- Home
- Entertainment
- ವೈರಲ್ ಆಯ್ತು ನಟಿ-ಮಾಡೆಲ್ ಧನ್ಯಾ ರಾಮ್‌ಕುಮಾರ್ ಫೋಟೋಗಳು.. ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ನೋಡಿ..!
ವೈರಲ್ ಆಯ್ತು ನಟಿ-ಮಾಡೆಲ್ ಧನ್ಯಾ ರಾಮ್‌ಕುಮಾರ್ ಫೋಟೋಗಳು.. ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ನೋಡಿ..!
ಧನ್ಯಾ ರಾಮ್‌ಕುಮಾರ್ ಕನ್ನಡ ಚಿತ್ರರಂಗದ ನಟಿ ಮತ್ತು ಮಾಡೆಲ್. ಅವರು ರಾಜ್‌ಕುಮಾರ್ ಅವರ ಮೊಮ್ಮಗಳು ಮತ್ತು ನಟ ರಾಮ್‌ಕುಮಾರ್ ಅವರ ಪುತ್ರಿ. 'ನಿನ್ನ ಸನಿಹಕೆ' ಚಿತ್ರದ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಕನ್ನಡ ಚಿತ್ರರಂಗದಲ್ಲಿ ಹೊಸಬರ ಆಗಮನ ಆಗುತ್ತಿದೆ. ಅದು ನಟರು ಹಾಗೂ ನಟಿಯರು ಎರಡೂ ಹೌದು. ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಕೂಡ ನಟನಾರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ.
ಈಗಾಗಲೇ 4-5 ಸಿನಿಮಾಗಳಲ್ಲಿ ನಟಿಸಿರುವ ನಟಿ ಧನ್ಯಾ ರಾಮ್‌ಕುಮಾರ್, ಸದ್ಯ ಮತ್ತೊಂದು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಹಾಗೂ, 'ಬ್ಯೂಟಿ ಎಕ್ಸ್‌ಪೀರಿಯನ್ಸ್ 2.0' ಶೋದಲ್ಲಿ ಸಹ ಭಾಗಿಯಾಗಿದ್ದಾರೆ.
ಈ ಶೋದ ಫೋಟೋ ಶೂಟ್ ಹಾಗೂ ಶೂಟಿಂಗ್ ಸೆಟ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಧನ್ಯಾ ರಾಮ್‌ಕುಮಾರ್ ಕನ್ನಡ ಚಿತ್ರರಂಗದ ನಟಿ ಮತ್ತು ಮಾಡೆಲ್. ಅವರು ರಾಜ್‌ಕುಮಾರ್ ಅವರ ಮೊಮ್ಮಗಳು ಮತ್ತು ನಟ ರಾಮ್‌ಕುಮಾರ್ ಅವರ ಪುತ್ರಿ. 'ನಿನ್ನ ಸನಿಹಕೆ' ಚಿತ್ರದ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.
ನಟಿ ಧನ್ಯಾ ರಾಮ್‌ಕುಮಾರ್ ಅವರು ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಗೆದ್ದರು. ನಂತರ 'ಕಾಲಾಪತ್ಥರ್', 'ಹೈಡ್ ಅಂಡ್ ಸೀಕ್', 'ದಿ ಜಡ್ಜ್‌ಮೆಂಟ್' ಮತ್ತು 'ಎಲ್ಲಾ ನಿನಗಾಗಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಧನ್ಯಾ ರಾಮ್‌ಕುಮಾರ್ ಫೋಟೋ ಸಾಕಷ್ಟು ವೈರಲ್ ಅಗುತ್ತಿದೆ. ಈ ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಹಲವರು ಧನ್ಯಾ ರಾಮ್‌ಕುಮಾರ್ ಫೋಟೋ ನೋಡಿ ಮೆಚ್ಚಿ ಕಾಮೆಂಟ್ ಕೂಡ ಮಾಡಿದ್ದಾರೆ.
ಡಾ ರಾಜ್‌ಕುಮಾರ್ ಅಳಿಯ ಹಾಗೂ ಕನ್ನಡದ ಹಿರಿಯ ನಟ ರಾಮ್‌ಕುಮಾರ್ ಅವರ ಮಗಳು ಮಾತ್ರವಲ್ಲ, ಮಗ ಧೀರೆನ್ ರಾಜ್‌ಕುಮಾರ್ (ಧೀರೆನ್ ರಾಮ್‌ಕುಮಾರ್) ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಒಟ್ಟಿನಲ್ಲಿ ನಟಿ ಧನ್ಯಾ ರಾಮ್‌ಕುಮಾರ್ ಪೋಟೋಗಳು ಇದೀಗ ವೈರಲ್ ಅಗುತ್ತಿದ್ದು ಅವರೊಬ್ಬ ಒಳ್ಳೆಯ ಮಾಡೆಲ್ ಹಾಗೂ ನಟಿ ಎಂಬ ಮಾತಿಗೆ ಸಾಕ್ಷಿ ಒದಗಿಸುತ್ತಿವೆ ಎಂದು ಹೇಳಬಹುದೇನೋ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.