ಸೀತಾರಾಮ ಸೀರಿಯಲ್​ ಸೀತಮ್ಮಾ ಅರ್ಥಾತ್​ ನಟಿ ವೈಷ್ಣವಿ ಗೌಡ ಅವರ ವಿವಾಹಪೂರ್ವ ಕಾರ್ಯಗಳು ಆರಂಭವಾಗಿದ್ದು, ಈ ಸಂದರ್ಭದಲ್ಲಿ ಸೀರಿಯಲ್ ಅಮ್ಮನ ಮದುವೆಗೆ ಮಕ್ಕಳಾದ ಸಿಹಿ-ಸುಬ್ಬಿ ಆಗಮಿಸಿದ್ದಾರೆ. ಅದರ ವಿಡಿಯೋ ವೈರಲ್​ ಆಗಿವೆ.

ಸೀತಾರಾಮ ಸೀರಿಯಲ್​ ಸೀತಮ್ಮಾ ಅರ್ಥಾತ್​ ನಟಿ ವೈಷ್ಣವಿ ಗೌಡ ಅವರ ಮದುವೆಯ ಸಂಭ್ರಮ ಶುರುವಾಗಿದೆ. ಇದಾಗಲೇ ವಿವಾಹಪೂರ್ವ ಕಾರ್ಯಗಳೆಲ್ಲಾ ಭರದಿಂದ ಸಾಗಿದ್ದು, ತಾರೆಯರ ದಂಡೂ ದೌಡಾಯಿಸಿದೆ. ಮೊನ್ನೆಯಷ್ಟೇ ನಟಿ ಆರ್​ಸಿಬಿ ಮ್ಯಾಚ್​ ನೋಡುತ್ತಲೇ ಕೆಲವೊಂದು ಮದುವೆ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಇದೀಗ ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ಡಾನ್ಸ್​ ಎಲ್ಲವೂ ನಡೆಯುತ್ತಿದ್ದು, ಸಪ್ತಪದಿ ತುಳಿಯುವ ಮುಹೂರ್ತ ಕೂಡ ಸನೀಹದಲ್ಲಿಯೇ ಇದೆ. ಇದರ ನಡುವೆಯೇ, ವಿವಾಹಪೂರ್ವ ಕಾರ್ಯಗಳ ಒಂದೊಂದೇ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇವೆ. ಇದೀಗ ಅಮ್ಮನ ಮದುವೆಯ ಸಂಭ್ರಮದಲ್ಲಿ ಮಕ್ಕಳಾದ ಸಿಹಿ ಮತ್ತು ಸುಬ್ಬಿ ಸಂಭ್ರಮಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.

ಇನ್ನು ಸಿಹಿ ಪಾತ್ರಧಾರಿ ರೀತು ಸಿಂಗ್​ ಕುರಿತು ಇದಾಗಲೇ ಸಾಕಷ್ಟು ಬಾರಿ ಸುದ್ದಿಯಾಗಿದೆ. ಆದರೆ, ಇದರ ನಡುವೆಯೇ, ಸಿಹಿ ಮತ್ತು ಸುಬ್ಬಿಯನ್ನು ಒಟ್ಟಿಗೇ ಸೀರಿಯಲ್​ನಲ್ಲಿ ಹಲವು ಬಾರಿ ತೋರಿಸಿರುವುದು ವೀಕ್ಷಕರಿಗೆ ಅಚ್ಚರಿ ಉಂಟು ಮಾಡಿದೆ. ಅಷ್ಟಕ್ಕೂ ಡಬಲ್​ ರೋಲ್​ ಮಾಡುವುದು ಹೊಸ ವಿಷಯವೇನಲ್ಲ. ಯಾವುದೇ ತಂತ್ರಜ್ಞಾನ ಇಲ್ಲದ ಸಂದರ್ಭದಲ್ಲಿಯೇ ಬ್ಲ್ಯಾಕ್​ ಆ್ಯಂಡ್​ ವೈಟ್​ ಯುಗದಲ್ಲಿಯೇ ಡಬಲ್​ ರೋಲ್​ ಸಿನಿಮಾಗಳಲ್ಲಿ ಮಾಡಿರುವ ಉದಾಹರಣೆ ಸಾಕಷ್ಟಿವೆ. ಇದೀಗ ಕೆಲವು ಸೀರಿಯಲ್​ಗಳಲ್ಲಿಯೂ ಮಾಡಿರುವ ಕಾರಣ, ಅದೇನೂ ದೊಡ್ಡ ವಿಷಯ ಅಲ್ಲ ಎನ್ನುವುದು ನಿಜವೇ. ಎರಡು ಪಾತ್ರಗಳನ್ನು ಬೇರೆ ಬೇರೆಯಾಗಿ ಶೂಟಿಂಗ್​ ಮಾಡಿ ನಂತರ ಆ ಕ್ಲಿಪ್​ಗಳನ್ನು ಒಟ್ಟಿಗೇ ಜೋಡಿಸಿ ತೋರಿಸುವುದು ಸಾಮಾನ್ಯವೇ. ಆದರೆ ಇಲ್ಲಿ ಸಿಹಿ ಮತ್ತು ಸುಬ್ಬಿಯನ್ನು ಒಟ್ಟಿಗೇ ತೋರಿಸಿದ್ದ ಸಂದರ್ಭದಲ್ಲಿ ಸಿಹಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಬಾಲಕಿಯೇ ಬೇರೆಯವಳು! ಆ ಬಾಲಕಿ ಕೂಡ ಮದುವೆಗೆ ಆಗಮಿಸಿದ್ದು, ರೀತು ಸಿಂಗ್​ ಜೊತೆ ಐಸ್​ಕ್ರೀಂ ಸವಿಯುತ್ತಿದ್ದಾಳೆ.

