MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ದಳಪತಿ ವಿಜಯ್‌ಗೆ ಶಾಕ್: ಮನೆಯಲ್ಲಿರಲು ಬಿಡ್ತಿಲ್ಲ, ಗಂಡನ ವಿರುದ್ಧ ಸಂಗೀತಾ ಗಂಭೀರ ಆರೋಪ

ದಳಪತಿ ವಿಜಯ್‌ಗೆ ಶಾಕ್: ಮನೆಯಲ್ಲಿರಲು ಬಿಡ್ತಿಲ್ಲ, ಗಂಡನ ವಿರುದ್ಧ ಸಂಗೀತಾ ಗಂಭೀರ ಆರೋಪ

ನಟ ದಳಪತಿ ವಿಜಯ್ ಅವರಿಂದ ವಿಚ್ಛೇದನ ಕೋರಿರುವ ಪತ್ನಿ ಸಂಗೀತಾ, ಇದೀಗ ವಾಸಕ್ಕೆ ಮನೆ ನೀಡುವಂತೆ ನ್ಯಾಯಾಲಯಕ್ಕೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈನ ನೀಲಾಂಕರೈ ಮನೆಯಲ್ಲಿರಲು ವಿಜಯ್ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

2 Min read
Author : Mahmad Rafik
Published : Mar 07 2026, 02:01 PM IST
Share this Photo Gallery
  • FB
  • TW
  • Linkdin
  • Whatsapp
15
ದಳಪತಿ ವಿಜಯ್
Image Credit : stockPhoto

ದಳಪತಿ ವಿಜಯ್

ತಮಿಳು ನಟ ಹಾಗೂ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ, ವಿಚ್ಛೇದನ ಅರ್ಜಿಯ ಬೆನ್ನಲ್ಲೇ ಈಗ ಮತ್ತೊಂದು ಹೊಸ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವಾಸಕ್ಕೆ ಮನೆ ಕೇಳಿದ್ದಾರೆ ಎಂದು ವರದಿಯಾಗಿದೆ.

25
ಮನೆಯಲ್ಲಿರಲು ಬಿಡುತ್ತಿಲ್ಲ
Image Credit : Thalapathy Vijay\Twitter

ಮನೆಯಲ್ಲಿರಲು ಬಿಡುತ್ತಿಲ್ಲ

ಕೇಸ್ ಇತ್ಯರ್ಥವಾಗುವವರೆಗೂ ಚೆನ್ನೈನ ನೀಲಾಂಕರೈನಲ್ಲಿರುವ ಮನೆಯಲ್ಲಿ ತಾನು ವಾಸಿಸಲು ಅನುಮತಿ ನೀಡಬೇಕು ಎಂದು ಸಂಗೀತಾ ತಮ್ಮ ಹೊಸ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. "ನಾನು ಯುಕೆಯಲ್ಲಿ ವಾಸಿಸುತ್ತಿದ್ದೆ, ಹಾಗಾಗಿ ಚೆನ್ನೈನಲ್ಲಿ ನನಗೆ ಬೇರೆ ಮನೆ ಇಲ್ಲ. ಒಬ್ಬ ಪತ್ನಿಯಾಗಿ, ತಾಯಿಯಾಗಿ ನನ್ನ ಎಲ್ಲಾ ಜವಾಬ್ದಾರಿಗಳನ್ನು ನಾನು ಪೂರೈಸಿದ್ದೇನೆ. ಆದರೆ ಈಗ ವಿಜಯ್ ನನ್ನನ್ನು ಮನೆಯಲ್ಲಿರಲು ಬಿಡುತ್ತಿಲ್ಲ" ಎಂದು ಸಂಗೀತಾ ಅರ್ಜಿಯಲ್ಲಿ ದೂರಿದ್ದಾರೆ.

Related Articles

Related image1
ಜೊತೆಯಾಗಿ ಮದುವೆಗೆ ಬಂದ ದಳಪತಿ ವಿಜಯ್ ತ್ರಿಷಾ ಕೃಷ್ಣನ್: ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು
Related image2
ದಳಪತಿ ವಿಜಯ್ ದಾಂಪತ್ಯ ಅಂತ್ಯಕ್ಕೆ ತ್ರಿಷಾ ಕಾರಣನಾ? ಹೊಸ ಜಯಲಲಿತಾ ಆಗ್ತಾರಾ ನಟಿ ತ್ರಿಷಾ? ನಿಗೂಢ ಪೋಸ್ಟ್​ ಬಗ್ಗೆ ಬಿಸಿ ಬಿಸಿ ಚರ್ಚೆ!
35
ಕೋಟ್ಯಂತರ ರೂಪಾಯಿ ಆಸ್ತಿ
Image Credit : instagram

ಕೋಟ್ಯಂತರ ರೂಪಾಯಿ ಆಸ್ತಿ

ಒಂದು ವೇಳೆ ಆ ಮನೆಯಲ್ಲಿ ಇರಲು ಸಾಧ್ಯವಾಗದಿದ್ದರೆ, ವಿಜಯ್ ಅವರ ಸ್ಥಾನಮಾನಕ್ಕೆ ತಕ್ಕಂತೆ ತನಗೆ ಬೇರೊಂದು ಮನೆಯ ವ್ಯವಸ್ಥೆ ಮಾಡಿಕೊಡಬೇಕು ಎಂದೂ ಅವರು ಕೇಳಿದ್ದಾರೆ. "ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ವಿಜಯ್, ತನಗೂ ಮತ್ತು ಮಕ್ಕಳಿಗೂ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ನೀಡಬೇಕು" ಎಂದೂ ಸಂಗೀತಾ ತಮ್ಮ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

45
ತ್ರಿಶಾ ಕೃಷ್ಣನ್‌
Image Credit : instagram

ತ್ರಿಶಾ ಕೃಷ್ಣನ್‌

ವಿಜಯ್‌, ಶುಕ್ರವಾರ ನಟಿ ತ್ರಿಶಾ ಕೃಷ್ಣನ್‌ ಅವರೊಂದಿಗೆ ಒಂದೇ ಕಾರಿನಲ್ಲಿ ಬಂದಿಳಿದು, ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ವಿಜಯ್‌ರ ಪತ್ನಿ ಸಂಗೀತ ಇತ್ತೀಚೆಗಷ್ಟೇ, ತಮ್ಮ ಪತಿ ಇನ್ನೊಬ್ಬಾಕೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ದೂರಿ, ವಿಚ್ಛೇದನಕ್ಕೆ ಕೋರಿ ಕೋರ್ಟ್‌ಗೆ ಹೋಗಿದ್ದರು. ಇದರ ಬೆನ್ನಲ್ಲೇ ವಿಜಯ್ ಮತ್ತು ತ್ರಿಶಾ ಮ್ಯಾಚಿಂಗ್‌ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈ 'ಕಿಂಗ್‌ ಮೇಕರ್' ಗೇಮ್‌ಪ್ಲ್ಯಾನ್; AIDMK ಪಾಳಯದಲ್ಲಿ ನಡುಕ! BJP ಹೇಳಿದ್ದೇನು?

55
27 ವರ್ಷದ ದಾಂಪತ್ಯ
Image Credit : instagram

27 ವರ್ಷದ ದಾಂಪತ್ಯ

27 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿರುವ ವಿಜಯ್ ಮತ್ತು ಸಂಗೀತಾ ಡಿವೋರ್ಸ್ ನ್ಯೂಸ್ ತಮಿಳುನಾಡು ಸಿನಿ ಮತ್ತು ರಾಜಕೀಯ ಅಂಗಳದಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಕೆಲ ವರದಿಗಳ ಪ್ರಕಾರ, ವಿಜಯ್ ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ ಮತ್ತು ಅವರಿಗೆ 250 ಕೋಟಿ ರೂಪಾಯಿಗಳ ಜೀವನಾಂಶ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಮನೆ ನೀಡುವಂತೆ ಸಂಗೀತಾ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮೊದಲು ಹಿಂದೇಟು, ನಂತ್ರ ಒಪ್ಪಿಗೆ: ಕಾಂಗ್ರೆಸ್‌ಗೆ ಗುಡ್‌ನ್ಯೂಸ್ ನೀಡಿದ ಮಮತಾ ಬ್ಯಾನರ್ಜಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ದಳಪತಿ ವಿಜಯ್
ಮನರಂಜನಾ ಸುದ್ದಿ
ವಿಚ್ಛೇದನ
ಕಾಲಿವುಡ್

Latest Videos
Recommended Stories
Recommended image1
ಹೊಸ ಲುಕ್​ನಲ್ಲಿ ಪತ್ನಿ ಜೊತೆ ಮುಂಬೈ ಸುತ್ತಿದ ಯಶ್​: ಕಾರು ಇಳಿಯುತ್ತಿದ್ದಂತೆಯೇ ಫ್ಯಾನ್ಸ್​ ಗದ್ದಲ ನೋಡಿ!
Recommended image2
ತೆಲುಗುನಾಡಿನ ಸೊಸೆ ಆದ್ಮೇಲೆ ರಶ್ಮಿಕಾಗೆ ಫಿದಾ ಆದ ಕನ್ನಡಿಗರು; ಕಾರಣ ಗೊತ್ತಾದ್ರೆ 'ಹೀಗೂ ಆಗೋಯ್ತಾ' ಅನ್ನೋದು ಪಕ್ಕಾ!
Recommended image3
ಸಿನಿಮಾ ಪ್ರಚಾರಕ್ಕೆ ಇಷ್ಟೊಂದು ಚೀಪ್ ಗಿಮಿಕ್ ಬೇಕಾ, ಏನಾಗಿದೆ ಈ ಚತ್ರರಂಗಕ್ಕೆ? ನಟ ಶರತ್ ಪ್ರಕಾಶ್ ಮೇಲೆ FIR!
Related Stories
Recommended image1
ಜೊತೆಯಾಗಿ ಮದುವೆಗೆ ಬಂದ ದಳಪತಿ ವಿಜಯ್ ತ್ರಿಷಾ ಕೃಷ್ಣನ್: ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು
Recommended image2
ದಳಪತಿ ವಿಜಯ್ ದಾಂಪತ್ಯ ಅಂತ್ಯಕ್ಕೆ ತ್ರಿಷಾ ಕಾರಣನಾ? ಹೊಸ ಜಯಲಲಿತಾ ಆಗ್ತಾರಾ ನಟಿ ತ್ರಿಷಾ? ನಿಗೂಢ ಪೋಸ್ಟ್​ ಬಗ್ಗೆ ಬಿಸಿ ಬಿಸಿ ಚರ್ಚೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved