MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ನನ್ನದು ತಪ್ಪಾಯ್ತು..! ಜಸ್ಪ್ರೀತ್ ಬುಮ್ರಾ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ರಾಮ್‌ಚರಣ್..! ಅಷ್ಟಕ್ಕೂ ಆಗಿದ್ದೇನು?

ನನ್ನದು ತಪ್ಪಾಯ್ತು..! ಜಸ್ಪ್ರೀತ್ ಬುಮ್ರಾ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ರಾಮ್‌ಚರಣ್..! ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರು: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಅವರ ಕುರಿತಂತೆ ಬಹುಭಾಷಾ ನಟ ರಾಮ್ ಚರಣ್‌ ಆಡಿರುವ ಒಂದು ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೇ ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ ನೋಡೋಣ ಬನ್ನಿ. 

2 Min read
Author : Naveen Kodase
Published : May 24 2026, 11:06 AM IST
Share this Photo Gallery
  • FB
  • TW
  • Linkdin
  • Whatsapp
16
ಭೂಪಾಲ್‌ನಲ್ಲಿ ಪೆದ್ದಿ ಸಿನಿಮಾದ ಮ್ಯೂಸಿಕ್ ಲಾಂಚ್
Image Credit : Asianet News

ಭೂಪಾಲ್‌ನಲ್ಲಿ ಪೆದ್ದಿ ಸಿನಿಮಾದ ಮ್ಯೂಸಿಕ್ ಲಾಂಚ್

ಖ್ಯಾತ ಟಾಲಿವುಡ್ ನಟ ರಾಮ್ ಚರಣ್ ಭೂಪಾಲ್‌ನಲ್ಲಿ ನಿನ್ನೆ ಪೆದ್ದಿ ಸಿನಿಮಾದ ಗ್ರ್ಯಾಂಡ್ ಮ್ಯೂಸಿಕ್ ಲಾಂಚ್ ಮಾಡಿದರು. ಈ ಸಂದರ್ಭದಲ್ಲಿ ಎ.ಆರ್ ರೆಹಮಾನ್, ಜಾಹ್ನವಿ ಕಪೂರ್ ಹಾಗೂ ಸಿನಿಮಾ ತಂಡ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ರಾಮ್ ಚರಣ್ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Add Asianetnews Kannada as a Preferred SourcegooglePreferred
26
ಕ್ರಿಕೆಟಿಗರ ಬಗ್ಗೆ ತಮ್ಮದೇ ವ್ಯಾಖ್ಯಾನ ಮಾಡಿದ ರಾಮ್ ಚರಣ್
Image Credit : JioStudios youtube

ಕ್ರಿಕೆಟಿಗರ ಬಗ್ಗೆ ತಮ್ಮದೇ ವ್ಯಾಖ್ಯಾನ ಮಾಡಿದ ರಾಮ್ ಚರಣ್

ಹೌದು, ಪೆದ್ದಿ ಸಿನಿಮಾದ ಮ್ಯೂಸಿಕ್ ಲಾಂಚ್ ವೇಳೆಯಲ್ಲಿ ನಿರೂಪಕರು, ಭಾರತೀಯ ಕ್ರಿಕೆಟರ್ಸ್ ಬಗ್ಗೆ ನಿಮ್ಮದೇ ರೀತಿಯಲ್ಲಿ ಬಣ್ಣಿಸಿ ಎಂದು ಕೇಳಿಕೊಂಡರು. ಒಬ್ಬೊಬ್ಬ ಕ್ರಿಕೆಟಿಗರ ಬಗ್ಗೆ ರಾಮ್ ಚರಣ್ ತನ್ನದೇ ಆದ ವ್ಯಾಖ್ಯಾನ ಮಾಡಿದರು.

Related Articles

Related image1
IPL 2026: ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
Related image2
‘ಪೆದ್ದಿ’ ಟ್ರೇಲರ್‌ನಲ್ಲಿ ರಾಮ್ ಚರಣ್-ಶಿವಣ್ಣ ಅಬ್ಬರ: ರಿಷಬ್ ಶೆಟ್ಟಿ ನೀಡಿದ ಪ್ರತಿಕ್ರಿಯೆ ವೈರಲ್!
36
ಕೊಹ್ಲಿ ಒಂದು ರೀತಿ ಬೆಂಕಿ ಎಂದ ಪೆದ್ದಿ ನಟ
Image Credit : Facebook

ಕೊಹ್ಲಿ ಒಂದು ರೀತಿ ಬೆಂಕಿ ಎಂದ ಪೆದ್ದಿ ನಟ

ಸಚಿನ್ ತೆಂಡೂಲ್ಕರ್ ಬಗ್ಗೆ ಕೇಳಿದಾಗ ಅವರೊಬ್ಬ ಲೆಜೆಂಡ್ ಹಾಗೂ ದೀರ್ಘಕಾಲ ಆಡಿದ ಅತಿಹೆಚ್ಚು ಬಾರಿಸಿದ ಸರದಾರ ಎಂದು ಬಣ್ಣಿಸಿದರು. ಇನ್ನು ಧೋನಿ ತಾಳ್ಮೆ ಹಾಗೂ ಶಾಂತತೆಯ ಪ್ರತೀಕ ಎಂದರು. ಇನ್ನು ರೋಹಿತ್ ಶರ್ಮಾ ಪ್ರತಿಯೊಬ್ಬರ ಪ್ರೀತಿಯ ವ್ಯಕ್ತಿ ಎಂದು ಅಭಿಪ್ರಾಯಪಟ್ಟರೇ, ಕೊಹ್ಲಿ ಒಂದು ರೀತಿಯ ಬೆಂಕಿ ಎಂದು ಬಣ್ಣಿಸಿದರು.

46
ಬುಮ್ರಾ ಫುಟ್ಬಾಲ್ ಆಟಗಾರ ಎಂದ ರಾಮ್ ಚರಣ್
Image Credit : Social Media

ಬುಮ್ರಾ ಫುಟ್ಬಾಲ್ ಆಟಗಾರ ಎಂದ ರಾಮ್ ಚರಣ್

ಇದೇ ವೇಳೆ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಕೇಳಿದಾಗ, ರಾಮ್ ಚರಣ್, ತಾವು ಅವರ ಅತಿದೊಡ್ಡ ಅಭಿಮಾನಿ ಎಂದು ಹೇಳಿದರು. ಆದರೆ ಅವರನ್ನು ಬಣ್ಣಿಸುವ ವೇಳೆ ಕ್ರಿಕೆಟ್ ಹಾಗೂ ಫುಟ್ಬಾಲ್ ಮಿಕ್ಸ್‌ ಮಾಡಿದರು. ಬುಮ್ರಾ ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ. ನನಗೆ ಫುಟ್ಬಾಲ್ ತುಂಬಾನೆ ಇಷ್ಟ. ನೀವು ಇದನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೀರ. ಲವ್ ಯೂ ಸರ್ ಎಂದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

#RamCharan Gets Confused Between Sunil Chhetri and Jasprit Bumrah 😄#JaspritBumrah - I am your biggest fan. I love football, and you've taken it to greater heights. Love you, sir. ❤️#PEDDIpic.twitter.com/8EU3TRn7Z7

— Movies4u Official (@Movies4u_Officl) May 23, 2026

56
ಕ್ರಿಕೆಟ್ ಜತೆ ಫುಟ್ಬಾಲ್ ಮಿಕ್ಸ್ ಮಾಡಿದ ರಾಮ್ ಚರಣ್
Image Credit : Youtube@Vriddhicinemas

ಕ್ರಿಕೆಟ್ ಜತೆ ಫುಟ್ಬಾಲ್ ಮಿಕ್ಸ್ ಮಾಡಿದ ರಾಮ್ ಚರಣ್

ರಾಮ್ ಚರಣ್, ಬುಮ್ರಾ ಅವರನ್ನು ಸುನಿಲ್ ಚೆಟ್ರಿ ಅಂದುಕೊಂಡು ಹೀಗೆ ಹೇಳಿರಬಹುದು ಎನ್ನುವ ಚರ್ಚೆ ಕೂಡಾ ನಡೆಯುತ್ತಿದೆ. ಆದರೆ ತಾವು ಮಾತನಾಡಿರುವುದು ಬುಮ್ರಾಗೆ ಅಗೌರವ ಸೂಚಿಸಿದಂತಾಗುತ್ತದೆ ಎನ್ನುವುದು ಗಮನಕ್ಕೆ ಬರುತ್ತಿದ್ದಂತೆಯೇ ರಾಮ್ ಚರಣ್, ತಮ್ಮ ಅಧಿಕೃತ ಎಕ್ಸ್(ಟ್ವಿಟರ್) ಖಾತೆಯಲ್ಲಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.

66
ಬಹಿರಂಗವಾಗಿ ಬುಮ್ರಾ ಕ್ಷಮೆ ಕೋರಿದ ರಾಮ್ ಚರಣ್
Image Credit : others

ಬಹಿರಂಗವಾಗಿ ಬುಮ್ರಾ ಕ್ಷಮೆ ಕೋರಿದ ರಾಮ್ ಚರಣ್

ನಾನು ಕೆಲವೊಮ್ಮೆ ಹೆಸರುಗಳನ್ನು ಮರೆತುಬಿಡುತ್ತೇನೆ. ಇದಕ್ಕಾಗಿ ಜಸ್ಪ್ರೀತ್ ಬುಮ್ರಾ ಅವರಲ್ಲಿ ಕ್ಷಮೆ ಕೇಳುತ್ತೇನೆ. ಅಪಾರ ಜನಸಮೂಹದ ನಡುವೆ ಎಕ್ಸೈಟ್‌ಮೆಂಟ್‌ನಲ್ಲಿ ನಡೆದ ಮನುಷ್ಯ ಸಹಜ ತಪ್ಪು. ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ ಹಾಗೂ ನಿಮ್ಮ ಆಟದ ದೊಡ್ಡ ಅಭಿಮಾನಿ. ನೀವು ಎದುರಾಳಿ ದೇಶದ ಆಟಗಾರರ ವಿಕೆಟ್ ಕಬಳಿಸುವ ಮೂಲಕ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತೆ ಮಾಡುತ್ತಿದ್ದೀರ ಎಂದು ಪೆದ್ದಿ ನಾಯಕ ನಟ ರಾಮ್ ಚರಣ್ ಹೇಳಿದ್ದಾರೆ.

Uff… I’m genuinely so forgetful with names sometimes.

Apologies to @Jaspritbumrah93 Ji for the mix-up - it was a genuine human error in the middle of all the excitement and the crowd 🙏🏼

I truly respect you and I am a huge fan of your game. You make every Indian feel proud when…

— Ram Charan (@AlwaysRamCharan) May 23, 2026

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಮನರಂಜನಾ ಸುದ್ದಿ
ಟಾಲಿವುಡ್
ರಾಮ್ ಚರಣ್
ಟೀಮ್ ಇಂಡಿಯಾ
ಕ್ರಿಕೆಟ್

Latest Videos
Recommended Stories
Recommended image1
Rakshit Shetty ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ; ಹಾಫ್‌ ಸೆಂಚುರಿ ಹೊಡೆದ ತಂದೆ-ತಾಯಿ! PHOTOS
Recommended image2
ಚಿರಂಜೀವಿ ಜೊತೆ ನಟಿಸೋದು, ಡ್ಯಾನ್ಸ್ ಮಾಡೋದು ದುಃಸ್ವಪ್ನ: ಪ್ರೀತ್ಸೆ ನಟಿ ಹೇಳಿಕೆ ವೈರಲ್!
Recommended image3
ನಾಟ್ಯ ಮಯೂರಿ ಸುಧಾ ಚಂದ್ರನ್ ಜೊತೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ 'ಲಕ್ಷ್ಮೀ ಬಾರಮ್ಮ' ನಟಿ
Related Stories
Recommended image1
IPL 2026: ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
Recommended image2
‘ಪೆದ್ದಿ’ ಟ್ರೇಲರ್‌ನಲ್ಲಿ ರಾಮ್ ಚರಣ್-ಶಿವಣ್ಣ ಅಬ್ಬರ: ರಿಷಬ್ ಶೆಟ್ಟಿ ನೀಡಿದ ಪ್ರತಿಕ್ರಿಯೆ ವೈರಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved