- Home
- Entertainment
- ಸಿನಿಮಾಕ್ಕೆ ಎಂಟ್ರಿ ಕೊಟ್ಟ ಸೀತಾರಾಮ ಸೀರಿಯಲ್ ಸಿಹಿ: ಪುಟಾಣಿ ರಿತು ಸಿಂಗ್ ಹೇಳಿದ್ದೇನು ಕೇಳಿ...
ಸಿನಿಮಾಕ್ಕೆ ಎಂಟ್ರಿ ಕೊಟ್ಟ ಸೀತಾರಾಮ ಸೀರಿಯಲ್ ಸಿಹಿ: ಪುಟಾಣಿ ರಿತು ಸಿಂಗ್ ಹೇಳಿದ್ದೇನು ಕೇಳಿ...
ಸೀತಾರಾಮ ಸಿಹಿ ಉರ್ಫ್ ರಿತು ಸಿಂಗ್ ಭಾರಿ ಸದ್ದು ಮಾಡಿರುವ ಪುಟಾಣಿ. ಇದೀಗ ಸೀರಿಯಲ್ ಮುಗಿಯುತ್ತಲೇ ಆಕೆಯ ಸುದ್ದಿಯೇ ಇರಲಿಲ್ಲ. ಇದೀಗ ಸಿನಿಮಾದಲ್ಲಿ ನಟಿಸುವ ಅವಕಾಶ ಅವಳಿಗೆ ಸಿಕ್ಕಿದೆ. ಅದರ ಡಿಟೇಲ್ಸ್ ಇಲ್ಲಿದೆ...

ಸಿಹಿ ಎಲ್ಲಿದ್ದಾಳೆ ಎಂದವರಿಗೆ ಸಿಕ್ತು ಉತ್ತರ!
ಸಿಹಿ.. ಎಂದರೆ ಇಷ್ಟು ದಿನ ಸೀರಿಯಲ್ ವೀಕ್ಷಕರಿಗೆ ಸೀತಾರಾಮ ಸೀರಿಯಲ್ (Seeta rama serial) ಪುಟಾಣಿಯ ನೆನಪಾಗುತ್ತಿತ್ತು. ಈಗಲೂ ಅವಳದ್ದೇ ನೆನಪು ಮಾಸಿಲ್ಲ. ಆದರೂ ಒಂದು ಸೀರಿಯಲ್ ಮುಗಿದ ಮೇಲೆ, ಆ ಸೀರಿಯಲ್ನಲ್ಲಿ ಟ್ರೆಂಡಿಂಗ್ನಲ್ಲಿ ಇರುವ ತಾರೆಯರು, ಕೆಲ ದಿನಗಳಲ್ಲಿಯೇ ವೀಕ್ಷಕರ ಮನಸ್ಸಿನಿಂದ ಮಾಸಿ ಹೋಗಿ ಬಿಡುತ್ತಾರೆ. ಅದರಲ್ಲಿಯು ಬಣ್ಣದ ಲೋಕವೇ ಹಾಗೆ. ಚಾಲ್ತಿಯಲ್ಲಿ ಇದ್ದರಷ್ಟೇ ಡಿಮಾಂಡು. ಇಲ್ಲದೇ ಹೋದರೆ memory is short ಎನ್ನುವಂತೆ ಜನರ ನೆನಪು ತುಂಬಾ ಕಡಿಮೆಯಾಗಿಬಿಡುತ್ತದೆ. ಇದೇ ಕಾರಣಕ್ಕೆ ಒಂದು ಕಾಲದಲ್ಲಿ ಮಿಂಚುತ್ತಿದ್ದ ತಾರೆಯರನ್ನು ಈಗ ನೆನಪಿಸಿಕೊಳ್ಳುವವರೇ ಇಲ್ಲ. ಈಗಲೂ ಚಾಲ್ತಿಯಲ್ಲಿ ಇರುವವರನ್ನು ಬಿಟ್ಟರೆ ಉಳಿದವರ ಪಾಡು ಅಷ್ಟೇ. ಅದಕ್ಕೇ ತಾನೇ ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟೆ ರೀಲ್ಸ್ ಮಾಡುತ್ತಾ, ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಾ, ಟ್ರೋಲ್ಗೆ ಒಳಗಾಗುತ್ತಲಾದರೂ ಹೆಸರನ್ನು ಉಳಿಸಿಕೊಳ್ಳಲು ಹಲವರು ನೋಡ್ತಿರೋದು!
ಚಿಕ್ಕ ವಯಸ್ಸಲ್ಲೇ ಅದ್ಭುತ ನಟನೆ
ಅವರ ಮಾತು ಬಿಡಿ. ಸದ್ಯ ಸೀತಾರಾಮ ಸಿಹಿ ಕೂಡ ಜನರ ಮನಸ್ಸಿನಿಂದ ಕ್ರಮೇಣ ದೂರ ಆಗುತ್ತಿದ್ದಾಳೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡವರನ್ನೂ ಮೀರಿಸುವಂಥ ನಟನೆ ಮಾಡಿ, ಅತ್ತ ಶಾಲೆ, ಇತ್ತ ನಟನೆಯನ್ನೂ ಸಮದೂಗಿಸಿಕೊಂಡು ಹೋಗುತ್ತಿದ್ದ ಪುಟಾಣಿ ಈಕೆ ಎಂದೆಲ್ಲಾ ಭಾರಿ ಚರ್ಚೆಯಾಗುತ್ತಿತ್ತು.
ಅಭಿನಯಕ್ಕೆ ಮನಸೋಲದವರೇ ಇಲ್ಲ
ಸಿಹಿಯ ನಿಜವಾದ ಹೆಸರು ರಿತು ಸಿಂಗ್ (Ritu Singh). ವಯಸ್ಸು ಇದೀಗ ಏಳು. ಆದರೂ ವಯಸ್ಸಿಗೆ ಮೀರಿದ ಮಾತನಾಡಿ ಕೆಲವೊಮ್ಮೆ ಅತಿಯಾಯಿತು ಎನ್ನಿಸುವಂತೆ ಅನ್ನಿಸಿಕೊಳ್ಳುತ್ತಿದ್ದರೂ ಇವಳ ಅಭಿನಯಕ್ಕೆ ಬಂದರೆ, ಅಬ್ಬಾ ಎಂಥವರೂ ತಲೆದೂಗಲೇಬೇಕು. ಅದೆಂಥ ನಟನೆ, ನೋವು, ನಲಿವು, ಹಾಸ್ಯ, ಕಣ್ಣೀರು... ಯಾವುದೇ ಸನ್ನಿವೇಶ ಇರಲಿ, ಆ ದೃಶ್ಯಗಳಿಗೆ ತಕ್ಕಂತೆ ನಟನೆ ಮಾಡುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಹಿಂದಿನ ಜನ್ಮದ ಗಿಫ್ಟ್ ಈಕೆಯದ್ದು ಎನ್ನುವಂಥ ನಟನೆಯ ಮೂಲಕ ಮನೆ ಮಾತಾಗಿದ್ದವಳು.
ಸ್ಯಾಂಡಲ್ವುಡ್ ತಾರೆಯಾದ ಪುಟಾಣಿ
ಇದೀಗ ಈ ಬಾಲಕಿಗೆ ಸ್ಯಾಂಡಲ್ವುಡ್ ಕೈಬೀಸಿ ಕರೆದಿದೆ. ಹೌದು. ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾಳೆ ರಿತು ಸಿಂಗ್. 'ನನ್ನ ಮಗಳೇ ಸೂಪರ್ ಸ್ಟಾರ್' ಎಂಬ ಚಿತ್ರದಲ್ಲಿ ರಿತು ಸಿಂಗ್ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾಳೆ. ಆಯೂರ್ ನಿರ್ದೇಶನದ ‘ನನ್ನ ಮಗಳೇ ಸೂಪರ್ ಸ್ಟಾರ್’ (Nanna Magale Super Star) ಚಿತ್ರಕ್ಕೆ ಸೋಮವಾರ ಅದ್ಧೂರಿಯಾಗಿ ಮುಹೂರ್ತ ನಡೆದಿದೆ. ವಿಶೇಷ ಎಂದರೆ, ಬಹಳ ವರ್ಷಗಳ ನಂತರ ಸಾಹಿತಿ ಬಿ.ಆರ್.ಲಕ್ಷ್ಮಣ್ ರಾವ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ನೀಡುವ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ.
ಲಕ್ಷ್ಮಣ್ ರಾವ್ ಹೇಳಿಕೆ..
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭವು ನಡೆಯಿತು. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ಲಕ್ಷ್ಮಣ್ ರಾವ್, ‘ನಾನು ಸಾಕಷ್ಟು ಭಾವಗೀತೆಗಳನ್ನು ಬರೆದಿದ್ದರೂ ಚಿತ್ರರಂಗಕ್ಕೂ ನನಗೂ ತುಂಬಾ ದೂರ. ಬಹಳಷ್ಟು ಮಂದಿ ಸಿನಿಮಾಗಳಿಗೆ ಹಾಡು ಬರೆಯುವಂತೆ ಕೇಳುತ್ತಿದ್ದರು. ಆದರೆ, ನಾನು ಬರೆದಿರಲಿಲ್ಲ. ನನ್ನ ಮಗಳೇ ಸೂಪರ್ ಸ್ಟಾರ್ ಚಿತ್ರದ ಕತೆ ಇಷ್ಟವಾಗಿ ಚಿತ್ರದಲ್ಲಿರುವ ಮೂರು ಹಾಡುಗಳಿಗೆ ನಾನೇ ಸಾಹಿತ್ಯ ನೀಡುತ್ತಿದ್ದೇನೆ. ತುಂಬಾ ವರ್ಷಗಳ ನಂತರ ಸಿನಿಮಾ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿರುವ ಖುಷಿ ನನ್ನದು’ ಎಂದು ಹೇಳಿದರು.
ನಿರ್ದೇಶಕ ಹೇಳಿದ್ದೇನು?
ಚಿತ್ರದ ಬಗ್ಗೆ ಹೇಳಿರುವ ನಿರ್ದೇಶಕ ಆಯೂರ್, ‘ಹೆತ್ತವರಿಗೆ ತಮ್ಮ ಮಕ್ಕಳನ್ನು ಎಂಜಿನಿಯರ್, ಡಾಕ್ಟರ್, ಐಎಎಸ್ ಮಾಡುವ ಆಸೆ ಇರುತ್ತದೆ. ಆದರೆ, ಮಕ್ಕಳ ಕನಸುಗಳು ಬೇರೆ ಇರುತ್ತವೆ. ಹೆತ್ತವರ ಆಸೆ ಮತ್ತು ಮಕ್ಕಳ ಕನಸುಗಳು ಯಾವುದು ಸರಿ ಎನ್ನುವುದರ ಮೇಲೆ ಸಿನಿಮಾ ಸಾಗುತ್ತದೆ. ಮಕ್ಕಳಿಗೆ ಮತ್ತು ಪೋಷಕರಿಗೆ ಸಂದೇಶ ಕೊಡುವ ಸಿನಿಮಾ ಇದು’ ಎಂದಿದ್ದಾರೆ.
ರಿತು ಸಿಂಗ್ ಮಾತು
ಮೇಕಪ್ ಕುಮಾರ್ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಎನ್.ಎ. ಶಿವಕುಮಾರ್ ಈ ಚಿತ್ರದ ನಿರ್ಮಾಪಕರು. ರೀತು ಸಿಂಗ್ ಜೊತೆಗೆ, ಚೆಲುವರಾಜ್, ಸುಬ್ರಮಣಿ, ರಘುರಾಮ್, ಮೀನಾಕ್ಷಿ, ಕುಮಾರ್, ರಣವೀರ್ ನಟಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಿತು ಸಿಂಗ್ ಈ ಮಟ್ಟಿಗೆ ಫೇಮಸ್ ಆಗಲು ನನ್ನ ಅಭಿಮಾನಿಗಳೇ ಕಾರಣ ಎಂದಿದ್ದಾಳೆ.