- Home
- Entertainment
- ರಾಮ್ ಚರಣ್ ಜೊತೆ ಡ್ಯಾನ್ಸ್ ಮಾಡಿದ್ರೆ ಸಣ್ಣಗಾಗ್ತೀರಾ: ಶ್ರೀದೇವಿ ಮಗಳು ಹೀಗೆ ಹೇಳೋದಕ್ಕೂ ಕಾರಣವಿದ್ಯಾ?
ರಾಮ್ ಚರಣ್ ಜೊತೆ ಡ್ಯಾನ್ಸ್ ಮಾಡಿದ್ರೆ ಸಣ್ಣಗಾಗ್ತೀರಾ: ಶ್ರೀದೇವಿ ಮಗಳು ಹೀಗೆ ಹೇಳೋದಕ್ಕೂ ಕಾರಣವಿದ್ಯಾ?
ರಾಮ್ ಚರಣ್ ನಾಯಕರಾಗಿ ಮತ್ತು ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿರುವ 'ಪೆದ್ದಿ' ಸಿನಿಮಾ ಜೂನ್ 4 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಬುಚಿ ಬಾಬು ಸನಾ ನಿರ್ದೇಶನದ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಆಕ್ಷನ್, ಡ್ರಾಮಾ, ರೊಮ್ಯಾನ್ಸ್ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಸಖತ್ ವೈರಲ್
ಸೂಪರ್‌ಸ್ಟಾರ್ ರಾಮ್ ಚರಣ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಪೆದ್ದಿ'. ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಜಾನ್ವಿ ಕಪೂರ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸಿನಿಮಾ ಜೂನ್ 4 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಇದೀಗ, ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ಹೇಳಿದ ಮಾತುಗಳು ಸಖತ್ ವೈರಲ್ ಆಗಿವೆ.

ಸಿಂಪಲ್ ವೇಟ್ ಲಾಸ್ ಟಿಪ್
ಯಾರಿಗಾದರೂ ತೂಕ ಇಳಿಸಬೇಕಿದ್ದರೆ ರಾಮ್ ಚರಣ್ ಜೊತೆ ಡ್ಯಾನ್ಸ್ ಮಾಡಿದರೆ ಸಾಕು, ಸೆಟ್‌ನಲ್ಲಿ ಅವರ ಜೊತೆ ಡ್ಯಾನ್ಸ್ ಮಾಡಿದ ಡ್ಯಾನ್ಸರ್‌ಗಳು ಸಣ್ಣಗಾದಂತೆ ನನಗನಿಸಿತು ಎಂದು ಜಾನ್ವಿ ತಮಾಷೆಯಾಗಿ ಹೇಳಿದ್ದಾರೆ. ನಿಮ್ಮೆಲ್ಲರಿಗೂ ಒಂದು ಸಿಂಪಲ್ ವೇಟ್ ಲಾಸ್ ಟಿಪ್ ಕೊಡ್ತೀನಿ. ರಾಮ್ ಚರಣ್ ಸರ್ ಅವರ ಒಂದು ಹಾಡಿಗೆ ಅವರ ಜೊತೆ ಡ್ಯಾನ್ಸ್ ಮಾಡಲು ಟ್ರೈ ಮಾಡಿ. ಒಂದೇ ದಿನ ಬೇಕಾಗಿಲ್ಲ.
ಡ್ಯಾನ್ಸರ್‌ಗಳೆಲ್ಲಾ ಸ್ಲಿಮ್
ಅರ್ಧ ದಿನದಲ್ಲೇ ನಿಮಗೆ ಬದಲಾವಣೆ ಕಾಣಿಸುತ್ತೆ. ನಾವು ಮೂರ್ನಾಲ್ಕು ದಿನ ಹಾಡಿನ ಚಿತ್ರೀಕರಣ ಮಾಡಿದ್ವಿ. ನಾಲ್ಕನೇ ದಿನಕ್ಕೆಲ್ಲಾ ಡ್ಯಾನ್ಸರ್‌ಗಳೆಲ್ಲಾ ಸಣ್ಣಗಾಗಿ, ಸ್ಲಿಮ್ ಆದ ಹಾಗೆ ನನಗನಿಸಿತು ಎಂದು ಜಾನ್ವಿ ಹೇಳಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ 'ಪೆದ್ದಿ' ಎಂಬ ಟೈಟಲ್ ಪಾತ್ರದಲ್ಲಿ ನಟಿಸಿದ್ದಾರೆ. ಬೃಹತ್ ಕ್ಯಾನ್ವಾಸ್‌ನಲ್ಲಿ ತಯಾರಾದ ಈ ಸಿನಿಮಾದಲ್ಲಿ ಆಕ್ಷನ್, ಡ್ರಾಮಾ, ರೊಮ್ಯಾನ್ಸ್ ಮತ್ತು ಥ್ರಿಲ್ ಎಲ್ಲವನ್ನೂ ಅಚ್ಚುಕಟ್ಟಾಗಿ ಹೆಣೆಯಲಾಗಿದೆ.
ಚಿತ್ರದ ಹೈಲೈಟ್ ಏನು?
ಕಥೆಯಲ್ಲಿ ಕ್ರಿಕೆಟ್, ಕುಸ್ತಿ ಮತ್ತು ಓಟದಂತಹ ಕ್ರೀಡೆಗಳಿಗೂ ಪ್ರಮುಖ ಸ್ಥಾನವಿದೆ. ಅಭಿಮಾನಿಗಳನ್ನು ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು ಚಿತ್ರದ ಹೈಲೈಟ್ ಆಗಿರಲಿವೆ. ಈ ಚಿತ್ರಕ್ಕಾಗಿ ರಾಮ್ ಚರಣ್ ಮಾಡಿಕೊಂಡಿರುವ ದೈಹಿಕ ಬದಲಾವಣೆ ಕೂಡ ಸಾಕಷ್ಟು ಗಮನ ಸೆಳೆದಿದೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ಚಿತ್ರದ ನಾಯಕಿ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು
ಬಾಲಿವುಡ್ ನಟ ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೋಮನ್ ಇರಾನಿ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಗ್ಲಿಂಪ್ಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

