MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Animal ಫಿಲ್ಮ್​ ನಾಯಕಿಯಾಗಿದ್ರೆ ರಾಘವ್​ ಚಡ್ಡಾ ಜೊತೆ ಮದ್ವೆನೇ ಆಗ್ತಿರಲಿಲ್ಲ: ನಟಿ ಪರಿಣೀತಿ ಚೋಪ್ರಾ ರಿವೀಲ್​

Animal ಫಿಲ್ಮ್​ ನಾಯಕಿಯಾಗಿದ್ರೆ ರಾಘವ್​ ಚಡ್ಡಾ ಜೊತೆ ಮದ್ವೆನೇ ಆಗ್ತಿರಲಿಲ್ಲ: ನಟಿ ಪರಿಣೀತಿ ಚೋಪ್ರಾ ರಿವೀಲ್​

'ಅನಿಮಲ್' ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದ ಪರಿಣೀತಿ ಚೋಪ್ರಾ, ದಿನಾಂಕಗಳ ಸಮಸ್ಯೆಯಿಂದಾಗಿ 'ಅಮರ್ ಸಿಂಗ್ ಚಮ್ಕಿಲಾ' ಚಿತ್ರವನ್ನು ಆಯ್ದುಕೊಂಡರು. ಈ ನಿರ್ಧಾರದಿಂದಾಗಿಯೇ ತಮಗೆ ಪತಿ ರಾಘವ್ ಚಡ್ಡಾ ಸಿಕ್ಕಿದ್ದು, 'ಅನಿಮಲ್' ಒಪ್ಪಿಕೊಂಡಿದ್ದರೆ  ಮದುವೆ ಆಗುತ್ತಿರಲಿಲ್ಲ ಎಂದು ಪರಿಣೀತಿ ಬಹಿರಂಗಪಡಿಸಿದ್ದಾರೆ

2 Min read
Author : Suchethana D
Published : Apr 27 2026, 06:49 PM IST
Share this Photo Gallery
  • FB
  • TW
  • Linkdin
  • Whatsapp
16
ಅನಿಮಲ್​ ಹವಾ
Image Credit : google

ಅನಿಮಲ್​ ಹವಾ

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ರಣ್‌ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರು 'ಅನಿಮಲ್' (Animal) ಸಿನಿಮಾ ಯಾವ ಮಟ್ಟಿಗೆ ಸದ್ದು ಮಾಡಿತ್ತು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಹೆಣ್ಣಿನ ಮೇಲೆ ಕ್ರೌರ್ಯ ಹಾಗೂ ಅಶ್ಲೀಲತೆಯನ್ನು ವಿಜೃಂಭಿಸುವ ಈ ಸಿನಿಮಾದ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಸಿನಿಮಾ ಬ್ಲಾಕ್​ಬಸ್ಟರ್​ ಎನ್ನಿಸಿಕೊಂಡಿತ್ತು.

26
ರಶ್ಮಿಕಾ ಬದಲು ಪರಿಣೀತಿ
Image Credit : Asianet News

ರಶ್ಮಿಕಾ ಬದಲು ಪರಿಣೀತಿ

ಅಸಲಿಗೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಗೀತಾಂಜಲಿ ರೋಲ್​ಗೆ ಮೊದಲು ಆಯ್ಕೆಯಾಗಿದ್ದು ನಟಿ ಪರಿಣೀತಿ ಚೋಪ್ರಾ. ಅವರು ಆಗಿನ್ನೂ ಈಗ ಬಿಜೆಪಿ ಸೇರಿ ಸದ್ದು ಮಾಡ್ತಿರೋ ಆಪ್​ ಸಂಸದರಾಗಿದ್ದ ರಾಘವ್​ ಚಡ್ಡಾ ಅವರ ಜೊತೆ ಮದುವೆಯಾಗಿರಲಿಲ್ಲ. ಅನಿಮಲ್​ ಸಿನಿಮಾದಲ್ಲಿ ಬಹುತೇಕ ಮಾತುಕತೆ ಫಿಕ್ಸ್​​ ಆಗಿ ಇನ್ನೇನು ಶೂಟಿಂಗ್​ ಆರಂಭವಾಗುವಷ್ಟರಲ್ಲಿಯೇ ನಟಿ ಅದರಿಂದ ಹಿಂದಕ್ಕೆ ಸರಿದರು.

Related Articles

Related image1
Bhagyalakshmi: ಮತ್ತೊಂದು ಮದ್ವೆಯಾದ ಅಮ್ಮನ ಕಂಡ್ರೆ ಗುರ್​ ಎನ್ನೋ ತನ್ವಿ, ಇಲ್ನೋಡಿ ಭರ್ಜರಿ ಸ್ಟೆಪ್​
Related image2
ಪವನ್​ ಕಲ್ಯಾಣ್​ಗಾಗಿ ಆ ಜಾಗದಲ್ಲಿ ಅಂದು ಟ್ಯಾಟೂ: ಟೆಕ್ಕಿಗೆ ಇಂದು 10 ಕೋಟಿ ನಾಮ! Bigg Boss ಬ್ಯೂಟಿ ಖತರ್ನಾಕ್​ ಸ್ಟೋರಿ
36
ಕಾರಣ ಏನು?
Image Credit : instagram

ಕಾರಣ ಏನು?

ಪರಿಣಿತಿ ಚೋಪ್ರಾ ಅವರು 'ಆ್ಯನಿಮಲ್' ಚಿತ್ರವನ್ನು ತಿರಸ್ಕರಿಸಲು ಮುಖ್ಯ ಕಾರಣವೆಂದರೆ ದಿನಾಂಕಗಳ ಹೊಂದಾಣಿಕೆ ಆಗದೇ ಇದ್ದುದು. ಆ ಸಮಯದಲ್ಲಿ ಅವರು ಇಮ್ತಿಯಾಜ್ ಅಲಿ ನಿರ್ದೇಶನದ 'ಅಮರ್ ಸಿಂಗ್ ಚಮ್ಕಿಲಾ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅನಿಮಲ್​ ಮತ್ತು ಚಮ್ಕಿಲಾ ಸಿನಿಮಾದಲ್ಲಿ ಒಂದನ್ನು ಬಿಡಬೇಕಾಗಿ ಬಂದಿದ್ದರಿಂದ ಅವರು ಚಮ್ಕಿಲಾ ಸಿನಿಮಾ ಆಯ್ಕೆ ಮಾಡಿಕೊಂಡಿದ್ದರು. ಆ ಸಿನಿಮಾದ ಮೂಲಕವೂ ಪರಿಣೀತಿ ಅವರು ಸಾಕಷ್ಟು ಹೆಸರು ಮಾಡಿದರು.

46
ರಾಘವ್​ ಜೊತೆ ಮದ್ವೆ
Image Credit : Instagram

ರಾಘವ್​ ಜೊತೆ ಮದ್ವೆ

ಕುತೂಹಲದ ವಿಷ್ಯ ಏನೆಂದರೆ, ಅಮರ್ ಸಿಂಗ್ ಚಮ್ಕಿಲಾ' ಚಿತ್ರದ ಬದಲು ಅನಿಮಲ್​ ಚಿತ್ರ ಆಯ್ಕೆ ಮಾಡಿಕೊಂಡಿದ್ದರೆ, ಪರಿಣೀತಿ ಅವರಿಗೆ ರಾಘವ್​ ಚಡ್ಡಾ ಜೊತೆ ಮದುವೆನೇ ಆಗ್ತಿರಲಿಲ್ಲವಂತೆ. ಈ ವಿಷಯವನ್ನು ಅವರು, ರಜತ್​ ಶರ್ಮಾ ಷೋನಲ್ಲಿ ಬಹಿರಂಗಪಡಿಸಿದ್ದಾರೆ.

56
ನಿರ್ಧಾರವೇಕೆ?
Image Credit : Instagram/Parineeti Chopra

ನಿರ್ಧಾರವೇಕೆ?

ಚಮ್ಕಿಲಾ ಚಿತ್ರದಲ್ಲಿ, ಪಾತ್ರವು ಹೆಚ್ಚು ಪ್ರಾಮುಖ್ಯತೆ ಹೊಂದಿತ್ತು ಮತ್ತು ಎ.ಆರ್. ರೆಹಮಾನ್ ಅವರ ಸಂಗೀತದೊಂದಿಗೆ ಕೆಲಸ ಮಾಡುವ ಅವಕಾಶವಿದ್ದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೆ. 'ಆ್ಯನಿಮಲ್' ಚಿತ್ರವು 900 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದರೂ, ನನಗೆ ಸ್ವಲ್ಪವೂ ಬೇಸರವಿಲ್ಲ. ಏಕೆಂದರೆ, 'ಚಮ್ಕಿಲಾ' ಚಿತ್ರದಲ್ಲಿನ ಅಮರ್ಜೋತ್ ಪಾತ್ರ ಸಿಕ್ಕಾಪಟ್ಟೆ ಕೀರ್ತಿ ತಂದುಕೊಟ್ಟಿದೆ ಎಂದರು.

66
ಶೂಟಿಂಗ್​ನಲ್ಲಿ ರಾಘವ್​ ಚಡ್ಡಾ ಭೇಟಿ
Image Credit : Instagram/Parineeti Chopra

ಶೂಟಿಂಗ್​ನಲ್ಲಿ ರಾಘವ್​ ಚಡ್ಡಾ ಭೇಟಿ

ಇದೇ ವೇಳೆ, ಈ ಸಿನಿಮಾ ಶೂಟಿಂಗ್​ ಸಮಯದಲ್ಲಿಯೇ ನಾನು ರಾಘವ್​ ಅವರು ಭೇಟಿಯಾಗಿದ್ದು. ಅಲ್ಲಿಯೇ ಮಾತುಕತೆ ನಡೆದು, ಪ್ರೀತಿ ಮೊಳಗಿ ಮದುವೆಯಾಗಿದ್ದು. ಅನಿಮಲ್​ ಚಿತ್ರ ಒಪ್ಪಿಕೊಂಡಿದ್ದರೆ ಬಹುಶಃ ರಾಘವ್​ ಸಿಗುತ್ತಿರಲಿಲ್ಲ ಎಂದಿದ್ದಾರೆ ನಟಿ ಪರಿಣೀತಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಜೆಪಿ
ಮನರಂಜನಾ ಸುದ್ದಿ
ಟಿವಿ ಶೋ
ಬಾಲಿವುಡ್
ಸಂಬಂಧಗಳು
ಮದುವೆ
ಪ್ರೀತಿ

Latest Videos
Recommended Stories
Recommended image1
ನಾನಾ, ನೀನಾ ಅಂತ ಸ್ಪರ್ಧೆಗೆ ಬಂದಿಲ್ಲ, ನಾವು 15 ವರ್ಷ ಮುಂದಿದ್ದೇವೆ: ಮಮ್ಮುಟ್ಟಿ ಖಡಕ್ ಮಾತು
Recommended image2
Karna Serial: ನಿತ್ಯಾಗೆ ಕರ್ಣನ ಮೇಲೆ ಲವ್​ ಆಗೋಯ್ತು; ನಿಧಿ-ಕರ್ಣ ಮದುವೆಯಾಗಿದ್ದು ಕನಸಾ?
Recommended image3
NTRxNeel ಸಿನಿಮಾ: ಆರ್‌ಆರ್‌ಆರ್‌ ನಂತರ ಜೂ.ಎನ್‌ಟಿಆರ್‌ಗೆ ಶುರುವಾಯ್ತು ಅಸಲಿ ಹೀರೋಯಿಸಂ ಯುಗ!
Related Stories
Recommended image1
Bhagyalakshmi: ಮತ್ತೊಂದು ಮದ್ವೆಯಾದ ಅಮ್ಮನ ಕಂಡ್ರೆ ಗುರ್​ ಎನ್ನೋ ತನ್ವಿ, ಇಲ್ನೋಡಿ ಭರ್ಜರಿ ಸ್ಟೆಪ್​
Recommended image2
ಪವನ್​ ಕಲ್ಯಾಣ್​ಗಾಗಿ ಆ ಜಾಗದಲ್ಲಿ ಅಂದು ಟ್ಯಾಟೂ: ಟೆಕ್ಕಿಗೆ ಇಂದು 10 ಕೋಟಿ ನಾಮ! Bigg Boss ಬ್ಯೂಟಿ ಖತರ್ನಾಕ್​ ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved