Rekha Vedavyas: 'ಮುದುಕಿ ಅಂತಾರೆ'.. 41 ಆದ್ರೂ ಮದುವೆಯಾಗದಿರಲು ಇದೇ ಕಾರಣ: ಜಿಂಕೆಮರಿ ರೇಖಾ!
Rekha Vedavyas: ‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಅವರಿಗೆ 41 ವರ್ಷವಾದರೂ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. ತಾವೇಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ಸೀಕ್ರೆಟ್ ಅನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಮೊದಲ ಸಿನಿಮಾದಲ್ಲೇ ಗೆಲುವು
2001ರಲ್ಲಿ ತೆರೆಕಂಡ 'ಆನಂದಂ' ಸಿನಿಮಾ ಹಲವು ಸೆಲೆಬ್ರಿಟಿಗಳಿಗೆ ದೊಡ್ಡ ಬ್ರೇಕ್ ನೀಡಿತ್ತು. ನಿರ್ದೇಶಕ ಶ್ರೀನು ವೈಟ್ಲ ಅವರಿಗೆ ಈ ಚಿತ್ರದ ಮೂಲಕ ಮೊದಲ ಯಶಸ್ಸು ಸಿಕ್ಕಿತು. ನಾಯಕಿ ರೇಖಾ ವೇದವ್ಯಾಸ್ ಅವರಿಗೂ ಇದು ತೆಲುಗಿನಲ್ಲಿ ಮೊದಲ ಚಿತ್ರವಾಗಿತ್ತು. ಮೊದಲ ಸಿನಿಮಾದಲ್ಲೇ ರೇಖಾ ಗೆಲುವು ಕಂಡರು. ಹಾಗೆಯೇ ನಾಯಕ ಆಕಾಶ್ ಕೂಡ 'ಆನಂದಂ' ಚಿತ್ರದ ಮೂಲಕವೇ ಮೊದಲ ಯಶಸ್ಸು ಕಂಡರು. ಹೀಗೆ ಹಲವರ ಬದುಕಿಗೆ ಈ ಸಿನಿಮಾ ದಾರಿ ದೀಪವಾಯಿತು. ನಂತರ ಕಿಚ್ಚ ಸುದೀಪ್, ದರ್ಶನ್, ಗಣೇಶ್ ರೀತಿಯ ನಟರ ಜೊತೆ ತೆರೆ ಹಂಚಿಕೊಂಡಿದ್ದರು. 'ರಾಜ್ ದಿ ಶೋಮ್ಯಾನ್' ಚಿತ್ರದ ಹಾಡೊಂದರಲ್ಲಿ ಅಪ್ಪು ಜೊತೆ ಮಿಂಚಿದ್ದರು. 'ಹುಚ್ಚ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ನಟಿಸಿ ಚಿತ್ರರಂಗ ಪ್ರವೇಶಿಸಿದ್ದರು.
ಅದು ಸಾಧ್ಯವಾಗಲಿಲ್ಲ
ನಟಿ ರೇಖಾ ವೇದವ್ಯಾಸ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ 'ಆನಂದಂ' ಸಿನಿಮಾ ಮತ್ತು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. 'ಆನಂದಂ ಸಿನಿಮಾ ನನ್ನ ಗುರುತು. ಬರೀ ರೇಖಾ ಎಂದರೆ ಯಾರು ಎಂದು ಕೇಳುತ್ತಾರೆ. ಅದೇ ಆನಂದಂ ರೇಖಾ ಎಂದರೆ ತಕ್ಷಣ ಗುರುತಿಸುತ್ತಾರೆ. ನಿಜ ಹೇಳಬೇಕೆಂದರೆ ಆನಂದಂ ಚಿತ್ರಕ್ಕೆ ಉದಯ್ ಕಿರಣ್ ನಾಯಕರಾಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ' ಎಂದರು.
ದೇವರು ಸೃಷ್ಟಿಸಿದ ಗ್ಯಾಪ್
ಇದು ಮಾತ್ರವಲ್ಲ, ಉದಯ್ ಕಿರಣ್ ಜೊತೆ ನಟಿಸುವ ಮತ್ತೊಂದು ಅವಕಾಶವನ್ನೂ ಕಳೆದುಕೊಂಡೆ. ಉದಯ್ ಕಿರಣ್ಗೆ ನಾನೇ ನಾಯಕಿಯಾಗಬೇಕಿತ್ತು. ಅದೂ ಕೂಡ ಮಿಸ್ ಆಯಿತು ಎಂದು ರೇಖಾ ತಿಳಿಸಿದರು. ನಟಿಯಾಗಿ ಇಷ್ಟು ದೊಡ್ಡ ಗ್ಯಾಪ್ ಏಕೆ ತೆಗೆದುಕೊಂಡಿರಿ ಎಂಬ ಪ್ರಶ್ನೆಗೆ, 'ನಾನು ಗ್ಯಾಪ್ ತೆಗೆದುಕೊಂಡಿಲ್ಲ. ಅದು ದೇವರು ಸೃಷ್ಟಿಸಿದ ಗ್ಯಾಪ್. ನಾವು ಒಂದು ಪ್ಲಾನ್ ಮಾಡಿದರೆ, ದೇವರು ಮತ್ತೊಂದನ್ನು ಪ್ಲಾನ್ ಮಾಡುತ್ತಾನೆ' ಎಂದು ರೇಖಾ ಹೇಳಿದರು.
ಇಂಡಸ್ಟ್ರಿಯ ಬೆಂಬಲ ಬೇಕು
ತಾನು ಮತ್ತೆ ಟಾಲಿವುಡ್‌ನಲ್ಲಿ ನಟಿಯಾಗಿ ಮಿಂಚಬೇಕು ಎಂದು ರೇಖಾ ಆಸೆ ವ್ಯಕ್ತಪಡಿಸಿದರು. 'ಅದಕ್ಕೆ ನನಗೆ ನಮ್ಮ ಇಂಡಸ್ಟ್ರಿಯ ಬೆಂಬಲ ಬೇಕು' ಎಂದು ರೇಖಾ ಮನವಿ ಮಾಡಿದರು. ಸದ್ಯ ರೇಖಾಗೆ 41 ವರ್ಷ. ಆದರೂ ಅವರು ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. 'ಇನ್ನೂ ಯಾಕೆ ಮದುವೆಯಾಗಿಲ್ಲ' ಎಂದು ಕೇಳಿದಾಗ, 'ಭಾರತದಲ್ಲಿ ಸಲ್ಮಾನ್ ಖಾನ್ ಮತ್ತು ನಾನು ಮಾತ್ರ ಸಿಂಗಲ್ ಆಗಿ ಉಳಿದುಬಿಡುತ್ತೇವೆ' ಎಂದು ನಗುತ್ತಾ ಉತ್ತರಿಸಿದರು.
ತುಂಬಾ ನೋವಾಗುತ್ತದೆ
ಮದುವೆಗೆ ಸರಿಯಾದ ಹುಡುಗ ಸಿಗುತ್ತಿಲ್ಲ ಎಂದು ರೇಖಾ ಹೇಳಿದರು. 'ಯಾರನ್ನಾದರೂ ಪ್ರೀತಿಸಿದ್ದೀರಾ' ಎಂದು ಕೇಳಿದ್ದಕ್ಕೆ, 'ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ, ಆದರೆ ಆ ವಿಷಯವನ್ನು ಅವನಿಗೆ ಹೇಳಲಿಲ್ಲ. ಯಾರನ್ನಾದರೂ ಇಷ್ಟಪಟ್ಟರೆ ಸರಿಯಾದ ಸಮಯದಲ್ಲಿ ಪ್ರಪೋಸ್ ಮಾಡಿ. ನನ್ನ ಹಾಗೆ ಸುಮ್ಮನಿರಬೇಡಿ' ಎಂದರು. 'ನಮ್ಮ ಸಮಾಜದಲ್ಲಿ ಹುಡುಗಿಗೆ ಒಂದು ವಯಸ್ಸು ದಾಟಿದರೆ ಆಂಟಿ, ಮಮ್ಮಿ ಅಂತಾರೆ. ನಿಜ ಹೇಳಬೇಕಂದ್ರೆ ಮುದುಕಿ ಅಂತಾರೆ. ಮಹಿಳೆಯರನ್ನು ಹಾಗೆ ನೋಡಿದಾಗ ತುಂಬಾ ನೋವಾಗುತ್ತದೆ' ಎಂದು ರೇಖಾ ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

