MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಆಟೋದಲ್ಲಿ ರಜನಿಕಾಂತ್ ಎಂಟ್ರಿ, ಕರ್ನಾಟಕದ ಪ್ರಸಿದ್ಧ ದೇಗುಲದಲ್ಲಿ ನಡೀತಿದ್ದ ಶೂಟಿಂಗ್‌ ಸೆಟ್‌ಗೆ ಭಾರತಿ ವಿಷ್ಣುವರ್ಧನ್‌ ಭೇಟಿ

ಆಟೋದಲ್ಲಿ ರಜನಿಕಾಂತ್ ಎಂಟ್ರಿ, ಕರ್ನಾಟಕದ ಪ್ರಸಿದ್ಧ ದೇಗುಲದಲ್ಲಿ ನಡೀತಿದ್ದ ಶೂಟಿಂಗ್‌ ಸೆಟ್‌ಗೆ ಭಾರತಿ ವಿಷ್ಣುವರ್ಧನ್‌ ಭೇಟಿ

ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೈಸೂರು ಜಿಲ್ಲೆಯ ಐತಿಹಾಸಿಕ ತಾಣ ಸೋಮನಾಥಪುರಕ್ಕೆ ಆಗಮಿಸಿದ್ದಾರೆ. ಧರ್ಮನ್ ಸಿನಿಮಾದ ಶೂಟಿಂಗ್ ಹಿನ್ನೆಲೆಯಲ್ಲಿ ಆಗಮಿಸಿದ್ದಾರೆ. ಇನ್ನು ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದ್ದ ಭಾರತಿ ವಿಷ್ಣುವರ್ಧನ್, ರಜನಿಕಾಂತ್ ಜೊತೆ ಉಭಯ ಕುಶಲೋಪರಿ ನಡೆಸಿದರು.

1 Min read
Author : Ganesh Mabla Gowda
Published : Sep 29 2026, 08:56 PM IST
Share this Photo Gallery
  • FB
  • TW
  • Linkdin
  • Whatsapp
14
ತಲೈವಾ ಕಂಡು ಫ್ಯಾನ್ಸ್ ಖುಷ್
Image Credit : social media

ತಲೈವಾ ಕಂಡು ಫ್ಯಾನ್ಸ್ ಖುಷ್

ಸೂಪರ್‌ಸ್ಟಾರ್ ರಜನಿಕಾಂತ್ 'ಧರ್ಮನ್' (Dharman) ಚಿತ್ರದ ಶೂಟಿಂಗ್‌ಗಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಐತಿಹಾಸಿಕ ತಾಣ ಸೋಮನಾಥಪುರಕ್ಕೆ ಆಗಮಿಸಿದ್ದಾರೆ. ಟಿ. ನರಸೀಪುರ ತಾಲೂಕಿನ ಪ್ರಸಿದ್ಧ ಹೊಯ್ಸಳರ ಕಾಲದ ಕೇಶವ ದೇವಾಲಯದ ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿದೆ. ತಲೈವಾರನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಆಟೋದಲ್ಲಿ ಬಂದ ಸೂಪರ್‌ಸ್ಟಾರ್!
Image Credit : social media

ಆಟೋದಲ್ಲಿ ಬಂದ ಸೂಪರ್‌ಸ್ಟಾರ್!

ಸರಳತೆಗೆ ಹೆಸರಾದ ರಜನಿ ಶೂಟಿಂಗ್ ಸ್ಥಳಕ್ಕೆ ಆಟೋದಲ್ಲಿ ಬಂದಿರೋದು ಎಲ್ಲರನ್ನೂ ಅಚ್ಚರಿಗೊಳಿಸಿದರು. ತಮ್ಮ ನೆಚ್ಚಿನ ಸೂಪರ್ ಸ್ಟಾರ್‍ನ ನೋಡುತ್ತಿದ್ದಂತೆಯೇ ಅಭಿಮಾನಿಗಳು ಜೈಕಾರ ಹಾಕಿದರು. ಆಟೋದಲ್ಲಿ ಕುಳಿತೇ ರಜನಿಕಾಂತ್ ಅಭಿಮಾನಿಗಳತ್ತ ಕೈಬೀಸಿ ಸ್ವಾಗತಿಸಿದರು. ಈ ವೇಳೆ ಪುಟ್ಟ ಬಾಲಕನೊಬ್ಬ ರಜನಿಕಾಂತ್ ಅವರ ಖ್ಯಾತ 'ಬಾಬಾ' ಶೈಲಿಯ ಮುದ್ರೆಯನ್ನು ಪ್ರದರ್ಶಿಸಿದ್ದಾನೆ. ಈ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Related Articles

Related image1
'ಅದಕ್ಕೆ ಇನ್ನೊಂದು ಹೆಸರು ಬಕೆಟ್, ನಾನು ಬಕೆಟ್ ಹಿಡ್ಕೊಂಡೇ ಇರುತ್ತೀನಿ' ಶಿವಣ್ಣ ವಿಚಾರದಲ್ಲಿ ಲೂಸ್ ಮಾದಾ ಶಾಕಿಂಗ್ ಹೇಳಿಕೆ
Related image2
ತನ್ನದೇ ಸಾವಿನ ಸುದ್ದಿ ನೋಡಿ ಶಾಕ್! ಫೇಕ್ ನ್ಯೂಸ್‌ಗೆ ಪಾಕ್ ಕ್ರಿಕೆಟರ್ ಕೊಟ್ಟ ರಿಯಾಕ್ಷನ್ ವೈರಲ್
34
ಶೂಟಿಂಗ್ ಸೆಟ್‌ಗೆ ಭಾರತಿ ವಿಷ್ಣುವರ್ಧನ್
Image Credit : social media

ಶೂಟಿಂಗ್ ಸೆಟ್‌ಗೆ ಭಾರತಿ ವಿಷ್ಣುವರ್ಧನ್

ಇದೇ ವೇಳೆ.. ಸೋಮನಾಥಪುರದಲ್ಲಿ ನಡೆಯುತ್ತಿದ್ದ ‘ಧರ್ಮನ್’ ಚಿತ್ರದ ಶೂಟಿಂಗ್ ಸೆಟ್‌ಗೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿವರ್ಧನ್ ಹಾಗೂ ಅಳಿಯ ಅನಿರುದ್ಧ್ ಜಟ್ಕರ್ ಭೇಟಿ ನೀಡಿದರು. ಸೆಟ್‌ನಲ್ಲಿ ರಜನಿಕಾಂತ್ ಅವರನ್ನು ಆತ್ಮೀಯವಾಗಿ ಭೇಟಿಯಾದ ಈ ಕುಟುಂಬ, ಕೆಲಕಾಲ ಹರಟೆ ಹೊಡೆದು ಹಳೆಯ ನೆನಪುಗಳನ್ನು ಮೆಲಕು ಹಾಕಿತು. ಸಾಹಸಸಿಂಹ ಡಾ. ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನಡುವೆ ಇದ್ದ ಆಪ್ತ ಒಡನಾಟ ಜಗಜ್ಜಾಹೀರಾಗಿದೆ. ರಜನಿಕಾಂತ್ ಜೊತೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಅನಿರುದ್ಧ್ ಹಾಗೂ ಕುಟುಂಬಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

44
ಐತಿಹಾಸಿಕ ದೇಗುಲದಲ್ಲಿ 'ಧರ್ಮನ್' ಚಿತ್ರೀಕರಣ
Image Credit : social media

ಐತಿಹಾಸಿಕ ದೇಗುಲದಲ್ಲಿ 'ಧರ್ಮನ್' ಚಿತ್ರೀಕರಣ

ಸೋಮನಾಥಪುರದ ಚೆನ್ನಕೇಶವ ದೇವಾಲಯವು ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿದೆ. ಭವ್ಯ ಶಿಲ್ಪಕಲೆಯ ಹಿನ್ನೆಲೆಯಲ್ಲಿ ಚಿತ್ರದ ಕೆಲ ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಅಶ್ವತ್ ಮಾರಿಮುತ್ತು ನಿರ್ದೇಶಿಸುತ್ತಿರುವ ಹಾಗೂ ಕಮಲ್ ಹಾಸನ್ ಅವರ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಧರ್ಮನ್' ಚಿತ್ರದಲ್ಲಿ ರಜನಿಕಾಂತ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ರಜನೀಕಾಂತ್
ಮೈಸೂರು
ಮನರಂಜನಾ ಸುದ್ದಿ
ಸಿನಿಮಾ
 

Latest Videos
Recommended Stories
Recommended image1
ಮದುವೆಯಾದ ಒಂದೇ ತಿಂಗಳಿಗೆ ಗುಡ್‌ನ್ಯೂಸ್‌ ಕೊಟ್ರಾ ಯಜಮಾನ ಸೀರಿಯಲ್‌ ನಟಿ ಸ್ಫೂರ್ತಿ ರಮಿತಾ, ತಮ್ಮ ವಿಡಿಯೋಗೆ ತಾವೇ ಕೊಟ್ಟ ಸ್ಪಷ್ಟನೆ ಏನು?
Recommended image2
Amruthadhaare ಊಹಿಸದ ಟ್ವಿಸ್ಟ್​: ದೀಪಿಕಾ ಎದುರಿಗೆ ಬಂದ ಭೂಮಿಕಾ- ಮುಂದಾದದ್ದು ಮಾತ್ರ ಘೋರ ದುರಂತ
Recommended image3
ನಾನೇನೂ ಮೂರು ಬಿಟ್ಟೋಳಲ್ಲ, ಮರ್ಯಾದೆ ಇರೋಳು; ನನ್ನ ದೇಹ- ನನ್ನ ಬಟ್ಟೇರಿ: Bigg Boss ವೈಷ್ಣವಿ ಗರಂ
Related Stories
Recommended image1
'ಅದಕ್ಕೆ ಇನ್ನೊಂದು ಹೆಸರು ಬಕೆಟ್, ನಾನು ಬಕೆಟ್ ಹಿಡ್ಕೊಂಡೇ ಇರುತ್ತೀನಿ' ಶಿವಣ್ಣ ವಿಚಾರದಲ್ಲಿ ಲೂಸ್ ಮಾದಾ ಶಾಕಿಂಗ್ ಹೇಳಿಕೆ
Recommended image2
ತನ್ನದೇ ಸಾವಿನ ಸುದ್ದಿ ನೋಡಿ ಶಾಕ್! ಫೇಕ್ ನ್ಯೂಸ್‌ಗೆ ಪಾಕ್ ಕ್ರಿಕೆಟರ್ ಕೊಟ್ಟ ರಿಯಾಕ್ಷನ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved