ಇಂದು ಹೇಗೆ ಸ್ಟಾರ್ ಆದರು ಗೊತ್ತಾ?

ತಂದೆಯ ದೌರ್ಜನ್ಯದಿಂದ ಮನೆ ಬಿಟ್ಟ ಉರ್ಫಿ ಜಾವೇದ್ ಇಂದು ಹೇಗೆ ಸ್ಟಾರ್ ಆದರು ಗೊತ್ತಾ?

ಟಿವಿ ಇಂಡಸ್ಟ್ರಿಯಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬೆಳೆದು ನಿಂತಿರುವ ಉರ್ಫಿ ಜಾವೇದ್ ಅವರ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಇತ್ತೀಚೆಗೆ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ ಉರ್ಫಿ ಜಾವೇದ್.

2 Min read
Author : Govindaraj S
Published : Jun 01 2026, 08:10 PM IST
Share this Photo Gallery
  • FB
  • TW
  • Linkdin
  • Whatsapp
17
ಜರ್ನಿ ಹೇಗಿತ್ತು?
Image Credit : instagram

ಜರ್ನಿ ಹೇಗಿತ್ತು?

ಟಿವಿ ಸೀರಿಯಲ್‌ನ ಸೈಡ್ ಆಕ್ಟರ್‌ನಿಂದ ಇಂಟರ್‌ನೆಟ್ ಸೆನ್ಸೇಷನ್ ಆಗಿ ಉರ್ಫಿ ಜಾವೇದ್ ಬೆಳೆದಿದ್ದು ಹೇಗೆ? ತಂದೆಯ ದೌರ್ಜನ್ಯದಿಂದ ಮನೆ ಬಿಟ್ಟಿದ್ದು ಯಾಕೆ? 40 ಸಾವಿರ ಸಂಬಳದಿಂದ ಲಕ್ಷ ಲಕ್ಷ ಸಂಪಾದನೆವರೆಗಿನ ಅವರ ಜರ್ನಿ ಹೇಗಿತ್ತು? Bigg Boss OTT ಅವರ ಬದುಕನ್ನೇ ಬದಲಿಸಿತಾ? ಉರ್ಫಿ ಅವರ ಹೋರಾಟ, ಫ್ಯಾಷನ್ ಹಾಗೂ ಯಶಸ್ಸಿನ ಕಥೆಯನ್ನು ಅವರೇ ಬಿಚ್ಚಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಮನೆ ಬಿಟ್ಟು ಓಡಿ ಹೋಗಿದ್ದರಂತೆ
Image Credit : instagram

ಮನೆ ಬಿಟ್ಟು ಓಡಿ ಹೋಗಿದ್ದರಂತೆ

ಟಿವಿ ಇಂಡಸ್ಟ್ರಿಯಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬೆಳೆದು ನಿಂತಿರುವ ಉರ್ಫಿ ಜಾವೇದ್ ಅವರ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಇತ್ತೀಚೆಗೆ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಉರ್ಫಿ, ತಮ್ಮ ವೈಯಕ್ತಿಕ ಜೀವನ, ಹೋರಾಟ, ವೃತ್ತಿ ಹಾಗೂ ವೈರಲ್ ಆದ ಬಗ್ಗೆ ಹಲವು ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಂದೆಯ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಓಡಿ ಹೋಗಿದ್ದರಂತೆ. ದೆಹಲಿಯಲ್ಲಿ ಕಾಲ್ ಸೆಂಟರ್ ಕೆಲಸ, ಟ್ಯೂಷನ್ ಹೇಳಿಕೊಟ್ಟು ಬದುಕು ಸಾಗಿಸಿದ ಉರ್ಫಿ, ಮುಂಬೈಗೆ ಬಂದು ಟಿವಿ ಸೀರಿಯಲ್‌ಗಳಲ್ಲಿ ನಟಿಸಲು ಶುರುಮಾಡಿದರು. ಆದರೆ, ಅಲ್ಲಿ ಅವರಿಗೆ ಬೇಕಾದ ಮನ್ನಣೆ ಸಿಗಲಿಲ್ಲ. ನಂತರ Bigg Boss OTT ಮತ್ತು ಸೋಷಿಯಲ್ ಮೀಡಿಯಾ ಅವರ ಬದುಕನ್ನೇ ಬದಲಾಯಿಸಿತು.

Related Articles

Related image1
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Related image2
ಉರ್ಫಿ ಜಾವೇದ್‌ ಏನಾಯ್ತು? ಬ್ಯೂಟಿ ಕಾಳಜಿಯಿಂದ ಊದಿಕೊಂಡ ಮುಖ, ಫ್ಯಾನ್ಸ್‌ಗೆ ಮಹತ್ವದ ಸಲಹೆ
37
ಮನೆ ಬಿಟ್ಟು ಮುಂಬೈಗೆ ಬಂದ ಕಥೆ
Image Credit : Instagram

ಮನೆ ಬಿಟ್ಟು ಮುಂಬೈಗೆ ಬಂದ ಕಥೆ

ತಮ್ಮ ಜೀವನದ ಆರಂಭದ ದಿನಗಳು ತುಂಬಾ ಕಷ್ಟಕರವಾಗಿತ್ತು ಎಂದು ಉರ್ಫಿ ಜಾವೇದ್ ಹೇಳಿಕೊಂಡಿದ್ದಾರೆ. ತಂದೆಯ ಕೆಟ್ಟ ನಡವಳಿಕೆಯಿಂದ ಬೇಸತ್ತು ಮನೆ ಬಿಟ್ಟು ದೆಹಲಿಗೆ ಬಂದಿದ್ದರಂತೆ. ಅಲ್ಲಿ ಒಂದು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡು, ಮಕ್ಕಳಿಗೆ ಟ್ಯೂಷನ್ ಹೇಳಿ ತಮ್ಮ ಖರ್ಚು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಕಷ್ಟಗಳ ಮಧ್ಯೆಯೂ, ಒಂದಲ್ಲ ಒಂದು ದಿನ ಮುಂಬೈನಲ್ಲಿ ದೊಡ್ಡ ಹೆಸರು ಮಾಡುತ್ತೇನೆ ಎಂಬ ನಂಬಿಕೆ ಅವರಿಗಿತ್ತು.

47
ಬಾಲಿವುಡ್‌ನಲ್ಲಿ ಅವಕಾಶ ಸಿಗಲಿಲ್ಲ, ಟಿವಿ ಕಡೆ ಮುಖ ಮಾಡಿದರು
Image Credit : our own

ಬಾಲಿವುಡ್‌ನಲ್ಲಿ ಅವಕಾಶ ಸಿಗಲಿಲ್ಲ, ಟಿವಿ ಕಡೆ ಮುಖ ಮಾಡಿದರು

ಆರಂಭದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಆಡಿಷನ್ ಕೊಟ್ಟಿದ್ದೆ, ಆದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಕಾರಣ ಅವಕಾಶ ಸಿಗುವುದು ಕಷ್ಟವಾಗಿತ್ತು ಎಂದು ಉರ್ಫಿ ಬಹಿರಂಗಪಡಿಸಿದ್ದಾರೆ. ನಂತರ ಅವರು ಟಿವಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಶುರುಮಾಡಿದರು. ಆದರೆ, ಅವರಿಗೆ ಸಿಕ್ಕಿದ್ದೆಲ್ಲಾ ಹೆಚ್ಚಾಗಿ ಸೈಡ್ ರೋಲ್‌ಗಳು. "ನೀವು ಸ್ಟಾರ್ ಅಥವಾ ಲೀಡ್ ಆಕ್ಟರ್ ಅಲ್ಲ ಅಂದ್ರೆ, ಯಾರೂ ನಿಮ್ಮನ್ನು ಗೌರವಿಸುವುದಿಲ್ಲ. ಸೈಡ್ ಕ್ಯಾರೆಕ್ಟರ್‌ಗಳಿಗೆ ಒಳ್ಳೆ ಟ್ರೀಟ್‌ಮೆಂಟ್‌ ಸಿಗಲ್ಲ. ನನಗೆ ಇದರಿಂದ ಖುಷಿ ಇರಲಿಲ್ಲ, ನಾನಿನ್ನೂ ದೊಡ್ಡ ಸಾಧನೆ ಮಾಡೋಕೆ ಹುಟ್ಟಿದ್ದೀನಿ ಅಂತ ಅನಿಸುತ್ತಿತ್ತು," ಎಂದು ಉರ್ಫಿ ಹೇಳಿದ್ದಾರೆ.

57
40 ಸಾವಿರ ಸಂಪಾದನೆಯಿಂದಲೂ ಖುಷಿಯಾಗಿರಲಿಲ್ಲ
Image Credit : others

40 ಸಾವಿರ ಸಂಪಾದನೆಯಿಂದಲೂ ಖುಷಿಯಾಗಿರಲಿಲ್ಲ

ಟಿವಿಯಲ್ಲಿ ನಟಿಸುತ್ತಿದ್ದಾಗ ಉರ್ಫಿ ತಿಂಗಳಿಗೆ ಸುಮಾರು 40 ಸಾವಿರ ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ಅವರಿಗೆ ಅದರಿಂದ ಸಮಾಧಾನವಿರಲಿಲ್ಲ. "ನನಗೆ ಯಾವಾಗಲೂ ಲೈಮ್‌ಲೈಟ್‌ನಲ್ಲಿ ಇರಬೇಕೆಂಬ ಆಸೆ ಇತ್ತು. ಆದರೆ ಮನೆನೂ ನಡೆಸಬೇಕಿತ್ತು, ಹಾಗಾಗಿ ಆ 40 ಸಾವಿರ ರೂಪಾಯಿ ಅವಶ್ಯಕವಾಗಿತ್ತು. ಆದ್ರೆ ನಾನು ಖುಷಿಯಾಗಿರಲಿಲ್ಲ," ಎಂದು ಅವರು ಹೇಳಿಕೊಂಡಿದ್ದಾರೆ.

67
ಸೋಷಿಯಲ್ ಮೀಡಿಯಾ ಬದಲಾಯಿಸಿತು ಉರ್ಫಿ ಬದುಕು
Image Credit : Social Media

ಸೋಷಿಯಲ್ ಮೀಡಿಯಾ ಬದಲಾಯಿಸಿತು ಉರ್ಫಿ ಬದುಕು

ಫ್ಯಾಷನ್‌ನಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತಾದರೂ, ಅದನ್ನೇ ಕೆರಿಯರ್ ಮಾಡಿಕೊಳ್ಳುವ ಯೋಚನೆ ಇರಲಿಲ್ಲವಂತೆ. ನಿಧಾನವಾಗಿ ಸೋಷಿಯಲ್ ಮೀಡಿಯಾದಲ್ಲಿ DIY ಫ್ಯಾಷನ್ ಕಂಟೆಂಟ್ ಮಾಡಲು ಶುರುಮಾಡಿದರು. Bigg Boss OTTಗೆ ಬಂದ ನಂತರ ಅವರ ಒಂದು ಡ್ರೆಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಂತರ, ಏರ್‌ಪೋರ್ಟ್‌ನಲ್ಲಿ ಸ್ಪೋರ್ಟ್ಸ್ ಬ್ರಾ ಮತ್ತು ಜಾಕೆಟ್ ಧರಿಸಿದ್ದ ವಿಡಿಯೋ ವೈರಲ್ ಆಗಿ, ಅವರನ್ನು ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮಾಡಿತು. ಆದರೆ, ವೈರಲ್ ಆಗಬೇಕೆಂದು ತಾನು ಉದ್ದೇಶಪೂರ್ವಕವಾಗಿ ಏನನ್ನೂ ಮಾಡಿಲ್ಲ ಎಂದು ಉರ್ಫಿ ಸ್ಪಷ್ಟಪಡಿಸಿದ್ದಾರೆ. ಅವರ ವಿಶಿಷ್ಟ ಫ್ಯಾಷನ್ ಮತ್ತು ವಿಭಿನ್ನ ಶೈಲಿಯನ್ನು ಜನರೇ ಗುರುತಿಸಲು ಆರಂಭಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ ನಂತರ, ಬ್ರ್ಯಾಂಡ್ ಡೀಲ್‌ಗಳ ಮೂಲಕ ಅವರ ಆದಾಯ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿಗೆ ಏರಿತು.

77
ಟಿವಿಯಿಂದ ಇಂಟರ್‌ನೆಟ್ ಸ್ಟಾರ್‌ವರೆಗೆ
Image Credit : instragram

ಟಿವಿಯಿಂದ ಇಂಟರ್‌ನೆಟ್ ಸ್ಟಾರ್‌ವರೆಗೆ

ಉರ್ಫಿ ಜಾವೇದ್ 2016ರಲ್ಲಿ 'ಬಡೇ ಭೈಯಾ ಕಿ' ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ 'ಚಂದ್ರ ನಂದಿನಿ', 'ಮೇರಿ ದುರ್ಗಾ', 'ಬೇಪನಾ', 'ಜಿಜಿ ಮಾ' ಮತ್ತು 'ಡಾಯನ್' ನಂತಹ ಶೋಗಳಲ್ಲಿ ಕಾಣಿಸಿಕೊಂಡರು. ಆದರೆ, ಅವರಿಗೆ ನಿಜವಾದ ಹೆಸರು ತಂದುಕೊಟ್ಟಿದ್ದು 'Bigg Boss OTT'. ಇತ್ತೀಚೆಗೆ ಅವರು 'ಸ್ಪ್ಲಿಟ್ಸ್‌ವಿಲ್ಲಾ X6' ಶೋವನ್ನು ಹೋಸ್ಟ್ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಟಿ
ಮನರಂಜನಾ ಸುದ್ದಿ
ಬಾಲಿವುಡ್
ಸುದ್ದಿ

Latest Videos
Recommended Stories
Recommended image1
ಜಿಮ್ ಇಲ್ಲ, ಡಯಟ್ ಇಲ್ಲ.. ಯಶ್ ಪತ್ನಿ ರಾಧಿಕಾ ಫಿಟ್ ಆಗಿರಲು ಮಾಡೋ ಈ 3 ಅಭ್ಯಾಸಗಳೇ ಕಾರಣ!
Recommended image2
ಬಿಗ್ ಬಾಸ್ 'ಅಗ್ನಿ ಪರೀಕ್ಷೆ'ಯಲ್ಲಿ ಸೆಲೆಕ್ಟ್ ಆಗೋರು ಎಷ್ಟು? ವೇಟಿಂಗ್‌ ಲಿಸ್ಟ್‌ನಲ್ಲಿ ಎಷ್ಟು, ಮನೆ ಒಳಗೆ ಹೋಗೋರು ಎಷ್ಟು ಮಂದಿ?
Recommended image3
ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಶುರುವಾಗೋ ಡೇಟ್ 'ಇದು'.. 12 ಸಾವಿರ ಸ್ಕ್ರೀನ್‌ಗಳಲ್ಲಿ 'ರಾಕಿ ಭಾಯ್‌' ಯಶ್ ಅಬ್ಬರ!
Related Stories
Recommended image1
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Recommended image2
ಉರ್ಫಿ ಜಾವೇದ್‌ ಏನಾಯ್ತು? ಬ್ಯೂಟಿ ಕಾಳಜಿಯಿಂದ ಊದಿಕೊಂಡ ಮುಖ, ಫ್ಯಾನ್ಸ್‌ಗೆ ಮಹತ್ವದ ಸಲಹೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved