ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ತಿಲಕ್ ವರ್ಮಾ ಅವರ ರನೌಟ್ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬೌಂಡರಿ ಎಂದು ಭಾವಿಸಿ ಕ್ರೀಸ್‌ನತ್ತ ನಡೆದಿದ್ದ ತಿಲಕ್ ಅವರನ್ನು ವಿಂಡೀಸ್ ಆಟಗಾರರು ರನೌಟ್ ಮಾಡುವ ಮೂಲಕ ಕ್ರೀಡಾಸ್ಫೂರ್ತಿ ಮರೆತಿದ್ದಾರೆ. ಈ ಘಟನೆಯು 2011ರಲ್ಲಿ ಎಂಎಸ್ ಧೋನಿ ಅವರು ಇಯಾನ್ ಬೆಲ್ ಅವರನ್ನು ವಾಪಸ್ ಕರೆದಿದ್ದ ಪ್ರಸಂಗವನ್ನು ನೆನಪಿಸಿದೆ.

ಇಂದೋರ್‍‌ನಲ್ಲಿ ನಡೆದ ಭಾರತ ಮತ್ತು ವೆಸ್ಟ್‌ ವಿಂಡೀಸ್ (India vs West Indies) ನಡುವಿನ ಪಂದ್ಯದಲ್ಲಿ ತಿಲಕ್ ವರ್ಮಾ ಅವರ ರನೌಟ್ ವಿವಾದಕ್ಕೆ ಕಾರಣವಾಗಿದೆ. ತಿಲಕ್ ವರ್ಮಾ ಅವರು ರನೌಟ್ ಅಲ್ಲ. ಇಲ್ಲಿ ವಿಂಡೀಸ್ ಧೋನಿಯಂತೆ ಕ್ರೀಡಾ ಸ್ಫೂರ್ತಿಯನ್ನು ಪ್ರದರ್ಶಿಸಬೇಕಾಗಿತ್ತು ಎಂದು ಅಭಿಮಾನಿಗಳು ಟೀಕೆ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ತಿಲಕ್ ವರ್ಮಾ ಅವರ ರನೌಟ್ ಪ್ರಸಂಗ 17ನೇ ಔವರ್‍‌ ನಲ್ಲಿ ನಡೆಯಿತು. 17ನೇ ಓವರ್‍‌ನ 4ನೇ ಎಸೆತದಲ್ಲಿ ಅಕ್ಸರ್ ಪಟೇಲ್ ಲೆಗ್‌ಸೈಡ್‌ಗೆ ಬಾರಿಸಿದ್ದರು. ಆಗ ಬಾಲ್ ಬೌಂಡರಿ ಗಡಿ ದಾಟಿದೆ ಎಂದು ಟೀಂ ಇಂಡಿಯಾ ಬ್ಯಾಟರ್‍‌ಗಳು ಭಾವಿಸಿದ್ದರು. ಆದರೆ ಫೀಲ್ಡರ್ ಆ ಬಾಲ್‌ ಅನ್ನು ಡೈವ್ ಹೊಡೆದು ತಡೆದು ವಿಕೆಟ್ ಕೀಪರ್‍‌ಗೆ ಎಸೆದಿದ್ದರು. ಇಲ್ಲಿ ಬಾಲ್ ಬೌಂಡರಿ ಲೈನ್ ದಾಟಿದೆ ಎಂದು ತಿಳಿದಿದ್ದ ತಿಲಕ್ ವರ್ಮಾ ಮತ್ತು ಅಕ್ಸರ್ ಪಟೇಲ್ ಆರಾಮಾಗಿ ನಡೆದುಕೊಂಡು ಕ್ರೀಸ್‌ಗೆ ಬಂದಿದ್ದರು.

ಆದರೆ ಇನ್ನೊಂದು ಬದಿಯಲ್ಲಿ ಬೇರೆಯದ್ದೇ ಕತೆ ನಡೆಯುತ್ತಿತ್ತು. ಶಾಯಿ ಹೋಪ್ ಅವರು ಫೀಲ್ಡರ್ ಎಸೆದ ಬಾಲ್‌ ಅನ್ನು ಸ್ಟಂಪ್ಡ್ ಮಾಡಿದರು. ಆದರೆ ಅಕ್ಷರ್ ಪಟೇಲ್ ಬ್ಯಾಟ್ ಅನ್ನು ಕ್ರೀಸ್‌ಗೆ ಇಟ್ಟಿರೋದನ್ನು ಗಮನಿಸಿದ ವಿಕೆಟ್ ಕೀಪರ್ ನೇರವಾಗಿ ಬಾಲರ್ ಕೈಗೆ ಬಾಲ್ ಎಸೆದರು. ಬಾಲರ್ ಬೇಲ್ಸ್ ಬೀಳಿಸಿ ನಾನ್‌ ಸ್ಟ್ರೈಕ್‌ನಲ್ಲಿದ್ದ ತಿಲಕ್ ವರ್ಮಾ ಔಟ್‌ಗೆ ಅಪೀಲ್ ಮಾಡಿದರು. ತಿಲಕ್ ವರ್ಮಾ ರನೌಟ್ ಬಗ್ಗೆ ಯಾವುದೇ ಅರಿವು ಇರಲಿಲ್ಲ. ಯಾಕೆಂದರೆ ಬಾಲ್ ಈಗಾಗಲೇ ಡೆಡ್ ಆಗಿದೆ ಅಂದುಕೊಂಡಿದ್ದರು.

ನಂತರ ಮೂರನೇ ಅಂಪೈರ್ ಮರು ಪರಿಶೀಲಿಸಿದಾಗ ಫೀಲ್ಡರ್ ಬಾಲ್ ಬೌಂಡರಿಗೆ ಹೋಗದಂತೆ ತಡೆದಿರೋದು ಗೊತ್ತಾಗಿದೆ. ನಿಯಮಗಳ ಪ್ರಕಾರ ತಿಲಕ್ ವರ್ಮಾ ಔಟ್ ಆಗಿದ್ದರು. ಆದರೆ ಇಲ್ಲಿ ಕೆರಿಬಿಯನ್ ತಂಡ ಯಾವುದೇ ಕ್ರೀಡಾ ಮನೋಭಾವ ಪ್ರದರ್ಶಿಸಲಿಲ್ಲ. 2011ರಲ್ಲಿ ಧೋನಿ ಇಯಾನ್ ಬೆಲ್ ವಿರುದ್ಧ ರನೌಟ್ ಮೇಲ್ಮನವಿ ತೆಗೆದುಕೊಂಡಾಗ ಇದೇ ರೀತಿಯ ಘಟನೆ ನಡೆದಿತ್ತು.

ಜುಲೈ 2011 ರಲ್ಲಿ, ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಇಯಾನ್ ಮಾರ್ಗನ್ ಶಾಟ್ ಹೊಡೆದಾಗ ಇಂಗ್ಲೆಂಡ್ ಬೌಂಡರಿ ಗಳಿಸಿದೆ ಎಂದು ಭಾವಿಸಿದ್ದರು. ಆದರೆ ಫೀಲ್ಡರ್ ಪ್ರವೀಣ್ ಕುಮಾರ್ ಅದನ್ನು ನಿರಾಕರಿಸಿದರು. ಮಾರ್ಗನ್ ಮತ್ತು ಬೆಲ್‌ಗೆ ಇದರ ಬಗ್ಗೆ ತಿಳಿದಿರಲಿಲ್ಲ. ರಿವ್ಯೂ ನಂತರ ಮೂರನೇ ಅಂಪೈರ್ ಬೆಲ್ ಔಟ್ ಎಂದು ಘೋಷಿಸಿದರು. ಆದರೆ ಭಾರತದ ನಾಯಕ ಎಂಎಸ್ ಧೋನಿ ನಂತರ ಮೇಲ್ಮನವಿಯನ್ನು ಹಿಂತೆಗೆದುಕೊಂಡಿದ್ದರು.

Scroll to load tweet…