- Home
- Entertainment
- ರಸ್ತೆ ಮೇಲೆ ಏಕಾಏಕಿ ಕಾಣಿಸಿಕೊಂಡು ಉರುಳಾಡಿದ Spider Woman: ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ
ರಸ್ತೆ ಮೇಲೆ ಏಕಾಏಕಿ ಕಾಣಿಸಿಕೊಂಡು ಉರುಳಾಡಿದ Spider Woman: ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ
ಮುಂಬೈನ ರಸ್ತೆಯಲ್ಲಿ ಸ್ಪೈಡರ್ ವುಮೆನ್ ಆಗಿ ಕಾಣಿಸಿಕೊಂಡು ರಾಖಿ ಸಾವಂತ್ ಹಲ್ಚಲ್ ಸೃಷ್ಟಿಸಿದ್ದಾರೆ. ಪತಿ ಆದಿಲ್ ಖಾನ್ ಜೊತೆಗಿನ ಕೇಸ್ ಇತ್ಯರ್ಥ, ಜ್ಯೋತಿಷಿ ಸಲಹೆ ಹಾಗೂ ಮುಕೇಶ್ ಅಂಬಾನಿ ಮದುವೆ ಕುರಿತ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

ರಸ್ತೆಯ ಮೇಲೆ ಬಂದಿಳಿದ ಸ್ಪೈಡರ್ ವುಮೆನ್
ರಸ್ತೆಯ ಮೇಲೆ ಏಕಾಏಕಿ ಸ್ಪೈಡರ್ ಮಹಿಳೆ ಕಾಣಿಸಿಕೊಂಡು ಕೆಲಕಾಲ ಹಲ್ಚಲ್ ಸೃಷ್ಟಿಸಿದ ಘಟನೆ ಮುಂಬೈನಲ್ಲಿ ನಡೆಯಿತು. ಈಕೆಯ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದರು. ಕಾರಿನಿಂದ ಇಳಿಯುತ್ತಿದ್ದಂತೆಯೇ ಈ ಮಹಿಳೆಯನ್ನು ನೋಡಲು ಜನರು ಕಿಕ್ಕಿರಿದು ತುಂಬಿದರು.
ಯಾರೀಕೆ
ಕೊನೆಗೆ ನಾನು ಸ್ಪೈಡರ್ ವುಮನ್. ಸ್ಪೈಡರ್ ಮ್ಯಾನ್ ನನ್ನ ಬಾಯ್ಫ್ರೆಂಡ್ ಎಂದು ಈಕೆ ಬಾಯ್ಬಿಟ್ಟಾಗ ತಿಳಿಯಿತು, ಈಕೆ ಮತ್ಯಾರೂ ಅಲ್ಲ, ಬದಲಿಗೆ ದಿನನಿತ್ಯ ಹೊಸಹೊಸ ವೇಷಗಳಿಂದಲೇ ಹೈಲೈಟ್ ಆಗುತ್ತಿರುವ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಎಂದು.
ಡ್ರಾಮಾ ಕ್ವೀನ್ ರಾಖಿ
ವಿವಾದಗಳ ರಾಣಿ, ಡ್ರಾಮಾ ಕ್ವೀನ್ ರಾಖಿ ಸಾವಂತ್ (Rakhi Sawant) ಬಗ್ಗೆ ಎಲ್ಲರಿಗೂ ತಿಳಿದದ್ದೇ. ಮೈಸೂರಿನ ಯುವಕ ಆದಿಲ್ ಖಾನ್ ಅವರನ್ನು ಮದುವೆಯಾಗಿ ಫಾತಿಮಾ ಆಗಿ ಸೈಲೆಂಟ್ ಆಗಿ, ಮತ್ತೆ ಪಾಕಿಸ್ತಾನದ ಧರ್ಮಗುರುವನ್ನು ಮದುವೆಯಾಗಲು ಹೋಗುವುದಾಗಿ ಹೇಳಿ, ಮೆಕ್ಕಾಕ್ಕೂ ಭೇಟಿ ಕೊಟ್ಟು ಇದೀಗ ಮತ್ತದೇ ಪ್ಲಾಸ್ಟಿಕ್ ಸರ್ಜರಿ ದೇಹವನ್ನು ಪ್ರದರ್ಶಿಸುತ್ತಾ ಇರುವ ರಾಖಿ ಸಾವಂತ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.
ಆದಿಲ್ ವಿರುದ್ಧ ಕೇಸ್
ರಾಖಿ ಅವರು, ತಮ್ಮ ಪತಿ ಆದಿಲ್ ದುರಾನಿ (Adil Durrani) ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಇದನ್ನು ಬಾಂಬೆ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ. ಜೊತೆಗೆ, ಆದಿಲ್ ಕೂಡ ರಾಖಿ ವಿರುದ್ಧ ನೀಡಿದ್ದ ದೂರನ್ನೂ ವಜಾಗೊಳಿಸಲಾಗಿದೆ. ಇಬ್ಬರೂ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿರೋ ಹಿನ್ನೆಲೆಯಲ್ಲಿ ಕೇಸ್ ವಜಾ ಆಗಿದೆ.
ಜ್ಯೋತಿಷಿ ಮಾತು
ಸದಾ ಡ್ರೆಸ್ನಿಂದ ಟ್ರೋಲ್ ಆಗ್ತಿರೋ ರಾಖಿ ಸಾವಂತ್ ಇದಕ್ಕೂ ಒಂದು ಹೇಳಿಕೆ ನೀಡಿ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ್ದರು. ನೀವ್ಯಾಕೆ ಈ ರೀತಿಯ ಡ್ರೆಸ್ ಹಾಕುತ್ತೀರಿ ಎಂದು ಆ್ಯಂಕರ್ ಕೇಳಿದಾಗ ರಾಖಿ ಸಾವಂತ್ (Rakhi Sawanth), ನನಗೆ ಜ್ಯೋತಿಷಿ ಒಬ್ಬರು ಮೇಲಿನ ಹಾಗೂ ಕೆಳಗಿನ ಒಳ ಉಡುಪು ಹಾಕಬಾರದು. ಒಂದು ವೇಳೆ ಈ ಉಡುಪು ಹಾಕದಿದ್ದರೆ, ಟಾಪ್ ಲೆವಲ್ಗೆ ಹೋಗುವುದಾಗಿ ಹೇಳಿದ್ದಾರೆ ಎಂದಿದ್ದರು!
ಅಂಬಾನಿ ಜೊತೆ ಮದುವೆ
ಅಷ್ಟಕ್ಕೂ ಈಚೆಗಷ್ಟೇ ರಾಖಿ ಸಾವಂತ್, ಮದುಮಗಳಂತೆ ಶೃಂಗಾರ ಮಾಡಿಕೊಂಡು, ಮುಕೇಶ್ ಅಂಬಾನಿಯನ್ನು ಮದುವೆಯಾಗುತ್ತೇನೆ ಎಂದು ಹುಚ್ಚುಚ್ಚಾಗಿ ಆಡಿದ್ದವರು ಇದೇ ರಾಖಿ ಸಾವಂತ್. ನನ್ನ ಬ್ಲೌಸ್ 24 ಕ್ಯಾರೆಟ್ ಗೋಲ್ಡ್‌ನಿಂದ ಕೂಡಿದೆ. ನೀತಾ ಅಂಬಾನಿ ಬಂಗಾರದಲ್ಲಿ ಏನಾದರೂ ಮಿಕ್ಸ್ ಆಗಿರಬಹುದು, ಆದರೆ ನನ್ನ ಗೋಲ್ಡ್‌ನಲ್ಲಿ ಯಾವುದೂ ಮಿಸ್ ಇಲ್ಲ. ಮುಕೇಶ್ ಅಂಬಾನಿ ಅವರನ್ನು ನಾನು ಮದುವೆ ಆದರೆ, ಚೆನ್ನಾಗಿ ನೋಡಿಕೊಳ್ತೀನಿ. ನೀತು ಅಂಬಾನಿ ಅವರಿಗೆ ನಾನು ಸವತಿ ಆಗುತ್ತೇನೆ. ಅವರಿಂದ ನನಗೊಂದು ಮಗು ಬೇಕು ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

