ರೂಪಾ ಗಂಗೂಲಿ ಸೇರಿದಂತೆ ಅನುಪಮಾ ಸೀರಿಯಲ್ ನಟನಟಿಯರ ನೆಟ್‌ವರ್ತ್ ಇಷ್ಟೊಂದಾ!
ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿಗಳಲ್ಲಿ ಅನುಪಮಾ ಧಾರವಾಹಿಯೂ ಒಂದು. ಇದರಲ್ಲಿ ನಟಿಸುತ್ತಿರುವ ನಟ ನಟಿಯರ ಆಸ್ತಿ ಎಷ್ಟಿದೆ ಗೊತ್ತಾ? ರೂಪಾಲಿ ಗಂಗೂಲಿಯಿಂದ ಹಿಡಿದು ಸುಧಾಂಶು ಪಾಂಡೆವರೆಗೂ ಎಲ್ಲರ ಆಸ್ತಿಯ ವಿವರ ಇಲ್ಲಿದೆ.

ರೂಪಾಲಿ ಗಂಗೂಲಿ
Rupali Ganguly Net Worth: ರೂಪಾಲಿ ಗಂಗೂಲಿ ಈ ಧಾರಾವಾಹಿಯಲ್ಲಿ ಅನುಪಮಾ ಪಾತ್ರವನ್ನು ಮಾಡ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ 20 ರಿಂದ 25 ಕೋಟಿ ರೂಪಾಯಿ. ಪ್ರತಿ ಎಪಿಸೋಡ್‌ಗೆ ಅವರು 3 ರಿಂದ 3.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಅದ್ರಿಜಾ ರಾಯ್
Adrija Roy Net Worth: ಅನುಪಮಾ ಸೀರಿಯಲ್‌ನಲ್ಲಿಅದ್ರಿಜಾ ರಾಯ್ ಅವರು ರಾಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 2.5 ಕೋಟಿ ರೂಪಾಯಿ.
ಶಿವಂ ಖಜುರಿಯಾ
Shivam Khajuria Net Worthಅನುಪಮಾದಲ್ಲಿ ಪ್ರೇಮ್ ಟಿಕು ಕೊಠಾರಿ ಹೆಸರಿನ ತಮ್ಮ ಪಾತ್ರದಿಂದ ಜನರ ಮನ ಗೆದ್ದಿರುವ ನಟ ಶಿವಂ ಖಜೂರಿಯಾ ಅವರ ಒಟ್ಟು ಆಸ್ತಿ ಮೌಲ್ಯ 2.5 ಕೋಟಿ.
ಗೌರವ್ ಖನ್ನಾ
Gaurav Khanna Net Worth: ಗೌರವ್ ಖನ್ನಾ ಈ ಧಾರಾವಾಹಿಯಲ್ಲಿ ಅನುಜ್ ಪಾತ್ರ್ಕೆದಿಂದ ಹೆಸರುವಾಸಿಯಾಗಿದ್ದಾರೆ. ರೂಪಾಲಿ ಗಂಗೂಲಿ ಜೊತೆ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಜನರಿಗೆ ತುಂಬಾ ಇಷ್ಟವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 7.5 ಕೋಟಿ ರೂಪಾಯಿ.
ಸುಧಾಂಶು ಪಾಂಡೆ
Sudhanshu Pandey Net Worth: ಅನುಪಮಾದಲ್ಲಿ ವನರಾಜ್ ಶಾ ಪಾತ್ರ ಮಾಡುವ ಸುಧಾಂಶು ಪಾಂಡೆಯವರನ್ನು ಜನರು ತುಂಬಾ ಇಷ್ಟಪಡುತ್ತಾರೆ. ಅವರ ಒಟ್ಟು ಆಸ್ತಿ ಮೌಲ್ಯ 21ರಿಂದ 25 ಕೋಟಿ ರೂಪಾಯಿಗಳ ನಡುವೆ ಇದೆ. ಅವರು ಪ್ರತಿ ಎಪಿಸೋಡ್‌ಗೆ ಸುಮಾರು 50,000 ದಿಂದ 1 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಮದಾಲಸ ಶರ್ಮಾ
Madalasa Sharma Net Worth: ಅನುಪಮಾದಲ್ಲಿ ಕಾವ್ಯ ಪಾತ್ರ ಮಾಡುವ ನಟಿ ಮದಾಲಸ ಶರ್ಮಾ ಅವರ ಒಟ್ಟು ಅಸ್ತಿ ಮೌಲ್ಯ 14-20 ಕೋಟಿ. ಪ್ರತಿ ಎಪಿಸೋಡ್‌ಗೆ ಅವರು ಸುಮಾರು 30,000 ರೂಪಾಯಿ ಸಂಭಾವನೆ ಪಡೆಯುತ್ತಾರೆ.