ಅಷ್ಟಕ್ಕೂ, ಸುಬ್ಬಿಯ ರೋಲ್​ ಬಂದಾಗ, ಸಿಹಿ ಅಲ್ಲಿಯೇ ನಿಂತಿರುವಂತೆ ತೋರಿಸಲಾಗಿದೆ. ಆ ಸಮಯದಲ್ಲಿ ಸಿಹಿಯನ್ನು ಹಿಂಬದಿಯಿಂದಷ್ಟೇ ತೋರಿಸಲಾಗಿದೆ. ಆದರೆ ಇದೀಗ ಆ ಬಾಲಕಿಯ ಮುಖ ರಿವೀಲ್​ ಮಾಡಲಾಗಿದೆ. ನೋಡಲು ಸೇಮ್​ ಸಿಹಿ ಮತ್ತು ಸುಬ್ಬಿ ರೋಲ್​ ಮಾಡಿರುವ ಪುಟಾಣಿ ರಿತು ಸಿಂಗ್​ ರೀತಿಯೇ ಕಾಣಿಸುತ್ತಾಳೆ ಈ ಬಾಲಕಿ. ಆಕೆಯನ್ನು ಸಿಹಿಯ ಆತ್ಮದಂತೆಯೇ ಬಿಳಿಯ ಡ್ರೆಸ್​ನಲ್ಲಿ ತೋರಿಸಿರುವ ಕಾರಣ, ರಿತು ಸಿಂಗ್​ ರೀತಿಯೇ ಕಾಣಿಸುತ್ತಿದ್ದಳು. ಆದರೆ ನಿಜವಾಗಿಯೂ ರಿತು ಸಿಂಗ್​ ಮತ್ತು ಈ ಪುಟಾಣಿಯ ನೋಟದಲ್ಲಿ ಸಾಮ್ಯತೆ ಇರುವುದನ್ನು ನೋಡಬಹುದಾಗಿದೆ. ಈ ಬಾಲಕಿಯ ಬಗ್ಗೆ ಹೆಚ್ಚು ವಿಷಯ ಗೊತ್ತಾಗದಿದ್ದರೂ, ಇಬ್ಬರೂ ಒಂದೇ ರೀತಿ ಕಾಣಿಸುತ್ತಿರುವ ಕಾರಣ ನಿಜವಾಗಿಯೂ ಅವಳಿಜವಳಿನಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಮೇಕಪ್​ ಒಂದೇ ರೀತಿ ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ಹೈಟ್​-ವೇಟ್​ ಸೇಮ್​ ಇರುವ ಕಾರಣ ಒಂದೇ ರೀತಿ ಕಾಣಿಸುತ್ತಿದ್ದಾರೆ ಅಷ್ಟೇ.

ಇನ್ನು ಸೀತಾ ಉರ್ಫ್​ ನಟಿ ವೈಷ್ಣವಿ ಗೌಡ ಅವರ ಮದುವೆಪೂರ್ವ ಕಾರ್ಯಗಳು ಇದಾಗಲೇ ಶುರುವಾಗಿದೆ. ಉತ್ತರ ಭಾರತದ ಶಾಸ್ತ್ರಗಳಾದ ಅರಿಶಿಣ ಶಾಸ್ತ್ರ, ಸಂಗೀತ, ಮೆಹಂದಿ ಕಾರ್ಯಕ್ರಮ ಇವೆಲ್ಲವೂ ಈಗ ದಕ್ಷಿಣದಲ್ಲಿಯೂ ಮಾಮೂಲಾಗಿದೆ. ಅದರಲ್ಲಿಯೂ ವೈಷ್ಣವಿ ಅವರ ಭಾವಿ ಪತಿ ಅನುಕೂಲ್​ ಅವರು ಛತ್ತೀಸಗಢದವರಾಗಿರುವ ಕಾರಣ, ಈ ಶಾಸ್ತ್ರಗಳು ಅಲ್ಲಿಯ ಪದ್ಧತಿಯ ಅನ್ವಯ ನಡೆಯುತ್ತಿದೆ. ಇದಾಗಲೇ ನಟಿ ವೈಷ್ಣವಿ ಗೌಡ ಮತ್ತು ಅನುಕೂಲ್​ ಅವರ ವಿವಾಹ ಪೂರ್ವ ಕಾರ್ಯಗಳು ಭರ್ಜರಿಯಾಗಿ ಆರಂಭಗೊಂಡಿದ್ದು, ಅವುಗಳ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಹಳದಿ ಕಾರ್ಯಕ್ರಮದಲ್ಲಿ ಈ ಜೋಡಿಯನ್ನು ಒಟ್ಟಿಗೇ ನೋಡಬಹುದಾಗಿದೆ. ಇದಾಗಲೇ ಆರ್​ಸಿಬಿ ಪಂದ್ಯದಲ್ಲಿ ವೈಷ್ಣವಿ ಅವರು ಮ್ಯಾಚ್​ ನೋಡುತ್ತಲೇ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಇವುಗಳ ವಿಡಿಯೋ ಕೂಡ ವೈರಲ್​ ಆಗಿವೆ. FSFS ಚಾನೆಲ್​ನಲ್ಲಿ ಅದನ್ನು ನೋಡಬಹುದಾಗಿದೆ.

View post on Instagram