ಕಲರ್‌ಫುಲ್ ಫೋಟೋಗಳನ್ನು ಶೇರ್ ಮಾಡಿ ಯುವಕರ ನಿದ್ದೆಗೆಡಿಸಿದ ನಟಿ ರಕುಲ್ ಪ್ರೀತ್ ಸಿಂಗ್!
ನಟಿ ರಕುಲ್ ಅವರು ಕನ್ನಡದಲ್ಲಿ 'ಗಿಲ್ಲಿ' ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಈ ಮೂಲಕ ಕನ್ನಡಿಗರ ಪ್ರೀತಿಗೂ ಪಾತ್ರಾಗಿದ್ದಾರೆ.

ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಅವರು ತಮ್ಮ ಹತ್ತುಹಲವು ಸ್ಟೈಲಿಶ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ, ಡಾರ್ಕ ಪಿಂಕ್ ಡ್ರೆಸ್‌ನಲ್ಲಿ ಸಖತ್ ಮಿಂಚುತ್ತಿರುವ ನಟಿ ರಕುಲ್ ಪ್ರೀತ್ ಸಿಂಗ್ ಅವರು 'ನನ್ನಬಾರ್ಬಿ ಲ್ಯಾಂಡ್‌ನಲ್ಲಿ (In my barbie land) ಎಂದು ಅದಕ್ಕೊಂದು ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ.
ತಮ್ಮ ಸೌಂದರ್ಯವನ್ನು ಅನಾವರಣಗೊಳಿಸುವ ಫೋಟೋಗಳನ್ನು ತುಂಬಾ ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಟಿ ರಕುಲ್ ಪ್ರೀತ್ ಸಿಂಗ್ ಎನ್ನಬಹುದು.
ನಟಿ ರಕುಲ್ ಪ್ರೀತ್ ಸಿಂಗ್ ಬಹುಭಾಷಾ ನಟಿ. ಬಾಲಿವುಡ್ ಸೇರಿದಂತೆ ತೆಲುಗು ಹಾಗೂ ತಮಿಳಿನಲ್ಲಿ ಕೂಡ ನಟಿ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ತೆಲುಗಿನ ಸ್ಟಾರ್ ನಟ ಪ್ರಿನ್ಸ್ ಖ್ಯಾತಿಯ ಮಹೇಶ್ ಬಾಬು ಹಾಗೂ ಹಲವು ಸ್ಟಾರ್ ನಟರುಗಳ ಜೊತೆ ತೆರೆ ಹಂಚಿಕೊಂಡ ಖ್ಯಾತಿ ಈ ನಟಿಗಿದೆ.
ಮಹೇಶ್ ಬಾಬು ಜೊತೆ ನಟಿ ರಕುಲ್ ಪ್ರೀತ್ ಸಿಂಗ್ ಅವರು 'ಸ್ಪೈಡರ್' ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರವು ತಮಿಳಿನಲ್ಲಿ ಕೂಡ ರಿಲೀಸ್ ಆಗಿದೆ. ಹೀಗಾಗಿ ನಟಿ ರಕುಲ್ ಪ್ರೀತ್ ಸಿಂಗ್ ತಮಿಳು ಹಾಗೂ ತೆಲುಗು ಪ್ರೇಕ್ಷಕರಿಗೆ ಕೂಡ ಪರಿಚಿತವಾದ ಮುಖ.
ಆಧ್ಯಾತ್ಮದಲ್ಲೂ ಒಲವು ಹೊಂದಿರುವ ನಟಿ ರಕುಲ್ ಪ್ರೀತ್ ಸಿಂಗ್ ಅವರು ಯೋಗ ಹಾಗೂ ಧ್ಯಾನದ ಮೊರೆ ಹೋಗುವುದು ಕೂಡ ಹೊಸ ಸಂಗತಿಯೇನೂ ಅಲ್ಲ. ಕಾರಣ, ಅವರು ಸದ್ಗುರು ಸ್ಥಳವಾದ ಕೊಯಮುತ್ತೂರಿನ 'ಈಶ' ಧ್ಯಾನ ಕೇಂದ್ರಕ್ಕೆ ಆಗಾಗ ಭೇಟಿ ನೀಡುತ್ತಾರೆ.
ಜೊತೆಗೆ, ಅಲ್ಲಿ ತಾವು ಮಾಡಿದ ಧ್ಯಾನ-ಯೋಗಗಳ ಫೊಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಅಧೀಕೃತ ಖಾತೆಯಲ್ಲಿ ಶೇರ್ ಮಾಡುತ್ತಾರೆ.
ಒಟ್ಟಿನಲ್ಲಿ ಹೇಳಬೇಕು ಎಂದರೆ, ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ರಕುಲ್ ಪ್ರೀತ್ ಸಿಂಗ್ ಅವರು ಈಗ ಸಿನಿಮಾ ನಟನೆಯನ್ನು ಕಡಿಮೆ ಮಾಡಿದ್ದಾರೆ ಎನ್ನಬಹುದು.
ರಕುಲ್‌ಗೆ ಅವಕಾಶಗಳೇ ಕಡಿಮೆ ಆಗಿವೆಯೋ ಅಥವಾ ಅವರೇ ಚೂಸಿ ಆಗಿದ್ದಾರೋ ಎಂಬುದನ್ನು ಅವರೇ ಹೇಳಬೇಕು. ಸದ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿರುವ ಕಲರ್‌ಫುಲ್ ಫೋಟೋಗಳು ಬಹಳಷ್ಟು ವೈರಲ್ ಆಗಿದ್ದು ಹಲವರ ನಿದ್ದೆ ಕೆಡಿಸುವುದು ಖಂಡಿತ ಎನ್ನಬಹುದು.