8 ವರ್ಷದ ಹಿಂದೆ, 'ಉಪ್ಪಿ ರುಪ್ಪಿ' ಸಿನಿಮಾಗಾಗಿ ನೀಡಿದ್ದ ಅಡ್ವಾನ್ಸ್ ವಾಪಾಸ್ ನೀಡದೇ ಗುಳಿಕೆನ್ನೆ ಚಲುವೆ ಆಟ ಆಡುಸುತ್ತಿದ್ದಾರೆ ಎನ್ನಲಾಗಿದೆ. 8 ವರ್ಷಗಳ ಹಿಂದೆಯೇ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ರಚಿತಾ ರಾಮ್ ನಟನೆಯಲ್ಲಿ 'ಉಪ್ಪಿ ರುಪ್ಪಿ' ಸಿನಿಮಾ ಮೂಡಿ ಬರಬೇಕಿತ್ತು.

ಹೌದು, ಕನ್ನಡದ ನಟಿ ರಚಿತಾ ರಾಮ್ (Rachita Ram) ವಿರುದ್ಧ ಇದೀಗ ಫಿಲ್ಮ್ ಚೇಂಬರ್‌ನಲ್ಲಿ ಮತ್ತೊಂದು ದೂರು ದಾಖಲಾಗಿದೆ. 8 ವರ್ಷದ ಹಿಂದೆ ತೆಗೆದುಕೊಂಡಿದ್ದ ಅಡ್ವಾನ್ಸ್ ಹಣ ವಾಪಸ್ ಕೊಡದೇ ನಿರ್ಮಾಪಕಿಯೊಬ್ಬರನ್ನು ಸತಾಯಿಸುತ್ತಿರುವ ಆರೋಪ ಈ ನಟಿಯ ಮೇಲೆ ಬಂದಿದೆ. ನಟಿ ರಚಿತಾ ರಾಮ್ ಅವರು ಅಡ್ವಾನ್ಸ್ ವಾಪಾಸ್ ಕೊಡದೇ ನಿರ್ಮಾಪಕಿಯನ್ನ ಆಟ ಆಡಿಸುತ್ತಿದ್ದಾರೆ ಎಂದು ಕರ್ನಾಟಕ ಫಿಲಂ ಚೆಂಬರ್‌ನಲ್ಲಿ ದೂರು ದಾಖಲಾಗಿದ್ದು, ಇದೀಗ ವಿಷಯ ಬೆಳಕಿಗೆ ಬಂದಿದೆ.

8 ವರ್ಷದ ಹಿಂದೆ, 'ಉಪ್ಪಿ ರುಪ್ಪಿ' ಸಿನಿಮಾಗಾಗಿ ನೀಡಿದ್ದ ಅಡ್ವಾನ್ಸ್ ವಾಪಾಸ್ ನೀಡದೇ ಗುಳಿಕೆನ್ನೆ ಚಲುವೆ ಆಟ ಆಡುಸುತ್ತಿದ್ದಾರೆ ಎನ್ನಲಾಗಿದೆ. 8 ವರ್ಷಗಳ ಹಿಂದೆಯೇ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ರಚಿತಾ ರಾಮ್ ನಟನೆಯಲ್ಲಿ 'ಉಪ್ಪಿ ರುಪ್ಪಿ' ಸಿನಿಮಾ ಮೂಡಿ ಬರಬೇಕಿತ್ತು. ಉಪ್ಪಿ ರುಪ್ಪಿ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ಒಪ್ಪಿಕೊಂಡಿದ್ದರು ನಟಿ ರಚಿತಾ ರಾಮ್. ವಿಜಯಲಕ್ಷ್ಮಿ ಅರಸ್ ನಿರ್ಮಾಣದ ಸಿನಿಮಾಗೆ ಕೆ. ಮಾದೇಶ್ ನಿರ್ದೇಶಕರಾಗಿದ್ದರು.

ಅಂದು 23 ಲಕ್ಷ ಸಂಭಾವನೆಗೆ ಕಮಿಟ್ ಆಗಿದ್ದ ರಚಿತಾ ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರು ಎನ್ನಲಾಗಿದೆ.

2017 ರಲ್ಲಿ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಪ್ಲಾನ್ ಮಾಡಿತ್ತು ಚಿತ್ರತಂಡ. ಬರುವುದಾಗಿ ಒಪ್ಪಿಕೊಂಡು ಟಿಕೆಟ್ ಬುಕ್ ಮಾಡಿದ ಮೇಲೆ ರಚಿತಾ ರಾಮ್ ಬಂದಿರಲಿಲ್ಲ. 15 ದಿನಗಳ ಕಾಲ ಈಗ ಬರ್ತೀನಿ ಆಗ ಬರ್ತೀನಿ ಅಂತ ಆಟ ಆಡಿಸಿದ್ದರು ರಚಿತಾ. 15 ದಿನಗಳೂ ಪ್ರತಿ ದಿನ ಟಿಕೆಟ್ ಬುಕ್ ಮಾಡಿ ಸೂಟ್ ರೂಮ್ ಬುಕ್ ಮಾಡಿಕೊಂಡು ಕಾದಿದ್ದರು ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಎನ್ನಲಾಗಿದೆ.

ಬಂದ ಜಾಗ ಸುಂಕ ವಿಲ್ಲ ಅಂತ ಚಿತ್ರತಂಡ ಹೀರೋ ಪೋರ್ಷನ್ ಮಾತ್ರ ಶೂಟ್ ಮಾಡಿಕೊಂಡು ವಾಪಾಸ್ ಆಗಿತ್ತು. ಇದೀಗ, ಸಿನಿಮಾ ಆಗೋದು ಹಾಗಿರಲಿ, ಅಡ್ವಾನ್ಸ್ ಹಣವಾದರೂ ವಾಪಸ್ ಬರಲಿ ಎಂದು ಕಾದಿದ್ದ ನಿರ್ಮಾಪಕಿಯ ನಿರೀಕ್ಷೆ ಸುಳ್ಳಾಗಿದೆ. ನಟಿ ರಚಿತಾ ರಾಮ್ ಅವರಿಂದ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು ಒಂದೂವರೆ ಕೋಟಿ ರೂಪಾಯಿ ಕಳೆದುಕೊಂಡ ನಿರ್ಮಾಪಕಿ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್, ಇದೀಗ ದೂರು ನೀಡಿದ್ದಾರೆ.

ಒಂದು ದಿನ ಮಾತ್ರ ಮೈಸೂರ್‌ನಲ್ಲಿ ನಡೆದ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿ ಆಗಿದ್ದ ರಚಿತಾ ಆಮೇಲೆ ಚಿತ್ರೀಕರಣಕ್ಕೆ ಬಂದಿರಲೇ ಇಲ್ಲ. ನಟಿ ರಚಿತಾ ರಾಮ್ ಕಾರಣದಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಗಿದೆ. 35 ಪರ್ಸೆಂಟ್ ಕಂಪ್ಲೀಟ್ ಆಗಿ ನಿಂತು ಹೋದ ಸಿನಿಮಾ, ಹಣವು ಇಲ್ಲ ಸಿನಿಮಾನು ಕಂಪ್ಲೀಟ್ ಆಗಿಲ್ಲ ಎನ್ನುವಂತಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ.

ಆವತ್ತಿನಿಂದ ಸಂಪರ್ಕಕ್ಕೆ ಸಿಗದೇ ನಟಿ ರಚಿತಾ ರಾಮ್ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಫಿಲಂ ಚೆಂಬರ್‌ಗೆ ತಾವು ಸಲ್ಲಿಸಿರುವ ದೂರಿನಲ್ಲಿ ದಾಖಲಿಸಿದ್ದಾರೆ. ರಚಿತಾ ರಾಮ್ ಅವರು ಅಡ್ವಾನ್ಸ್ ವಾಪಸ್ ಮಾಡುತ್ತಾರೆ ಎಂದು ಇದುವರೆಗೂ ಕಾದಿದ್ದ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್, ಇದೀಗ ಕೊನೆಗೂ ಬೇರೆ ದಾರಿ ಕಾಣದೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈಗಲಾದ್ರೂ ನಟಿ ರಚಿತಾ ರಾಮ್ ಅವರು ತೆಗೆದುಕೊಂಡಿದ್ದ ಹಣ ವಾಪಸ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 2 ತಿಂಗಳ ಹಿಂದೆ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಾಗಿದೆ.