- Home
- Entertainment
- Upendra: ಒಂದೇ ವರ್ಷದಲ್ಲಿ ಎರಡನೇ ತಮಿಳು ಸಿನಿಮಾ: ‘ಕೂಲಿ’ ಬಳಿಕ ಉಪೇಂದ್ರಗೆ ಮತ್ತೊಂದು ಬಿಗ್ ಆಫರ್!
Upendra: ಒಂದೇ ವರ್ಷದಲ್ಲಿ ಎರಡನೇ ತಮಿಳು ಸಿನಿಮಾ: ‘ಕೂಲಿ’ ಬಳಿಕ ಉಪೇಂದ್ರಗೆ ಮತ್ತೊಂದು ಬಿಗ್ ಆಫರ್!
Coolie ಚಿತ್ರದ ಬಳಿಕ ನಟ ಉಪೇಂದ್ರ ಮತ್ತೊಂದು ತಮಿಳು ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಹಾಗೂ ಗುನೀತ್ ಮೋಂಗಾ ನಿರ್ಮಾಣದ ಈ ಚಿತ್ರದ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆ ಇದೆ.

ಪ್ರಮುಖ ಪಾತ್ರದಲ್ಲಿ ಉಪೇಂದ್ರ
ಲೋಕೇಶ್ ಕನಗರಾಜ್ ಅವರ ‘ಕೂಲಿ’ ಸಿನಿಮಾ ಬಳಿಕ ಇದೀಗ ಮತ್ತೊಂದು ತಮಿಳು ಸಿನಿಮಾದಲ್ಲಿ ನಟಿಸಲು ರಿಯಲ್ ಸ್ಟಾರ್ ಉಪೇಂದ್ರ ಸಜ್ಜಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಹೊಸ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಉಪ್ಪಿ ಅಭಿನಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸದೇನೂ ಅಲ್ಲ
ಪರಭಾಷೆಯ ಸಿನಿಮಾಗಳಲ್ಲಿ ಉಪೇಂದ್ರ ನಟಿಸುವುದು ಹೊಸದೇನೂ ಅಲ್ಲ. ಈಗಾಗಲೇ ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.
ಸಿನಿಪ್ರಿಯರಿಗೆ ಅಚ್ಚರಿ
ಒಂದೂವರೆ ದಶಕದ ಬಳಿಕ ಕೂಲಿ ಚಿತ್ರವನ್ನು ಒಪ್ಪಿಕೊಂಡಿದ್ದರು. ಇದೀಗ ಒಂದೇ ವರ್ಷದ ಅಂತರದಲ್ಲಿ ಮತ್ತೊಂದು ಸಿನಿಮಾಗೆ ಉಪ್ಪಿ ಸಹಿ ಮಾಡಿದ್ದಾರೆ. ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೋಂಗಾ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರಲಿದೆ.
ಎರಡನೇ ತಮಿಳು ಸಿನಿಮಾ
ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ. ಸದ್ಯಕ್ಕೆ ಕನ್ನಡದಲ್ಲಿ ಉಪೇಂದ್ರ ಎರಡೇ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳ ಶೂಟಿಂಗ್ ಅರ್ಧಕ್ಕೆ ನಿಂತಿವೆ ಎಂದು ಹೇಳಲಾಗುತ್ತಿದೆ. ಶಿವಣ್ಣ, ರಾಜ್ ಬಿ.ಶೆಟ್ಟಿ ಅವರ ಜೊತೆಗೆ ‘45’ ಸಿನಿಮಾದ ಬಳಿಕ ಉಪೇಂದ್ರ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

