- Home
- Entertainment
- ಸ್ಯಾಂಡಲ್‌ವುಡ್‌ಗೆ ಸೋನು ಗೌಡ ಎಂಟ್ರಿ: ಮೈಚಳಿ ಬಿಟ್ಟು ಮಾದಕ ಡಾನ್ಸ್- ವಿವಾದಕ್ಕೆ ಸಿಲುಕಿದ ಲಿರಿಕ್ಸ್
ಸ್ಯಾಂಡಲ್‌ವುಡ್‌ಗೆ ಸೋನು ಗೌಡ ಎಂಟ್ರಿ: ಮೈಚಳಿ ಬಿಟ್ಟು ಮಾದಕ ಡಾನ್ಸ್- ವಿವಾದಕ್ಕೆ ಸಿಲುಕಿದ ಲಿರಿಕ್ಸ್
ರೀಲ್ಸ್ ಮೂಲಕ ಪ್ರಸಿದ್ಧರಾಗಿದ್ದ ಸೋನು ಶ್ರೀನಿವಾಸ ಗೌಡ 'ಕೇಕೆ' ಸಿನಿಮಾದ ಐಟಂ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾದ 'ಗುಂಟೂರು ಅಮ್ಮಾಯಿ' ಎಂಬ ತೆಲುಗು ಮಿಶ್ರಿತ ಹಾಡು, ಅದರ ಸಾಹಿತ್ಯದಿಂದಾಗಿ ಚರ್ಚೆಗೆ ಕಾರಣವಾಗಿದೆ.

ಸ್ಯಾಂಡಲ್‌ವುಡ್‌ಗೆ ಸೋನು ಗೌಡ ಎಂಟ್ರಿ
ಇಷ್ಟು ದಿನ ರೀಲ್ಸ್ ಮೂಲಕ, ಅರೆಬರೆ ಡ್ರೆಸ್ ಮೂಲಕ ಫೇಮಸ್ ಆಗಿದ್ದ ಸೋನು ಶ್ರೀನಿವಾಸ ಗೌಡ ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಮೈಚಳಿ ಬಿಟ್ಟು ಮಾದಕ ಡಾನ್ಸ್ ಮಾಡುವ ಮೂಲಕ ಮತ್ತಷ್ಟು ಸದ್ದು ಮಾಡುತ್ತಿದ್ದಾರೆ ನಟಿ ಸೋನು ಗೌಡ (Sonu Shreenivasa Gowda).
ಐಟಂ ಸಾಂಗ್ಗೆ ಹೆಜ್ಜೆ
ಅಷ್ಟಕ್ಕೂ ಅವರು ಎಂಟ್ರಿ ಕೊಟ್ಟಿರೋದು ನಾಯಕಿಯಾಗಿ ಅಲ್ಲ. ಬದಲಿಗೆ ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸದ್ದಿಲ್ಲದೆ ಸೆಟ್ಟೇರಿ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ‘ಕೇಕೆ’ಯಲ್ಲಿ ಅವರು, ವಿಶೇಷ ಐಟಂ ಹಾಡಿಗೆ ಡಾನ್ಸ್ ಮಾಡಿದ್ದು, ಅದನ್ನು ಇಂದು ಕಲಾವಿದರ ಸಂಘದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಹುಟ್ಟುಹಬ್ಬದಂದು ರಿಲೀಸ್
ಇಂದು ಸೋನು ಅವರ ಹುಟ್ಟುಹಬ್ಬ. ಇಂದೇ ಅವರ ಈ ಐಟಂ ಸಾಂಗ್ ರಿಲೀಸ್ ಆಗಿದೆ. ಈ ಕುರಿತು ಮಾತನಾಡಿರುವ ನಟಿ, ಈ ಅವಕಾಶ ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿ, ಪ್ರೇಕ್ಷಕರ ಆಶೀರ್ವಾದಕ್ಕೆ ಕೋರಿದರು. ‘ಕೇಕೆ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಚಿತ್ರದ ಇನ್ನಿತರ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿತು.
ತೆಲುಗು ಮಿಶ್ರತ ಹಾಡು
‘ಗುಂಟೂರು ಅಮ್ಮಾಯಿ’ ಹಾಟ್ ಬೀಟ್ಸ್ ಹೊಂದಿರುವ ತೆಲುಗು ಮಿಶ್ರಿತ ಕನ್ನಡ ಹಾಡಾಗಿದೆ. ಸೋನು ಶ್ರೀನಿವಾಸ್ ಗೌಡ ಈ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ. ಆದರೆ ಈ ಹಾಡಿನ ಬಿಡುಗಡೆ ಬಳಿಕ, ಕನ್ನಡ ಚಿತ್ರದಲ್ಲಿ ಯಾಕೆ ತೆಲುಗು ಸಾಹಿತ್ಯದ ಹಾಡು ಎಂಬ ಪ್ರಶ್ನೆ ಎತ್ತಿದ ಪತ್ರಕರ್ತರು ಹಾಗೂ ಚಿತ್ರತಂಡದ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ, ಸಾಧ್ಯವಾದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದಾಗಿ ಸಂಗೀತ ನಿರ್ದೇಶಕ ಕಿರಣ್ ತಿಳಿಸಿದರು.
ತುಂಬಾ ದೊಡ್ಡವಳಾಗಿದ್ದೇನೆ
ಐಟಂ ಸಾಂಗ್ನಲ್ಲಿನ ಕೆಲವು ಸಾಹಿತ್ಯ ಕಾಂಟ್ರವರ್ಸಿ ಮಾಡುತ್ತಿದ್ದು, ಅದರ ಬಗ್ಗೆ ಸೋನು ಗೌಡ, ನನಗೇನೂ ಅಭ್ಯಂತರ ಇಲ್ಲ. ಸಾಹಿತ್ಯ ಹೇಗೆ ಬೇಕೋ ಹಾಗೆ ಬರೆದಿರುತ್ತಾರೆ. ಅದಕ್ಕೆ ತಕ್ಕಂತೆ ನರ್ತಿಸಿದ್ದೇನೆ ಅಷ್ಟೇ ಅಂದಿದ್ದಾರೆ. ಹಿಂದೊಮ್ಮೆ ಕನ್ನಡದಲ್ಲಿ ಅವಕಾಶ ಸಿಗುತ್ತಿಲ್ಲ, ತೆಲುಗುವಿನಲ್ಲಿ ಮಾತ್ರ ಬೆಳೆಸ್ತಾರೆ ಎಂದು ಹೇಳಿದ್ದೆ. ಆಗ ಚಿಕ್ಕವಳಿದ್ದೆ. ಈಗ ತುಂಬಾ ದೊಡ್ಡವಳಾಗಿದ್ದೇನೆ. ಆಗ ಏನೂ ಗೊತ್ತಿಲ್ಲದೇ ತಪ್ಪು ಹೇಳಿದ್ದೆ. ಈಗ ಯಾರು ಏನು ಎಂದು ಅರ್ಥ ಆಗ್ತಿದೆ ಎಂದು ಸೋನು ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಕೇಕೆ ಚಿತ್ರದ ಕುರಿತು
ಅಂದಹಾಗೆ, ‘ಕೇಕೆ’ ಚಿತ್ರವನ್ನು ಸೋಮಶೇಖರ್ ಜಿ.ಕೆ. ನಿರ್ದೇಶಿಸಿದ್ದಾರೆ. ಹೊಸ ಕಲಾವಿದರು ಇರುವ ಈ ಚಿತ್ರಕ್ಕೆ ರಮಾಲಿ ನಾಯ್ಕ್ ಮತ್ತು ಕಲ್ಯಾಣ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಭರತ್ ಇಂಡಿಯಾ ಛಾಯಾಗ್ರಹಣ ನಿರ್ವಹಿಸಿದ್ದಾರೆ. ‘ಕೇಕೆ’ ಚಿತ್ರಕ್ಕೆ ‘ಉಪೇಂದ್ರ ಐ ಲವ್ ಯೂ’ ಚಿತ್ರದ ಖ್ಯಾತಿಯ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ಇದೀಗ ಬಿಡುಗಡೆಯಾಗಿರುವ ‘ಗುಂಟೂರು ಅಮ್ಮಾಯಿ’ ಹಾಡಿಗೆ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಕಿರಣ್ ಅವರೇ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದು, ಆಲಾಪನಾ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಆಲಾಪನಾ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ವೀಕ್ಷಣೆಗೆ ಲಭ್ಯವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

