ಅದನ್ನ ಕಲಿಯೋದು ತುಂಬಾ ಕಷ್ಟ, ಮತ್ತೆ ಆ ಭಾಷೆಯಲ್ಲಿ ನಟಿಸಲ್ಲ: ಶ್ರೀದೇವಿ ಪುತ್ರಿ ಹೇಳಿಕೆ ವೈರಲ್
ಮಲಯಾಳಂ ಸುಂದರ ಭಾಷೆ, ಆದರೆ ಕಲಿಯೋಕೆ ತುಂಬಾ ಕಷ್ಟ. ಅದಕ್ಕೆ ಮತ್ತೆ ಆ ಭಾಷೆಯಲ್ಲಿ ನಟಿಸೋಕೆ ಇಷ್ಟ ಇಲ್ಲ ಅಂತ ನಟಿ ಜಾನ್ವಿ ಕಪೂರ್ ಹೇಳಿದ್ದಾರೆ. ತಮಿಳು, ತೆಲುಗು ತನಗೆ ಹೆಚ್ಚು ಸುಲಭ ಎನಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

ತುಂಬಾ ಸುಂದರವಾದ ಭಾಷೆ
ನಟಿ ಜಾನ್ವಿ ಕಪೂರ್ ಸದ್ಯಕ್ಕೆ ತಮ್ಮ ಮುಂಬರುವ 'ಪೆದ್ದಿ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ರಾಮ್ ಚರಣ್ ಜೊತೆ ನಟಿಸುತ್ತಿದ್ದಾರೆ. ಈ ನಡುವೆ, ಅವರು ಮಲಯಾಳಂ ಭಾಷೆಯ ಬಗ್ಗೆ ಆಡಿದ ಮಾತುಗಳು ಈಗ ಚರ್ಚೆಗೆ ಬಂದಿವೆ. ಮಲಯಾಳಂ ತುಂಬಾ ಸುಂದರವಾದ ಭಾಷೆ, ಆದರೆ ಅದನ್ನು ಕಲಿಯುವುದು ಬಹಳ ಕಷ್ಟ ಎಂದು ಜಾನ್ವಿ ಹೇಳಿದ್ದಾರೆ.
ಹೆಚ್ಚು ಎಕ್ಸ್‌ಪ್ಲೋರ್ ಮಾಡಬೇಕು
"ಮಲಯಾಳಂ ಭಾಷೆಯನ್ನು ಇನ್ನೊಮ್ಮೆ ಟ್ರೈ ಮಾಡಲು ನನಗೆ ಇಷ್ಟವಿಲ್ಲ. ಯಾಕಂದ್ರೆ ಆ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಅದು ಸುಂದರವಾದ ಭಾಷೆ ಅನ್ನೋದರಲ್ಲಿ ಅನುಮಾನವಿಲ್ಲ. ಆದರೆ, ನನಗೆ ತಮಿಳು ಮತ್ತು ತೆಲುಗು ಭಾಷೆಗಳು ಹೆಚ್ಚು ಸುಲಭ ಎನಿಸುತ್ತವೆ. ಹಾಗಾಗಿ ತೆಲುಗು ಸಿನಿಮಾಗಳಲ್ಲಿ ನಟಿಸುವುದನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ತಮಿಳಿನಲ್ಲಿ ಇನ್ನೂ ಹೆಚ್ಚು ಎಕ್ಸ್‌ಪ್ಲೋರ್ ಮಾಡಬೇಕು ಅನ್ನೋ ಆಸೆ ಇದೆ," ಎಂದು ಜಾನ್ವಿ ತಮ್ಮ ಹೊಸ ಸಿನಿಮಾ 'ಪೆದ್ದಿ'ಯ ಪ್ರಚಾರದ ವೇಳೆ ಹೇಳಿಕೊಂಡಿದ್ದಾರೆ.
ಸಾಕಷ್ಟು ಟ್ರೋಲ್
ಈ ಹಿಂದೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿದ್ದ 'ಪರಂ ಸುಂದರಿ' ಚಿತ್ರದಲ್ಲಿ ಜಾನ್ವಿ ಮಲಯಾಳಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಮಾತನಾಡಿದ್ದ ಮಲಯಾಳಂ ಶೈಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್‌ಗಳು ಮತ್ತು ವಿಮರ್ಶೆಗಳು ಬಂದಿದ್ದವು.
ಆ್ಯಕ್ಷನ್ ದೃಶ್ಯಗಳು ಹೈಲೈಟ್
ಇನ್ನು 'ಪೆದ್ದಿ' ಸಿನಿಮಾ ಬಗ್ಗೆ ಹೇಳುವುದಾದರೆ, ಇದರಲ್ಲಿ ರಾಮ್ ಚರಣ್ ಟೈಟಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಮೆಗಾ ಬಜೆಟ್ ಚಿತ್ರವಾಗಿದ್ದು, ಆ್ಯಕ್ಷನ್, ಡ್ರಾಮಾ, ರೊಮ್ಯಾನ್ಸ್ ಮತ್ತು ಥ್ರಿಲ್ ಎಲ್ಲವನ್ನೂ ಒಳಗೊಂಡಿದೆ. ಕಥೆಯಲ್ಲಿ ಕ್ರಿಕೆಟ್, ಕುಸ್ತಿ ಮತ್ತು ಓಟಕ್ಕೂ ಪ್ರಮುಖ ಸ್ಥಾನವಿದೆ. ಸಿನಿಮಾದ ಆ್ಯಕ್ಷನ್ ದೃಶ್ಯಗಳು ಹೈಲೈಟ್ ಆಗಿರಲಿವೆ ಎನ್ನಲಾಗಿದೆ. ಈ ಚಿತ್ರಕ್ಕಾಗಿ ರಾಮ್ ಚರಣ್ ತಮ್ಮ ದೇಹವನ್ನು ಸಾಕಷ್ಟು ಹುರಿಗೊಳಿಸಿದ್ದು, ಇದು ಕೂಡ ಗಮನ ಸೆಳೆದಿದೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ಚಿತ್ರದ ನಾಯಕಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

