ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದ್ವೆ: ಶೆಟ್ಟರ ಗ್ಯಾಂಗಿಗೆ ಇದ್ಯಾ ಇನ್ವಿಟೇಷನ್?
ಕೊಡಗಿನ ಬ್ಯೂಟಿ, ಇದೀಗ ನ್ಯಾಷನಲ್ ಕ್ರಶ್ ಎಂದು ಕರೆಯಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ, ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯುತ್ತಿದ್ದು, ಕರ್ನಾಟಕದ ಶೆಟ್ಟರ ಗ್ಯಾಂಗಿಗೆ ಆಹ್ವಾನವಿದ್ಯಾ?

ರಶ್ಮಿಕಾ ಮಂದಣ್ಣಗೆ ಚಾನ್ಸ್ ಕೊಟ್ಟಿದ್ದು ಶೆಟ್ಟರ ಗ್ಯಾಂಗ್
ರಶ್ಮಿಕಾ ಮಂದಣ್ಣ. ಎಲ್ಲಿಯೋ ಬೆಂಗಳೂರಿನ ಕಾಲೇಜೊಂದರಲ್ಲಿ ಡಿಗ್ರಿ ಮಾಡುತ್ತಿದ್ದ ಹುಡುಗಿ. ಸಿನಿಮಾದಲ್ಲಿ ನಟಿಸುವ ಕನಸಿದ್ದ ರಶ್ಮಿಕಾ ಮಂದಣ್ಣಗೆ ಅವಕಾಶ ಕಲ್ಪಿಸಿದ್ದು ಕರ್ನಾಟಕದ ಶೆಟ್ಟರ ಗ್ಯಾಂಗು. ಕಿರಿಕ್ ಪಾರ್ಟೆ ಎಂಬ ಸಿನಿಮಾವೊಂದರಲ್ಲಿ ಸಿಂಪಲ್ ಪಾತ್ರವೊಂದರಲ್ಲಿ ನಟಿಸಿದ ನಟಿ ಕಮಾಲ್ ಮಾಡಿಯೇ ಬಿಟ್ಟರು.
ಮುಗ್ಧ ಸೌಂದರ್ಯ ಕನ್ನಡಿಗರಿಗೆ ಇಷ್ಟವಾಗಿ ಹೋಯಿತು. ಅಯ್ಯೋ ಪಡ್ಡೆ ಹುಡುಗರ ಕನಸಿನ ಕಣ್ಮಣಿಯೂ ಆಗಿ ಬಿಟ್ಟರು. ಅಷ್ಟರಲ್ಲಿ ಕಿರಿಕ್ ಪಾರ್ಟಿಯ ನಾಯಕ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥವೂ ಮಾಡಿಕೊಂಡರು. ಇವರಿಬ್ಬರ ನಡುವೆ ಸುಮಾರು 13 ವರ್ಷಗಳ ಅಂತರವಿತ್ತು. ಆದರೆ, ರಕ್ಷಿತ್ ಅವರ ಸಿನಿಮಾ ಪ್ಯಾಷನ್ ಹಾಗೂ ಕ್ರಿಯೇಟಿವಿಟಿಗೆ ಎಂಥವರಾದರೂ ಸೋಲುವುದು ಪಕ್ಕಾ. ಹಾಗೆಯೇ ರಶ್ಮಿಕಾ ಸಹ ರಕ್ಷಿತ್‌ಗೆ ಬೋಲ್ಡ್ ಆಗಿದ್ದರು.
ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬ್ರೇಕ್‌ಅಪ್
ಆದರೆ, ಈ ಜೋಡಿಗೆ ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ, ನಿಶ್ವಿತಾರ್ಥವಾಗಿ ಕೆಲವು ತಿಂಗಳ ನಂತರ ಇಬ್ಬರ ನಡುವೆ ಬಿರುಕು ಬಿಡುತ್ತಿರುವುದು ಕಾಣಿಸಲು ಶುರುವಾಗಿತ್ತು. ಅಷ್ಟರಾಗಲೇ ರಶ್ಮಿಕಾ ತೆಲುಗಿನಲ್ಲಿ ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಎಂಬ ಚಿತ್ರಗಳಲ್ಲಿ ಇದೀಗ ಹಸೆಮಣೆ ಏರುತ್ತಿರುವ ವಿಜಯ್ ದೇವರಕೊಂಡ ಜೊತೆ ನಟಿಸಿ, ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದವು.
ಗೀತ ಗೋವಿಂದಂನಿಂದ ಮದುವೆ ಮಂಟಪದವರೆಗೆ
ಲಿಪ್ ಲಾಕ್‌ನಂಥ ಸೀನ್‌ನಲ್ಲಿ ರಶ್ಮಿಕಾ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ವಿಜಯ್, ರಶ್ಮಿಕಾ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟವಾಯಿತು. ಈ ಜೋಡಿಯೇ ನಿಜ ಜೀವನದಲ್ಲಿಯೂ ಮದ್ವೆಯಾಗಲಿ ಎಂಬುವುದು ಈ ಜೋಡಿಯ ಆಶಯವಾಗಿತ್ತು. ಬಹುಶಃ ಬಹು ಜನರ ಮ್ಯಾನಿಫೆಸ್ಟೇಷನ್ ವರ್ಕ್ ಔಟ್ ಆಯಿತು ಅನ್ಸುತ್ತೆ. ಇದೀಗ ಇದೇ ಜೋಡಿಯೇ ರಾಜಸ್ಥಾನದ ಉದಯಪುರದ ರೆಸಾರ್ಟ್ಸ್‌ವೊಂದರಲ್ಲಿ ಆತ್ಮೀಯರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿದೆ. ಹೈದರಾಬಾದ್‌ನಲ್ಲಿ ರಿಸೆಪ್ಷನ್ ನಡೆಯಲಿದೆ.
ಶೆಟ್ಟರ ಗ್ಯಾಂಗ್
ರಶ್ಮಿಕಾ ಮದ್ವೆ ಬಗ್ಗೆ ಶೆಟ್ಟರ ಗ್ಯಾಂಗ್‌ನ ಪ್ರಮೋದ್ ಶೆಟ್ಟಿಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದು, ನಮಗ್ಯಾರಿಗೂ ಮದುವೆ ಆಮಂತ್ರಣವಿಲ್ಲ. ಅವಳು ಕಳಿಸುವುದೂ ಇಲ್ಲ. ಮದ್ವೆಗೆ ಯಾರೂ ಹೋಗುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕಿರಿಕ್ ಪಾರ್ಟಿಯಿಂದ ಹಿಡಿದು ಮೊನ್ನೆ ಮೊನ್ನೆ ರಿಲೀಸ್ ಆದ ಕಾಂತಾರಾ, ಸು ಫ್ರಂ ಸೋ...ಸೇರಿ ರಾಜ್ಯದ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ (Rakshith Shetty), ಪ್ರಮೋದ್ ಶೆಟ್ಟಿ (Pramod Shetty) ಹಾಗೂ ರಾಜ್ ಬಿ ಶೆಟ್ಟಿ (Raj B Shetty) ಒಬ್ಬರಿಗೊಬ್ಬರ ಹೆಗಲು ಕೊಟ್ಟು ಜೊತೆಯಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಈ ಗ್ಯಾಂಗ್‌ಗೆ ಶೆಟ್ಟರ ಗ್ಯಾಂಗ್ ಎಂದೇ ಕರೆಯಲಾಗುತ್ತದೆ.
ಬ್ರೇಕ್‌ಅಪ್ ಬಳಿಕ ನೋವು ಅನುಭವಿಸಿದ್ದ ರಕ್ಷಿತ್ ಶೆಟ್ಟಿ
ರಶ್ಮಿಕಾ ಮಂದಣ್ಣ ಜೊತೆ ಬ್ರೇಕ್ ಅಪ್ ಆದ ಸ್ವಲ್ಪ ದಿನ ರಕ್ಷಿತ್ ತುಂಬಾ ನೋವು ಅನುಭವಿಸಿದ್ದರು. ಆದರೆ, ಕ್ರಮೇಣ ಎಲ್ಲವನ್ನೂ ಬಿಟ್ಟು ಸರಿಯಾದನೆಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪ್ರಮೋದ್ ಶೆಟ್ಟಿ ಹೇಳಿದ್ದರು. ಸ್ವಲ್ಪ ತಾವಾಯಿತು, ತಮ್ಮ ಪಾಡಾಯಿತು ಎಂದೇ ಇರುವ ರಕ್ಷಿತ್ ಶೆಟ್ಟಿ ಇದುವರೆಗೂ ರಶ್ಮಿಕಾ ಬಗ್ಗೆ ಎಲ್ಲಿಯೂ ಒಂದು ನೆಗಟಿವ್ ಕಮೆಂಟ್ ಮಾಡಿಲ್ಲ. ಇತ್ತೀಚೆಗೆ ಕನ್ನಡಪ್ರಭಕ್ಕೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದು, ಐದು ಚಿತ್ರಗಳ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದೇನೆ ಎಂಬ ಗುಡ್ ನ್ಯೂಸ್ ನೀಡಿದ್ದಾರೆ.
ಕನ್ನಡಿಗರು ಇನ್ನೂ ರಶ್ಮಿಕಾರನ್ನು ಟ್ರೋಲ್ ಮಾಡುವುದು ನಿಲ್ಲಿಸಿಲ್ಲ
ಕಿರಿಕ್ ಪಾರ್ಟಿ ರಿಲೀಸ್ ಆಗಿ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಿಷಭ್ ಶೆಟ್ಟಿ (Rishab Shetty) ಪೋಸ್ಟ್ ಮಾಡಿದ ಪೋಸ್ಟರ್‌ನಲ್ಲಿ ರಶ್ಮಿಕಾ ಬಿಟ್ಟು ಹಾಕಿದ ಫೋಟೋವೊಂದು ಬಾರೀ ಚರ್ಚೆಗೆ ಗ್ರಾಸವಾಗಿತ್ತು. ರಕ್ಷಿತ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಕ್ಕೇ ಕನ್ನಡಿಗರೂ ಇನ್ನೂ ರಶ್ಮಿಕಾಳರನ್ನು ಟ್ರೋಲ್ ಮಾಡೋದು ಬಿಟ್ಟಿಲ್ಲ. ಅದಕ್ಕೆ ಸರಿಯಾಗಿ ಈ ನಟಿ ಕನ್ನಡ ಸಿನಿಮಾ ಹಾಗೂ ಕರ್ನಾಟಕದ ಬಗ್ಗೆ ಎಲ್ಲಿಯೂ ಮಾತನಾಡದೇ ಇರುವುದು, ಕನ್ನಡ ಗೊತ್ತಿಲ್ಲ ಎನ್ನುವಂತೆ ಆಡುವುದೂ ಸಹ ಕನ್ನಡಿಗಿರ ಕೆಂಗಣ್ಣಿಗೆ ಗುರಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

