- Home
- Entertainment
- ಒಂದು ವರ್ಷ ಪೂರ್ತಿ ಕುಡೀತಿದ್ದೆ, ಮೈಯೆಲ್ಲಾ ಹೆಂಡದ ವಾಸನೆ ಬರ್ತಿತ್ತು: ಜಾನ್ವಿ ಕಪೂರ್ ಶಾಕಿಂಗ್ ಹೇಳಿಕೆ
ಒಂದು ವರ್ಷ ಪೂರ್ತಿ ಕುಡೀತಿದ್ದೆ, ಮೈಯೆಲ್ಲಾ ಹೆಂಡದ ವಾಸನೆ ಬರ್ತಿತ್ತು: ಜಾನ್ವಿ ಕಪೂರ್ ಶಾಕಿಂಗ್ ಹೇಳಿಕೆ
ಕೋವಿಡ್ ಸಮಯದಲ್ಲಿ ಒಂದು ವರ್ಷ ಪೂರ್ತಿ ನಾನು ಕುಡಿಯುತ್ತಿದ್ದೆ. ಆದರೆ, ಅದರಿಂದ ದೇಹದಲ್ಲಿ ಆಗುತ್ತಿದ್ದ ಬದಲಾವಣೆ ಮತ್ತು ಬೆಳಗಿನ ಹ್ಯಾಂಗೋವರ್ ಇಷ್ಟವಾಗದೆ ಆ ಚಟ ಬಿಟ್ಟೆ ಎಂದು ನಟಿ ಜಾನ್ವಿ ಕಪೂರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಶಾಕಿಂಗ್ ಹೇಳಿಕೆ
ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಕುಡಿತದ ಚಟದ ಬಗ್ಗೆ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಕೋವಿಡ್ ಸಮಯದಲ್ಲಿ ಸುಮಾರು ಒಂದು ವರ್ಷಗಳ ಕಾಲ ತಾವು ನಿರಂತರವಾಗಿ ಮದ್ಯಪಾನ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಅದು ಇಷ್ಟವಾಗಲಿಲ್ಲ
ಸಾಮಾನ್ಯವಾಗಿ ಹೆಚ್ಚು ಕುಡಿಯುವ ಅಭ್ಯಾಸ ತಮಗಿರಲಿಲ್ಲ, ಆದರೆ ಕೋವಿಡ್ ಸಂದರ್ಭದಲ್ಲಿ ಮಾತ್ರ ಈ ಚಟಕ್ಕೆ ಬಿದ್ದಿದ್ದೆ. ಆದರೆ, ಕುಡಿತದಿಂದ ದೇಹದಲ್ಲಿ ಆಗುತ್ತಿದ್ದ ಬದಲಾವಣೆಗಳು ತಮಗೆ ಇಷ್ಟವಾಗಲಿಲ್ಲ ಎಂದು ಜಾನ್ವಿ ಹೇಳಿದ್ದಾರೆ.
ಪೂರ್ತಿ ದಿನಾ ಕುಡಿಯುತ್ತಿದ್ದೆ
ನಾನು ಯಾವಾಗ್ಲೂ ಕುಡಿಯೋಳಲ್ಲ. ಎರಡು ತಿಂಗಳಿಗೊಮ್ಮೆ ಕುಡೀತಿದ್ದೆ ಅಷ್ಟೇ. ಆದರೆ ಕೋವಿಡ್ ಟೈಮ್‌ನಲ್ಲಿ ಒಂದು ವರ್ಷ ಪೂರ್ತಿ ದಿನಾ ಕುಡಿಯುತ್ತಿದ್ದೆ. ನಾನೇನು ಅದಕ್ಕೆ ಅಡಿಕ್ಟ್ ಆಗಿದ್ದೆ ಅಂತ ಹೇಳ್ತಿಲ್ಲ, ಆದರೆ ರೆಗ್ಯುಲರ್ ಆಗಿ ಕುಡೀತಿದ್ದೆ.
ಇಷ್ಟ ಆಗ್ತಿರಲಿಲ್ಲ
ನನ್ನ ಜೀವನದ ಅತ್ಯಂತ ಕೆಟ್ಟ ಘಟನೆಯೊಂದರ ನಂತರ ನನಗೆ ಕುಡಿಯಲೇಬೇಕೆಂಬ ಸ್ಥಿತಿ ಬಂದಿತ್ತು. ಅದೇ ಸಮಯದಲ್ಲಿ, ಕುಡಿದ ಮೇಲೆ ನನ್ನ ದೇಹದಲ್ಲಿ ಆಗ್ತಿದ್ದ ಬದಲಾವಣೆಗಳು ನನಗೆ ಇಷ್ಟ ಆಗ್ತಿರಲಿಲ್ಲ ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.
ಕಿರಿಕಿರಿ ಕೊಡ್ತಿತ್ತು
ಬೆಳಗ್ಗೆ ಎದ್ದಾಗ ಆಗ್ತಿದ್ದ ಫೀಲಿಂಗ್ಸ್ ಸರಿ ಇರಲಿಲ್ಲ. ಹ್ಯಾಂಗೋವರ್‌ನಲ್ಲೇ ದಿನ ಶುರುವಾಗ್ತಿತ್ತು. ಅದು ನನಗೆ ತುಂಬಾನೇ ಕಿರಿಕಿರಿ ಕೊಡ್ತಿತ್ತು. ನನ್ನ ಜೀವನದ ವಿಚಿತ್ರ ಹಂತ ಅದಾಗಿತ್ತು. ಬೆಳಗ್ಗೆ ಎದ್ದಾಗ ನನ್ನ ಮೈಯಿಂದ ಒಂದು ರೀತಿ ವಾಸನೆ ಬರ್ತಿತ್ತು.
ವಾಸನೆಯ ಹಾಗೆಯೇ ಇತ್ತು
ಕುಡಿತಕ್ಕೆ ದಾಸನಾಗಿದ್ದ ನನಗೆ ಗೊತ್ತಿದ್ದ ವ್ಯಕ್ತಿಯೊಬ್ಬರ ಮೈಯಿಂದ ಬರ್ತಿದ್ದ ವಾಸನೆಯ ಹಾಗೆಯೇ ಇತ್ತು ಅದು. ಆ ದಿನಗಳು ಚೆನ್ನಾಗಿರಲಿಲ್ಲ ಎಂದು ಜಾನ್ವಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಾಜ್ ಶಮಾನಿ ಅವರೊಂದಿಗಿನ ಸಂದರ್ಶನದಲ್ಲಿ ಜಾನ್ವಿ ಈ ಎಲ್ಲಾ ವಿಚಾರಗಳನ್ನು ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

