ಸಮಂತಾ ಮತ್ತು ರಾಜ್ ದಂಪತಿಯನ್ನು ಚಿರಂಜೀವಿ ಹಾಗೂ ಸುರೇಖಾ ಅವರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಆದರೆ ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರು ನೀಡಿದ ಉಡುಗೊರೆ! ಸಮಂತಾ ದಂಪತಿಗೆ ಚಿರಂಜೀವಿ ದಂಪತಿ ಮಡಿಲು ತುಂಬಿ, ರೇಷ್ಮೆ ಸೀರೆ ಹಾಗೂ ಒಂದು ಮಂಗಳಕರವಾದ 'ಶಂಖ'ವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಮಂತಾ 'ಗುಡ್ ನ್ಯೂಸ್' ಲೀಕ್ ಮಾಡಿದ್ರಾ ಮೆಗಾಸ್ಟಾರ್? 'ಚಿರು ಲೀಕ್ಸ್' ಕಂಡು ಫ್ಯಾನ್ಸ್ ಫುಲ್ ಖುಷ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಲಿವುಡ್ ಅಂಗಳದಲ್ಲಿ 'ಚಿರು ಲೀಕ್ಸ್' ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಸಿನಿಮಾದ ಗುಟ್ಟು ಇರಲಿ ಅಥವಾ ಆಪ್ತರ ಖಾಸಗಿ ವಿಚಾರ ಇರಲಿ, ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರು ಅರಿಯದೇ ಅಥವಾ ಪ್ರೀತಿಯ ಭರದಲ್ಲಿ ಮೊದಲೇ ಲೀಕ್ ಮಾಡುವುದರಲ್ಲಿ ಎತ್ತಿದ ಕೈ. ಈಗ ಅಂತಹದ್ದೇ ಒಂದು ರೋಚಕ ಚರ್ಚೆ ನಟಿ ಸಮಂತಾ (Samantha Ruth Prabhu) ವಿಚಾರದಲ್ಲಿ ಶುರುವಾಗಿದೆ. ಸಮಂತಾ ಶೀಘ್ರದಲ್ಲೇ ತಾಯಿ ಆಗಲಿದ್ದಾರಾ? ಅವರ ಮನೆಗೆ 'ಪುಟ್ಟ ಅತಿಥಿ' ಆಗಮನ ಆಗಲಿದೆಯಾ? ಎಂಬ ಪ್ರಶ್ನೆಗೆ ಚಿರಂಜೀವಿ ಅವರ ಒಂದು ಟ್ವೀಟ್ ಈಗ ತುಪ್ಪ ಸುರಿದಿದೆ!

ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೇಟೆ:

ಸದ್ಯ ಸಮಂತಾ ಮತ್ತು ಅವರ ಪತಿ ರಾಜ್ ನಿಡಿಮೋರು ದಂಪತಿಯ ಪಾಲಿಗೆ ಇದು ಸುಗ್ಗಿಯ ಕಾಲ. ಇವರ ಕಾಂಬಿನೇಷನ್‌ನ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಫ್ಯಾಮಿಲಿ ಆ್ಯಕ್ಷನ್ ಡ್ರಾಮಾ ಕೇವಲ ನಾಲ್ಕೇ ದಿನಗಳಲ್ಲಿ ಪ್ರಪಂಚದಾದ್ಯಂತ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬೀಗುತ್ತಿದೆ. ಈ ಅಭೂತಪೂರ್ವ ಯಶಸ್ಸಿನ ಸಂಭ್ರಮ ಹಂಚಿಕೊಳ್ಳಲು ಚಿತ್ರತಂಡ ಮೆಗಾಸ್ಟಾರ್ ಚಿರಂಜೀವಿ ಅವರ ಮನೆಗೆ ಭೇಟಿ ನೀಡಿತ್ತು.

ಚಿರು ನೀಡಿದ ಉಡುಗೊರೆಯಲ್ಲಿ ಅಡಗಿದೆಯಾ ರಹಸ್ಯ?

ಸಮಂತಾ ಮತ್ತು ರಾಜ್ ದಂಪತಿಯನ್ನು ಚಿರಂಜೀವಿ ಹಾಗೂ ಸುರೇಖಾ ಅವರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಆದರೆ ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಅವರು ನೀಡಿದ ಉಡುಗೊರೆ! ಸಮಂತಾ ದಂಪತಿಗೆ ಚಿರಂಜೀವಿ ದಂಪತಿ ಮಡಿಲು ತುಂಬಿ, ರೇಷ್ಮೆ ಸೀರೆ ಹಾಗೂ ಒಂದು ಮಂಗಳಕರವಾದ 'ಶಂಖ'ವನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಾಮಾನ್ಯವಾಗಿ ನಮ್ಮ ಸಂಪ್ರದಾಯದಲ್ಲಿ ಮಗು ಹುಟ್ಟುವ ಮುನ್ನ ಅಥವಾ ಗರ್ಭಿಣಿಯರಿಗೆ ಇಂತಹ ವಿಶೇಷ ಸತ್ಕಾರ ಮಾಡಲಾಗುತ್ತದೆ. ಇದು ಸಾಲದು ಎಂಬಂತೆ ಚಿರಂಜೀವಿ ಅವರು ಮಾಡಿದ ಟ್ವೀಟ್ ಈಗ ಎಲ್ಲೆಡೆ ವೈರಲ್ ಆಗಿದೆ.

"ಹೊಸ ಅಧ್ಯಾಯ"ದ ಗುಟ್ಟೇನು?

ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡ ಚಿರಂಜೀವಿ, "ತಮ್ಮ ಜೀವನದ ಹೊಸ ಅಧ್ಯಾಯಕ್ಕೆ (New Chapter) ಕಾಲಿಡುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗೆ ವಿಶೇಷ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಈ 'ಹೊಸ ಅಧ್ಯಾಯ' ಎಂಬ ಪದವೇ ಈಗ ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ. "ಅಣ್ಣಯ್ಯ ಮತ್ತೆ ಲೀಕ್ ಮಾಡಿದ್ರು!", "ಇದು ಖಂಡಿತಾ ಪ್ರೆಗ್ನೆನ್ಸಿ ಸುದ್ದಿಯೇ ಇರಬೇಕು" ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಯಾವುದೇ ಅಧಿಕೃತ ಘೋಷಣೆಗೂ ಮುನ್ನವೇ ಮೆಗಾಸ್ಟಾರ್ ವಿಷಯ ಹೊರಹಾಕಿದ್ದರಿಂದ ಫ್ಯಾನ್ಸ್ ಇದನ್ನು 'ಚಿರು ಲೀಕ್ಸ್' ಎಂದು ಸಂಭ್ರಮಿಸುತ್ತಿದ್ದಾರೆ.

ವದಂತಿಗೆ ಪುಷ್ಟಿ ನೀಡಿದ 'ಬೇಬಿ ಬಂಪ್'!

ಅಂದಹಾಗೆ, ಈ ಚರ್ಚೆ ಈಗಷ್ಟೇ ಶುರುವಾಗಿದ್ದಲ್ಲ. ಇತ್ತೀಚೆಗೆ ನಡೆದ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಸಮಂತಾ ಅವರು ಸಡಿಲವಾದ ಉಡುಪು ಧರಿಸಿದ್ದರು ಮತ್ತು ಅವರ ಬೇಬಿ ಬಂಪ್ (Baby Bump) ಲೈಟ್ ಆಗಿ ಕಾಣಿಸುತ್ತಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಅಂದಿನಿಂದಲೇ ಸ್ಯಾಮ್ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದ್ದವು. ಈಗ ಚಿರಂಜೀವಿ ಅವರ ಪೋಸ್ಟ್ ಆ ವದಂತಿಗೆ ಅಧಿಕೃತ ಮೊಹರು ಒತ್ತಿದಂತಿದೆ.

ಒಟ್ಟಿನಲ್ಲಿ, 'ಮಾ ಇಂಟಿ ಬಂಗಾರಂ' ಚಿತ್ರದ ಯಶಸ್ಸಿನ ಜೊತೆಗೆ ಸಮಂತಾ ಅವರ ಜೀವನದಲ್ಲಿ ಹೊಸ ಸಂಭ್ರಮವೊಂದು ಶುರುವಾಗುತ್ತಿರುವುದು ಮಾತ್ರ ಸತ್ಯ. ಆ 'ಗುಡ್ ನ್ಯೂಸ್' ಅನ್ನು ಸ್ವತಃ ಸಮಂತಾ ಯಾವಾಗ ಅನೌನ್ಸ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಅಲ್ಲಿಯವರೆಗೆ ಮೆಗಾಸ್ಟಾರ್ ಅವರ ಈ 'ಚಿರು ಲೀಕ್ಸ್' ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ!