MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಮದುವೆ ಬಳಿಕ ಮೊದಲ ಬಾರಿಗೆ ನಟ ಸಿಂಬು ಜೊತೆ ನಯನತಾರಾ? ನಿರ್ದೇಶಕರು ಯಾರು? ಬಿಸಿಬಿಸಿ ಚರ್ಚೆ ಶುರು!

ಮದುವೆ ಬಳಿಕ ಮೊದಲ ಬಾರಿಗೆ ನಟ ಸಿಂಬು ಜೊತೆ ನಯನತಾರಾ? ನಿರ್ದೇಶಕರು ಯಾರು? ಬಿಸಿಬಿಸಿ ಚರ್ಚೆ ಶುರು!

'ಅರಸನ್' ಚಿತ್ರದಲ್ಲಿ ಬ್ಯುಸಿಯಿರುವ ನಟ ಸಿಂಬು, ತಮ್ಮ ಮುಂದಿನ ಸಿನಿಮಾದಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.

2 Min read
Author : Govindaraj S
Published : Oct 31 2026, 06:20 PM IST
Share this Photo Gallery
  • FB
  • TW
  • Linkdin
  • Whatsapp
14
ಸಿಂಬು ಮುಂದಿನ ಸಿನಿಮಾ
Image Credit : Asianet News

ಸಿಂಬು ಮುಂದಿನ ಸಿನಿಮಾ

ಬಾಲನಟನಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ಸಿಲಂಬರಸನ್, ಇಂದು ಟಾಪ್ ಹೀರೊಗಳಲ್ಲಿ ಒಬ್ಬರು. ತಂದೆ ಟಿ.ರಾಜೇಂದರ್ ನಿರ್ದೇಶನದ ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಿಂಬು, ಕಳೆದ 20 ವರ್ಷಗಳಿಂದ ನಾಯಕನಾಗಿ ಮಿಂಚುತ್ತಿದ್ದಾರೆ.

ಕಳೆದ 2025ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ಜೊತೆ ಸಿಂಬು ನಟಿಸಿದ 'ಥಗ್ ಲೈಫ್' ಸಿನಿಮಾ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್ ಕಾಣಲಿಲ್ಲ. ಹೀಗಾಗಿ ಸಿಂಬು ಮುಂದಿನ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸದ್ಯ ನಿರ್ದೇಶಕ ವೆಟ್ರಿಮಾರನ್ ಅವರ 'ಅರಸನ್' ಸಿನಿಮಾದಲ್ಲಿ ಸಿಂಬು ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಇದರ ಬೆನ್ನಲ್ಲೇ ಅವರ ಮುಂದಿನ ಸಿನಿಮಾ ಹಾಗೂ ನಾಯಕಿಯ ಬಗ್ಗೆ ಕಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
'ಡ್ಯೂಡ್' ನಿರ್ದೇಶಕನ ಜೊತೆ ಸಿಂಬು!
Image Credit : X

'ಡ್ಯೂಡ್' ನಿರ್ದೇಶಕನ ಜೊತೆ ಸಿಂಬು!

'ಅರಸನ್' ಸಿನಿಮಾ ಮುಗಿದ ಬಳಿಕ, 'ಡ್ಯೂಡ್' ಖ್ಯಾತಿಯ ನಿರ್ದೇಶಕ ಕೀರ್ತೀಶ್ವರನ್ ಜೊತೆ ಸಿಂಬು ಕೈಜೋಡಿಸಲಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ ಎಂದು ಹೇಳಲಾಗುತ್ತಿದೆ.

ಈ ಚಿತ್ರದಲ್ಲಿ ಸಿಂಬು ಪಕ್ಕಾ ಲೋಕಲ್ ಆಕ್ಷನ್ ಪೊಲೀಸ್ ಅಧಿಕಾರಿಯಾಗಿ, ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ ಸಂಗೀತ ನಿರ್ದೇಶಕ ಸಾಯಿ ಅಭಯಂಕರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡುತ್ತಿದ್ದು, ಈಗಾಗಲೇ ಒಂದು ಹಾಡು ಕೂಡ ರೆಡಿಯಾಗಿದೆ. ಆದರೆ, ಚಿತ್ರತಂಡದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Related Articles

Related image1
ವಾರಣಾಸಿ ಬಳಿಕ ಹಾಲಿವುಡ್‌ಗೆ ಹಾರ್ತಾರಾ ಮಹೇಶ್ ಬಾಬು: ಈ ಸ್ಟಾರ್ ನಿರ್ದೇಶಕರ ಹೆಸರು ವೈರಲ್!
Related image2
ಮಹಿಳೆಯರ ಭೂಗತ ಸಾಮ್ರಾಜ್ಯದಲ್ಲಿ 'ನಾಗಮಂಡಲ' ಹಿರಿಯ ನಟಿಯ ದರ್ಬಾರ್: 'ಅಕ್ಕ' ಸರಣಿಯಲ್ಲಿ ಖಡಕ್ ಪಾತ್ರ
34
ಸಿಂಬುಗೆ ನಾಯಕಿಯಾಗಿ ನಯನತಾರಾ?
Image Credit : X

ಸಿಂಬುಗೆ ನಾಯಕಿಯಾಗಿ ನಯನತಾರಾ?

ಕೀರ್ತೀಶ್ವರನ್ ನಿರ್ದೇಶನದ ಈ ಹೊಸ ಸಿನಿಮಾದಲ್ಲಿ ಸಿಂಬುಗೆ ಜೋಡಿಯಾಗಿ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟಿಸಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ತಮಿಳು ಚಿತ್ರರಂಗದ ಹಿಟ್ ರೀಲ್ ಜೋಡಿಗಳಲ್ಲಿ ಸಿಂಬು-ನಯನತಾರಾ ಕೂಡ ಮುಂಚೂಣಿಯಲ್ಲಿದ್ದಾರೆ.

2016ರಲ್ಲಿ ಪಾಂಡಿರಾಜ್ ನಿರ್ದೇಶನದಲ್ಲಿ ಬಂದ 'ಇದು ನಮ್ಮ ಆಳು' ಸಿನಿಮಾದಲ್ಲಿ ಇವರಿಬ್ಬರು ಕೊನೆಯದಾಗಿ ಒಟ್ಟಿಗೆ ನಟಿಸಿದ್ದರು. ಒಂದು ವೇಳೆ ಈ ಹೊಸ ಪ್ರಾಜೆಕ್ಟ್ ಓಕೆ ಆದರೆ, ಸುಮಾರು 10 ವರ್ಷಗಳ ಬಳಿಕ ಈ ಸೂಪರ್‌ಹಿಟ್ ಜೋಡಿ ಮತ್ತೆ ತೆರೆಮೇಲೆ ಒಂದಾಗಲಿದೆ.

44
ಅಶ್ವತ್ ಮಾರಿಮುತ್ತು ಚಿತ್ರಕ್ಕೂ ಮುನ್ನ ಹೊಸ ಪ್ರಾಜೆಕ್ಟ್?
Image Credit : X

ಅಶ್ವತ್ ಮಾರಿಮುತ್ತು ಚಿತ್ರಕ್ಕೂ ಮುನ್ನ ಹೊಸ ಪ್ರಾಜೆಕ್ಟ್?

'ಡ್ರ್ಯಾಗನ್' ಸಿನಿಮಾ ನಿರ್ದೇಶಕ ಅಶ್ವತ್ ಮಾರಿಮುತ್ತು ಜೊತೆ ಸಿಂಬು ಸಿನಿಮಾ ಮಾಡಲಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ, ಅಶ್ವತ್ ಸದ್ಯ ರಜನಿಕಾಂತ್ ಅವರ 'ಧರ್ಮನ್' ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಪ್ರಾಜೆಕ್ಟ್ ಮುಗಿದ ಮೇಲೆಯೇ ಸಿಂಬು ಜೊತೆ ಅವರು ಸಿನಿಮಾ ಮಾಡಲಿದ್ದಾರೆ.

ಹೀಗಾಗಿ, ಈ ಗ್ಯಾಪ್‌ನಲ್ಲಿ ಕೀರ್ತೀಶ್ವರನ್ ನಿರ್ದೇಶನದ ಆಕ್ಷನ್ ಸಿನಿಮಾವನ್ನು ಮುಗಿಸಲು ಸಿಂಬು ಪ್ಲಾನ್ ಮಾಡಿದ್ದಾರೆ. ವೆಟ್ರಿಮಾರನ್ ಅವರ 'ಅರಸನ್' ಶೂಟಿಂಗ್ ಮುಗಿದ ತಕ್ಷಣವೇ ಈ ಹೊಸ ಸಿನಿಮಾದ ಸೆಟ್‌ಗೆ ಸಿಂಬು ಎಂಟ್ರಿಕೊಡಲಿದ್ದಾರೆ ಎಂದು ಕೋಲಿವುಡ್ ಮೂಲಗಳು ತಿಳಿಸಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಯನತಾರ
ದಕ್ಷಿಣ ಭಾರತದ ನಟರು
ಮನರಂಜನಾ ಸುದ್ದಿ
ಕಾಲಿವುಡ್
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
'ರಾಮಾಯಣ'ದಲ್ಲಿ ರಾಮನಿಗಿಂತ ರಾವಣನೇ ಹೆಚ್ಚು ಹೈಲೈಟ್: ಯಶ್ ನಟನೆ ನೋಡಿ ವಿಮರ್ಶಕರು ಯಾಕೆ ಹೀಗಂದ್ರು!
Recommended image2
55ರಲ್ಲಿ ಡಿವೋರ್ಸ್, 60ರಲ್ಲಿ 2ನೇ ಮದುವೆ: ತಮ್ಮ ಜೀವನದ ಕಹಿ ಸತ್ಯ ಬಿಚ್ಚಿಟ್ಟ ಕನ್ನಡದ ಖ್ಯಾತ ವಿಲನ್!
Recommended image3
‘ನಿಜವಾದ ಪ್ರೀತಿ ಬೇಕು, ಒಳ್ಳೆಯ ಹುಡುಗನಿದ್ದರೆ ಇನ್‌ಸ್ಟಾಗ್ರಾಂಗೆ ಮೆಸೇಜ್ ಮಾಡಿ’: ಹುಚ್ಚ ನಟಿ ಓಪನ್ ಆಫರ್!
Related Stories
Recommended image1
ವಾರಣಾಸಿ ಬಳಿಕ ಹಾಲಿವುಡ್‌ಗೆ ಹಾರ್ತಾರಾ ಮಹೇಶ್ ಬಾಬು: ಈ ಸ್ಟಾರ್ ನಿರ್ದೇಶಕರ ಹೆಸರು ವೈರಲ್!
Recommended image2
ಮಹಿಳೆಯರ ಭೂಗತ ಸಾಮ್ರಾಜ್ಯದಲ್ಲಿ 'ನಾಗಮಂಡಲ' ಹಿರಿಯ ನಟಿಯ ದರ್ಬಾರ್: 'ಅಕ್ಕ' ಸರಣಿಯಲ್ಲಿ ಖಡಕ್ ಪಾತ್ರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved