- Home
- Entertainment
- ಅಡ್ವಾನ್ಸ್ ಬುಕಿಂಗ್‌ನಲ್ಲಿ ಜೈಲರ್ 2 ದಾಖಲೆ, ತಮಿಳುನಾಡು ಒಂದರಲ್ಲೇ 10 ಕೋಟಿ ಕಲೆಕ್ಷನ್, ಕರ್ನಾಟಕದಲ್ಲಿ ಎಷ್ಟು?
ಅಡ್ವಾನ್ಸ್ ಬುಕಿಂಗ್‌ನಲ್ಲಿ ಜೈಲರ್ 2 ದಾಖಲೆ, ತಮಿಳುನಾಡು ಒಂದರಲ್ಲೇ 10 ಕೋಟಿ ಕಲೆಕ್ಷನ್, ಕರ್ನಾಟಕದಲ್ಲಿ ಎಷ್ಟು?
ಸೂಪರ್ ಸ್ಟಾರ್ ರಜಿನಿಕಾಂತ್ (Superstar Rajinikanth) ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣ (Shivanna) ಅಭಿನಯದ ಜೈಲರ್ 2 (Jailer 2) ಅಕ್ಟೋಬರ್ 15 ರಂದು ರಿಲೀಸ್ ಆಗಲಿದೆ. ಈಗಾಗಲೇ ಮುಂಗಡವಾಗಿ ನಡೆದ ಬುಕಿಂಗ್ ಪ್ರಕ್ರಿಯೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

10 ಕೋಟಿ ಬಾಚಿಕೊಂಡ ಜೈಲರ್-2
ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಜೈಲರ್ 2 ಸಿನಿಮಾ ರಿಲೀಸ್‌ಗೆ ಕೇವಲ 2 ದಿನ ಮಾತ್ರ ಬಾಕಿ ಇದೆ. ರಿಲೀಸ್‌ಗೂ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ದಳಪತಿ ವಿಜಯ್ ಅವರ ಲಿಯೋ (Leo) ಮತ್ತು The Greatest of All Time (Goat) ಸಿನಿಮಾದ ದಾಖಲೆಗಳನ್ನ ಮುರಿಯುವತ್ತ ದಾಪುಗಾಲು ಇಟ್ಟಿದೆ ಎಂದು ವರದಿಯಾಗಿದೆ.
ಹೌಸ್ ಫುಲ್
ಚೆನ್ನೈನಲ್ಲಿ ಬುಕಿಂಗ್ ಗಣನೀಯವಾಗಿ ಏರಿಕೆ ಆಗಿದೆ. ಟ್ರೇಡ್ ಟ್ರಾಕಲ್ ಸ್ಯಾಕ್ನಿಲ್ಕ್ ವರದಿ ಪ್ರಕಾರ.. ಜೈಲರ್ ಟು ತಮಿಳುನಾಡು ಒಂದರಲ್ಲೇ 10 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇದರಲ್ಲಿ ಬ್ಲಾಟ್ ಮಾಡಲಾದ ಸೀಟುಗಳ ಆದಾಯವೂ ಸೇರಿದೆ. ಮಾಹಿತಿ ಪ್ರಕಾರ ತಮಿಳುನಾಡು ಒಂದರಲ್ಲೇ 3300ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಹೌಸ್ ಫುಲ್ ಆಗಿವೆ. 500ಕ್ಕೂ ಹೆಚ್ಚು ಪ್ರದರ್ಶನಗಳು ಈಗಾಗಲೇ ಮಾರಾಟ ಆಗಿವೆ ಎಂದು ವರದಿಯಾಗಿದೆ.
ಚೆನ್ನೈನಿಂದಲೇ ಹೆಚ್ಚು ಆದಾಯ
ಚೆನ್ನೈನಲ್ಲಿ ಬ್ಲಾಕ್ ಸೀಟುಗಳ ಮೂಲಕವೇ ಚಿತ್ರ ತಂಡಕ್ಕೆ 4.80 ಕೋಟಿ ಹಣ ಹರಿದು ಬಂದಿದೆ. ಇಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಿಗಾಗಿ ಟಿಕೆಟ್ ಬುಕಿಂಗ್ ಆಗಿದೆ. ಅಂದರೆ ಬುಕಿಂಗ್‌ನ ಅರ್ಧದಷ್ಟು ಪಾಲು ಚೆನ್ನೈನಲ್ಲೇ ಆಗಿದೆ.
ಕರ್ನಾಟಕದಲ್ಲಿ ಎಷ್ಟು?
ಕೊಯಮತ್ತೂರಿನಲ್ಲಿ ಒಟ್ಟು ಒಂದ ಕೋಟಿ ರೂಪಾಯಿಗೂ ಹೆಚ್ಚು ಮುಂಗಡ ಬುಕ್ಕಿಂಗ್ ಪಡೆದುಕೊಂಡಿದೆ. ತಿರುಚ್ಚಿ, ಮಧುರೈನಲ್ಲೂ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಭಾರತದಾದ್ಯಂತ ಒಟ್ಟು 21 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಗಳಿಸಿದೆ. ಚಿತ್ರವನ್ನು ಮೊದಲ ದಿನ ನೋಡಲು 10 ಲಕ್ಷ ಟಿಕೆಟ್ ಗಳು ಮಾರಾಟ ಆಗಿವೆ. ಕೇರಳ, ಕರ್ನಾಟಕದಲ್ಲೂ ಹೆಚ್ಚು ಬುಕಿಂಗ್ ಆಗ್ತಿವೆ. ಕೇರಳದಲ್ಲಿ 4.50 ಕೋಟಿ ಹಾಗೂ ಕರ್ನಾಟದಿಂದ 4 ಕೋಟಿ ಗಳಿಸಿರುವ ಬಗ್ಗೆ ವರದಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

